ನವದೆಹಲಿ: ಚುನಾವಣಾ ಬಾಂಡ್‌ಗಳ ವಿಚಾರವಾಗಿ, ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದವರಿಗೆ ಪೂರ್ಣ ಮಾಹಿತಿ ನೀಡಿರುವುದಾಗಿ ಛಾಪಾ ಕಾಗದದ ಮೇಲೆ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ (ಸಿಇಸಿ) ಬುಧವಾರ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಸೂಚಿಸಿದೆ.
ಅಲ್ಲದೆ, ಮತ್ತೇನೂ ಮಾಹಿತಿ ನೀಡುವುದು ಬಾಕಿ ಉಳಿದಿಲ್ಲ ಎಂಬ ವಿಚಾರವನ್ನೂ ಛಾಪಾ ಕಾಗದದಲ್ಲಿ ಉಲ್ಲೇಖಿಸುವಂತೆ ಸಿಐಸಿ ಸೂಚಿಸಿದೆ.
ನೌಕಾಪಡೆಯ ನಿವೃತ್ತ ಅಧಿಕಾರಿ ಲೋಕೇಶ್ ಬಾತ್ರಾ ಎಂಬುವರು ಕೆಲ ದಿನಗಳ ಹಿಂದೆ ಇಸಿಇಗೆ ಅರ್ಜಿ ಸಲ್ಲಿಸಿ 2017ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಸಲ್ಲಿಸಿರುವ ದಾಖಲೆಗಳು, ಅಂಕಿ-ಅಂಶಗಳನ್ನು ನೀಡಬೇಕೆಂದು ಕೋರಿದ್ದರು.
ಇದನ್ನೂ ಓದಿ:ಪವಾರ್ ವಿರುದ್ಧ ಪೋಸ್ಟ್ ಮಾಡಿದ್ದ ನಟಿಗೆ ಜಾಮೀನು; ಜೈಲಿನಿಂದ ಬಿಡುಗಡೆ
ಇದಕ್ಕೆ ಪೂರಕವಾಗಿ, ಸಿಇಸಿ ಕೊಟ್ಟಿದ್ದ ಮಾಹಿತಿಯಲ್ಲಿ ಕೆಲವು ದಾಖಲೆಗಳಿಲ್ಲ ಎಂದು ಲೋಕೇಶ್ ಆರೋಪಿಸಿದ್ದರು. ಇದನ್ನು ಚುನಾವಣಾ ಆಯೋಗ ಅಲ್ಲಗಳೆದಿತ್ತು. ಹಾಗಾಗಿ, ಲೋಕೇಶ್ ಸಿಐಸಿ ಮೊರೆ ಹೋಗಿದ್ದರು.