Advertisement

Chadachan ಪ.ಪಂ: 16ರಲ್ಲಿ 8 ಸ್ಥಾನ ಗೆದ್ದ ಬಿಜೆಪಿ; 4 ಸ್ಥಾನಗಳಲ್ಲಿ ಪಕ್ಷೇತರರ ವಿಜಯ

10:48 AM Dec 30, 2023 | keerthan |

ವಿಜಯಪುರ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ, ಉಪ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ಪ್ರಕಟವಾಗಿದ್ದು, ಚಡಚಣ ಪಟ್ಟಣ ಪಂಚಾಯತ್ ನ 16 ಸ್ಥಾನಗಳಲ್ಲಿ 8 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಹತ್ತಿರ ಸಾಗಿದೆ.

Advertisement

ಚಡಚಣ ಪಟ್ಟಣ ಪಂಚಾಯತ್ 16 ಸ್ಥಾನಗಳಲ್ಲಿ ಬಿಜೆಪಿ 8 ಸ್ಥಾನ ಗೆಲ್ಲುವ ಮೂಲಕ ಹೆಚ್ಚು ಸ್ಥಾನ ಗೆದ್ದ ಪಕ್ಷವಾಗಿದೆ. ಉಳಿದಂತೆ 4 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿದ್ದರೆ, 4 ವಾರ್ಡ್ ಗಳಲ್ಲಿ ಪಕ್ಷೇತರರು ವಿಜಯ ಸಾಧಿಸಿದ್ದಾರೆ.

ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣ ಪಂಚಾಯತನ ವಾರ್ಡ್ ನಂ.7 ಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯ ಸಾಧಿಸಿದ್ದಾರೆ.

ಮುದ್ದೇಬಿಹಾಳ ಪುರಸಭೆಯ ವಾರ್ಡ್ ನಂ‌ 18 ಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next