Advertisement

ಎರಡು ವರ್ಷದ ಬಳಿಕ ಕೇರಳದಲ್ಲಿ ಮತ್ತೆ ನಿಫಾ ಸೋಂಕಿನ ಲಕ್ಷಣ : 12 ವರ್ಷದ ಬಾಲಕ ಸಾವು

01:26 PM Sep 05, 2021 | Team Udayavani |

ಕೋಝಿಕೋಡ್ : ಎರಡು ವರ್ಷದ ಬಳಿಕ ಕೇರಳದಲ್ಲಿ ನಿಫಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು ಅದರಂತೆ ಕೇರಳದ ಆಸ್ಪತ್ರೆಯೊಂದರಲ್ಲಿ ಹನ್ನೆರಡು ವರ್ಷದ ಬಾಲಕನೋರ್ವ ಸಾನ್ನಪ್ಪಿದ್ದಾನೆ, ಪುಣೆಯಿಂದ ಬಂದ ಈತನ ವೈದ್ಯಕೀಯ ವರದಿಯಲ್ಲಿಯೂ ನಿಫಾ ಸೋಂಕು ತಗಲಿರುವುದು ದೃಢಪಟ್ಟಿದೆ.

Advertisement

ಮೂರು ದಿನಗಳ ಹಿಂದೆ ಬಾಲಕನಿಗೆ ಜ್ವರ ಕಾಣಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಆಸ್ಪತೆಗೆ ದಾಖಲಿಸಲಾಗಿತ್ತು, ಆದರೆ ಜ್ವರ ಹೆಚ್ಚಾದ ಪರಿಣಾಮ ಬಾಲಕ ಸಾವನ್ನಪ್ಪಿದ್ದಾನೆ, ಬಾಲಕನಲ್ಲಿ ನಿಫಾ ಸೋಂಕಿನ ಲಕ್ಷಣಗಳು ಇದ್ದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಿದ್ದು ವರದಿಯಲ್ಲಿ ದೃಢ ಪಟ್ಟಿದೆ.

ಕೇರಳದಲ್ಲಿ ನಿಫಾ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರದ ತಂಡ ಆಗಮಿಸಿದ್ದು ಈ ಕುರಿತು ಅಧ್ಯಯನ ನಡೆಸುತ್ತಿದ್ದಾರೆ.

ಇದನ್ನೂ ಓದಿ :700 ತಾಲಿಬಾನ್ ಉಗ್ರರನ್ನು ಕೊಂದು, 600 ಉಗ್ರರನ್ನು ಸೆರೆಹಿಡಿದ ಪಂಜ್ ಶೀರ್ ಯೋಧರು

Advertisement

Udayavani is now on Telegram. Click here to join our channel and stay updated with the latest news.

Next