Advertisement

ಅಗ್ನಿ ದುರಂತ; ಕುವೈಟ್‌ಗೆ ತೆರಳಲು ಸಚಿವೆಗೆ ಕೇಂದ್ರ ಅಡ್ಡಿ: ಕೇರಳ ಸಿಎಂ

01:19 AM Jun 15, 2024 | Team Udayavani |

ಕೊಚ್ಚಿ: ಕುವೈಟ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಸಚಿವೆ ವೀಣಾ ಜಾರ್ಜ್‌ರನ್ನು ಆ ದೇಶಕ್ಕೆ ತೆರಳಲು ಕೇಂದ್ರ ಸರಕಾರ‌ ಅವಕಾಶ ಕೊಟ್ಟಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ದೂರಿದ್ದಾರೆ. ಕೊಚ್ಚಿಗೆ ಆಗ ಮಿಸಿದ 24 ಮೃತದೇಹಗಳನ್ನು ಸ್ವೀಕರಿಸಿ, ಗೌರವ ನಮನ ಸಲ್ಲಿಸಿದ ಬಳಿಕ ಸಿಎಂ ಈ ಆರೋಪ ಮಾಡಿದ್ದಾರೆ. ಕೇರಳ ಕಾಂಗ್ರೆಸ್‌ ಘಟಕವೂ ಬೆಂಬಲ ನೀಡಿದೆ.

Advertisement

ಆದರೆ ಆರೋಪವನ್ನು ಕೇಂದ್ರ ಸಚಿವ ಸುರೇಶ್‌ ಗೋಪಿ ಮತ್ತು ರಾಜ್ಯಪಾಲ ಆರಿಫ್ ಮೊಹಮ್ಮದ್‌ ತಿರಸ್ಕರಿಸಿದ್ದಾರೆ. ಕೇಂದ್ರದಲ್ಲಿ ಸುಭದ್ರವಾಗಿರುವ ಸರಕಾರ‌ ಪರಿಸ್ಥಿತಿಯನ್ನು ಯಶಸ್ವಿಯಾಗಿಯೇ ನಿಭಾಯಿಸಿದೆ ಎಂದು ಕೇಂದ್ರ ಸಚಿವ ಸುರೇಶ್‌ ಗೋಪಿ ಹೇಳಿದ್ದಾರೆ. ಇದಕ್ಕೆ ರಾಜಕೀಯ ಬೆರೆಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಜಿಗಿದು ಬದುಕಿದ ನಳಿನಾಕ್ಷನ್‌
ಬೆಂಕಿ ದುರಂತದಲ್ಲಿ ಪಾರಾದ ಕೇರಳದ ನಳಿನಾಕ್ಷನ್‌ ಟಿ.ವಿ. ಎಂಬ ವರು 3ನೇ ಮಹಡಿಯಿಂದ ಜಿಗಿದು ಬದುಕಿದ್ದಾರೆ. ಹೀಗಾಗಿ ಅವರ ಕಾಲುಗಳು, ಪಕ್ಕೆಲುಬುಗಳು ಮುರಿ ದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಅವರ ಸಹೋದರ ರಾಜೀವ್‌ ಟಿ.ವಿ. ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next