ಬೆಂಗಳೂರು: ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ಹೊರಡಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯುಜಿ ನೀಟ್ ಮತ್ತು ಪಿಜಿ ಸಿಇಟಿ ದಾಖಲಾತಿ ಪರಿಶೀಲನೆಯನ್ನು ಮರು ನಿಗದಿ ಮಾಡಿದೆ.
ರಾಜ್ಯದಲ್ಲಿ ಜ.8 ಮತ್ತು 9ರಂದು ವಾರಾಂತ್ಯ ಕರ್ಫ್ಯೂ ಇರುವುದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಆ ಎರಡು ದಿನಗಳು ನಡೆಸಬೇಕಿದ್ದ ದಾಖಲಾತಿ ಪರಿಶೀಲನೆಯನ್ನು ಮರು ನಿಗದಿ ಮಾಡಿದೆ.
ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ ಪ್ರವೇಶಾತಿಗಾಗಿ ಜ.8ರಂದು ನಡೆಯಬೇಕಿದ್ದ ಯುಜಿನೀಟ್ ದಾಖಲಾತಿ ಪರಿಶೀಲನೆಯನ್ನು ಜ.14ರಂದು ಮರು ನಿಗದಿ ಮಾಡಲಾಗಿದೆ. ಜ.8ರಂದು ಹಾಜರಾಗಿದ್ದ ಅಭ್ಯರ್ಥಿಗಳು ಜ.14ರಂದು ಬೆಂಗಳೂರು ಕೇಂದ್ರದಲ್ಲಿ ಹಾಜರಾಗುವಂತೆ ಸೂಚಿಸಲಾಗಿದೆ.
10ರಂದು ಪಿಜಿಸಿಇಟಿ: ಅದೇ ರೀತಿ ಜ.8ರಂದು ನಡೆಯಬೇಕಿದ್ದ ಎಂ.ಬಿಎ., ಎಂಸಿಎ, ಎಂಇ/ಎಂಟೆಕ್ ಕೋರ್ಸ್‌ಗಳ ಪಿಜಿಸಿಇಟಿ ದಾಖಲಾತಿ ಪರಿಶೀಲನೆಯನ್ನು ಜ.10ರಂದು ಮರು ನಿಗದಿ ಮಾಡಲಾಗಿದೆ. ಈಗಾಗಲೇ ಪ್ರಕಟಿಸಿರುವ ಸಹಾಯಕ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಹಾಜರಾಗಲು ಸೂಚಿಸಲಾಗಿದೆ. ಈ ವೇಳಾಪಟ್ಟಿಯನ್ನು ಮತ್ತೆ ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ. ಸಂಬಂಧಪಟ್ಟ ಅಭ್ಯರ್ಥಿಗಳು ಗೊಂದಲ ಮಾಡಿಕೊಳ್ಳದೆ, ನಿಗದಿತ ದಿನಾಂಕಗಳಂದು ಹಾಜರಾಗುವಂತೆ ಕೆಇಎ ತಿಳಿಸಿದೆ.
ಇದನ್ನೂ ಓದಿ : ಕೂಲಿ ಕಾರ್ಮಿಕರ ಮೇಲೆ ಗ್ರಾ.ಪಂ. ಅಧ್ಯಕ್ಷೆಯ ಪತಿಯಿಂದ ದಬ್ಬಾಳಿಕೆ : ರಕ್ಷಣೆ ನೀಡುವಂತೆ ಮನವಿ