Advertisement

ಇನ್ನು 8-9 ತಿಂಗಳಲ್ಲಿ ನೂತನ ಸಹಕಾರ ನೀತಿ: ಅಮಿತ್‌ ಶಾ

10:13 PM Apr 12, 2022 | Team Udayavani |

ನವದೆಹಲಿ: ಇನ್ನು 8-9 ತಿಂಗಳಲ್ಲಿ ನೂತನ ರಾಷ್ಟ್ರೀಯ ಸಹಕಾರ ನೀತಿ ಸಿದ್ಧಗೊಳ್ಳಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Advertisement

ಸಂಬಂಧಪಟ್ಟವರು ಈ ಬಗ್ಗೆ ಸಚಿವಾಲಯ ವೆಬ್‌ಸೈಟ್‌ನಲ್ಲಿ ಸಲಹೆಗಳನ್ನು ನೀಡಬಹುದು ಎಂದು ತಿಳಿಸಿದ್ದಾರೆ.

ಅಲ್ಲಿಗೆ ಇಡೀ ದೇಶದಲ್ಲಿ ಏಕರೂಪದ ಸಹಕಾರ ತತ್ವವೊಂದು ಜಾರಿಯಾಗುವ ದಿನಗಳು ಹತ್ತಿರವಾಗಿವೆ ಎಂಬ ಸೂಚನೆಯನ್ನು ಶಾ ರವಾನಿಸಿದ್ದಾರೆ.

ಇದನ್ನೂ ಓದಿ:ಬಾಲಿವುಡ್‌ನ‌ ಆಲಿಯಾ ಭಟ್‌ -ರಣಬೀರ್‌ ಕಪೂರ್‌ ಮದುವೆ ಮುಂದೂಡಿಕೆ?

ಸಹಕಾರ ತತ್ವದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಗಳ ಸಹಕಾರ ಸಂಘಗಳ ಕಾರ್ಯಪದ್ಧತಿಯಲ್ಲಿ ಮೂಗುತೂರಿಸಲು ಕೇಂದ್ರ ಬಯಸುವುದಿಲ್ಲ. ಆದರೆ ಪರಸ್ಪರ ಮಾತುಕತೆ ಮತ್ತು ಸಹಕಾರದ ಮೂಲಕ ನಿಯಮಗಳಲ್ಲಿ ಒಂದು ಏಕರೂಪತೆ ತರಲು ಶ್ರಮಿಸಲಾಗುವುದು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next