ನವ ದೆಹಲಿ : ಇನ್ಮುಂದೆ ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರಗಳಿಗೆ ಉಚಿತ ಲಸಿಕೆ ನೀಡಲಿದೆ. ರಾಜ್ಯ ಸರ್ಕಾರಗಳ ಲಸಿಕೆ ಬೇಡಿಕೆಗಳನ್ನು ಕೇಂದ್ರ ಈಡೇರಿಸಲಿದೆ. ಮುಂದಿನ ಎರಡು ವಾರಗಳ ನಂತರ ಲಸಿಕೆಯನ್ನು ನೀಡಲಿದೆ. ರಾಜ್ಯಗಳಿಗೆ ಹಸ್ತಾಂತರಿಸಿದ ಶೇಕಡಾ 25 ರಷ್ಟು ವ್ಯಾಕ್ಸಿನೇಷನ್ ಸಂಗ್ರಹವನ್ನು ಮುಂದೆ ಕೇಂದ್ರ ಸರ್ಕಾರ ವಹಿಸಿಕೊಳ್ಳಲಿದೆ ಎಂದು ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಹೇಳಿದ್ದಾರೆ.
18 ರಿಂದ 44 ವರ್ಷ ವಯಸ್ಸಿನ ಪ್ರತಿಯೊಬ್ಬರಿಗೂ ಕೋವಿಡ್ -19 ಲಸಿಕೆಗಳನ್ನು ಖರೀದಿಸಲು ಮತ್ತು ಅವುಗಳನ್ನು ರಾಜ್ಯಗಳಿಗೆ ಉಚಿತವಾಗಿ ಪೂರೈಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. “ಭಾರತವು ಕೋವಿಡ್ ನನ್ನು ಸೋಲಿಸುತ್ತದೆ” ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ : ಬೆಳಗಾವಿ :ಚಿನ್ನ ಎಗರಿಸಿದ ಪ್ರಕರಣದ ಕಿಂಗ್ ಪಿನ್ ಕಿರಣ್ ಮೇಲೆ ಮತ್ತೊಂದು ದೂರು ದಾಖಲು
ಮೇ ತಿಂಗಳಲ್ಲಿ, ಕೇಂದ್ರವು ಪರಿಷ್ಕೃತ ಲಸಿಕೆ ಖರೀದಿ ನೀತಿಯನ್ನು ಹೊರಡಿಸಿತ್ತು, ಉತ್ಪಾದಕರಿಂದ ನೇರವಾಗಿ ಲಸಿಕೆಗಳನ್ನು ಶೇಕಡಾ 25 ರಷ್ಟು ಖರೀದಿಸಲು ರಾಜ್ಯಗಳಿಗೆ ಅವಕಾಶ ಮಾಡಿಕೊಟ್ಟಿತು. ಉಳಿದ 75 ಶೇಕಡಾ ಲಸಿಕೆಗಳಲ್ಲಿ 50 ರಷ್ಟು ಲಸಿಕೆಗಳನ್ನು ಕೇಂದ್ರ ಸಂಗ್ರಹಣೆಗಾಗಿ ಮತ್ತು ಉಳಿದ 25 ಶೇಕಡಾ ಖಾಸಗಿ ಆಸ್ಪತ್ರೆಗಳಿಗೆ ಖರೀದಿಸಲು ಅವಕಾಶ ನೀಡಿತ್ತು.
ದೇಶದ ಯಾವ ರಾಜ್ಯ ಸರ್ಕಾರವು ಲಸಿಕೆಗಳಿಗಾಗಿ ಏನನ್ನೂ ಖರ್ಚು ಮಾಡಬೇಕಾಗಿಲ್ಲ. ಇನ್ಮುಂದೆ ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರಗಳಿಗೆ ಉಚಿತ ಲಸಿಕೆ ನೀಡಲಿದೆ. ಸದ್ಯ ದೇಶದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಉಚಿತ ಲಸಿಕೆಗಳನ್ನು ಪಡೆಯುತ್ತಿದ್ದರು. ಆದರೇ, ಈಗ ಜೂನ್ 21 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ದೇಶದ ಎಲ್ಲಾ ನಾಗರಿಕರಿಗೆ ಉಚಿತ ಲಸಿಕೆಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ.
ಇದನ್ನೂ ಓದಿ : ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಬೆಲೆ 150 ರೂ. ನಿಗದಿಪಡಿಸಲಾಗಿದೆ: ಪ್ರಧಾನಿ ಮೋದಿ