ನವ ದೆಹಲಿ : ಸಾವಿರಾರು ಕಿಲೋಮೀಟರ್ ಭಾರತದ ಭೂಮಿಯನ್ನು ಚೀನಾಕ್ಕೆ ಮೋದಿ ಸರ್ಕಾರ ಬಿಟ್ಟುಕೊಟ್ಟಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.
ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಟ್ವೀಟ್ ಮಾಡಿರುವ ಗಾಂಧಿ, ಮೋದಿ ಮತ್ತು ಅವರ ಗುಲಾಮರು ಸಾವಿರಾರು ಕಿಲೋಮೀಟರ್ ಭಾರತೀಯ ಭೂಮಿಯನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ. ಯಾವಾಗ ನಾವದನ್ನು ವಾಪಸ್ ಪಡೆಯುತ್ತೇವೆ ?” ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ : ಅಂದು ಶಿವಮೊಗ್ಗ ಪ್ರಾಂತ್ಯದಲ್ಲಿ ಶ್ರೀಮಂತರು, ಬ್ರಿಟಿಷರಿಗೆ ದುಸ್ವಪ್ನವಾಗಿದ್ದ ರಾಬಿನ್ ಹುಡ್ ಕನ್ನೇಶ್ವರ ರಾಮ!
ಇನ್ನು, ಚೀನಾದ ಎಲ್ ಎ ಸಿ ಅಥವಾ ಗಡಿ ನಿಯಂತ್ರಣ ರೇಖೆಯ ಮೋಲ್ಡೋದಲ್ಲಿ ಶನಿವಾರ ಸಂಜೆ 7.30 ಕ್ಕೆ, ಹನ್ನೆರಡನೇ ಸುತ್ತಿನ ಮಾತುಕತೆಗಳು ನಡೆದಿವೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ. ಒಂಬತ್ತು ಗಂಟೆಗಳ ಸಭೆಗಳಲ್ಲಿ, ಪೂರ್ವದ ಲಡಾಖ್ ಜೊತೆಗೆ ನಡೆಯುತ್ತಿರುವ ಮಿಲಿಟರಿ ಬಿಕ್ಕಟ್ಟನ್ನು ಪರಿಹರಿಸಲು ಉಭಯ ದೇಶದಗಳ ಸೇನಾಧಿಕಾರಿಗಳು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವ್ಯಾಪಕ ಮಾತುಕತೆಯ ನಂತರ ಭಾರತ ಮತ್ತು ಚೀನಾ ಈಗಾಗಲೇ ಪಾಂಗಾಂಗ್ ಸರೋವರದ ದಡದಿಂದ ಬೇರ್ಪಟ್ಟಿವೆ. ಕಳೆದ ವರ್ಷ ಇದು ಹಲವಾರು ಚೀನೀ ಮತ್ತು ಭಾರತೀಯ ಸೈನಿಕರ ಸಾವಿಗೆ ಕಾರಣವಾಯಿತು. ಘರ್ಷಣೆಯಲ್ಲಿ ಭಾರತವು 20 ಸೈನಿಕರನ್ನು ಕಳೆದುಕೊಂಡಿದೆ ಎಂದು ಘೋಷಿಸಿದರೂ, ಚೀನಿಯರು ತನ್ನ ಮೃತಪಟ್ಟ ಸೈನಿಕರ ಸಂಖ್ಯೆಯನ್ನು ಇನ್ನೂ ಒಪ್ಪಿಕೊಂಡಿಲ್ಲ.
ಇದನ್ನೂ ಓದಿ : ಕಾಣಿಪಾಕಂನ ವರಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ ಡಿ ಕೆ ಶಿವಕುಮಾರ್