ನವದೆಹಲಿ: ಭಾರತದ ಸಾಮಾನ್ಯ, ತಾಲೂಕುಮಟ್ಟದ ಪಟ್ಟಣಗಳಿಗೂ ಇನ್ನು ದುಬಾರಿ, ಅತ್ಯಾಧುನಿಕ ಸಂಶೋಧನಾ ಉಪಕರಣಗಳು ಲಭ್ಯವಾಗಲಿವೆ.
ಇಂತಹದ್ದೊಂದು ಆಶಾಭಾವನೆ ಮೂಡಲಿಕ್ಕೆ ಕಾರಣ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಬಿಡುಗಡೆ ಮಾಡಿರುವ ಮಾರ್ಗದರ್ಶಿ ಸೂತ್ರಗಳು. Scientific Research Infrastructure Sharing Maintenance and Networks (SRIMAN) ಶ್ರೀಮಾನ್ ಹೆಸರಿನಲ್ಲಿ ಸಚಿವ ಜಿತೇಂದ್ರ ಸಿಂಗ್ ಈ ಸೂತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ಅವುಗಳ ಪ್ರಕಾರ ಸರ್ಕಾರಿ ಅಧೀನದ ವೈಜ್ಞಾನಿಕ ಸಂಸ್ಥೆಗಳು, ಅತ್ಯಾಧುನಿಕ ಉಪಕರಣಗಳನ್ನು ಕಡಿಮೆಬೆಲೆಯಲ್ಲಿ ಸಣ್ಣಸಣ್ಣ ಪಟ್ಟಣಗಳಿಗೂ ಸಿಗುವಂತೆ ಮಾಡಬೇಕು. ಇದಕ್ಕಾಗಿ ಈ ಸಂಸ್ಥೆಗಳು ಎಷ್ಟು ಪರಿಶ್ರಮ ಪಡುತ್ತವೆ ಎನ್ನುವುದನ್ನು ಆಧರಿಸಿ ಅವುಗಳಿಗೆ ರೇಟಿಂಗ್ ನೀಡಲಾಗುತ್ತದೆ. ಈ ಅತ್ಯಾಧುನಿಕ, ದುಬಾರಿ ಉಪಕರಣಗಳನ್ನು ಜನರು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಹೊಸ ಆವಿಷ್ಕಾರಗಳು ನಡೆಯಬೇಕು ಎನ್ನುವುದು ಸರ್ಕಾರದ ಉದ್ದೇಶ.
ಅಷ್ಟು ಮಾತ್ರವಲ್ಲ ಇಂತಹ ಉಪಕರಣಗಳನ್ನು ಸ್ಥಳೀಯವಾಗಿಯೇ ತಯಾರಿಸುವ ಶಕ್ತಿ ಬರಬೇಕು. ಇದಕ್ಕೆ ಪೂರಕವಾಗಿ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಸ್ಟಾರ್ಟಪ್‌ಗ್ಳನ್ನು ಆರಂಭಿಸಬೇಕು ಎನ್ನುವುದು ಕೇಂದ್ರದ ಬಯಕೆ.