Advertisement

Kuwait ಅಗ್ನಿ ದುರಂತ: ಮದುವೆ ನಿಗದಿಯಾಗಿದ್ದ ಬಿಹಾರದ ಯುವಕ ನಾಪತ್ತೆ, ಆತಂಕದಲ್ಲಿ ಕುಟುಂಬ

12:55 PM Jun 14, 2024 | Team Udayavani |

ಬಿಹಾರ: ಕುವೈತ್‌ನಲ್ಲಿ ನಡೆದ ಭೀಕರ ಅಗ್ನಿ ಅವಘಡದ ಬಳಿಕ ಅದೇ ಕಟ್ಟಡದಲ್ಲಿ ವಾಸವಿದ್ದ ಬಿಹಾರದ ಯುವಕನೊಬ್ಬ ನಾಪತ್ತೆಯಾಗಿದ್ದು ಕುಟುಂಬ ಸದಸ್ಯರು ಆತಂಕಗೊಂಡಿದ್ದಾರೆ.

Advertisement

ಬಿಹಾರದ ದರ್ಭಾಂಗ ಜಿಲ್ಲೆಯ ಸದರ್ ಬ್ಲಾಕ್‌ನ ನೈನಾಘಾಟ್ ಗ್ರಾಮದ ಕಾಲು ಖಾನ್‌ ಕುವೈಟ್ ನಲ್ಲಿ ಕೆಲಸ ಮಾಡಿಕೊಂಡಿದ್ದು ಬುಧವಾರ ಕಾರ್ಮಿಕರಿದ್ದ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಭಾರತೀಯರು ಸೇರಿ ಸುಮಾರು 49 ಮಂದಿ ಮೃತಪಟ್ಟಿದ್ದು ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.

ಈ ನಡುವೆ ಅಗ್ನಿ ಅವಘಡ ಸಮವಿಸಿದ ಕಟ್ಟಡದಲ್ಲೇ ಕಾಲು ಖಾನ್‌ ವಾಸವಿದ್ದರು ಎಂದು ಕುಟುಂಬ ಸದಸ್ಯರು ಹೇಳಿಕೊಂಡಿದ್ದಾರೆ ಅಲ್ಲದೆ ದುರಂತ ಸಂಭವಿಸಿದಂದಿನಿಂದ ಕುಟುಂಬ ಸದಸ್ಯರು ಸಂಪರ್ಕ ಸಾಧಿಸಿದರು ಕಾಲು ಖಾನ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಬುಧವಾರ ಕೊನೆಯ ಕರೆ ಬಂದಿತ್ತು:
ಘಟನೆಗೆ ಸಂಬಂಧಿಸಿದಂತೆ, ಬುಧವಾರ ರಾತ್ರಿ 11 ಗಂಟೆಯವರೆಗೆ ಕಾಲು ಖಾನ್ ಅವರೊಂದಿಗೆ ಮಾತುಕತೆ ನಡೆದಿದೆ ಎಂದು ಕುಟುಂಬ ಸದಸ್ಯರು ಹೇಳುತ್ತಾರೆ. ಬಳಿಕ ಬೆಂಕಿ ಅವಘಡದ ಬಗ್ಗೆ ಮಾಹಿತಿ ಲಭಿಸಿದೆ. ಅಂದಿನಿಂದ ಯಾರೂ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಅಲ್ಲದೆ, ಅಲ್ಲಿ ವಾಸಿಸುವ ಇತರ ಜನರಿಂದಲೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ರಾಯಭಾರ ಕಚೇರಿಯನ್ನು ಸಂಪರ್ಕಿಸಿದಾಗ, ಅಧಿಕಾರಿಗಳು ಪಾಸ್‌ಪೋರ್ಟ್‌ನ ಪ್ರತಿಯನ್ನು ಕಳುಹಿಸಿ ಮಾಹಿತಿ ಸಿಕ್ಕಿದರೆ ತಿಳಿಸುವುದಾಗಿ ಹೇಳಿದ್ದರು ಆದರೆ ಇದುವರೆಗೂ ಯಾವುದೇ ಮಾಹಿತಿ ನಮಗೆ ಬಂದಿಲ್ಲ ಎಂದು ಕುಟುಂಬಸ್ಥರು ಅಳಲುತೋಡಿಕೊಂಡಿದ್ದಾರೆ.

ಮುಂದಿನ ತಿಂಗಳು ಮದುವೆ ನಿಗದಿಯಾಗಿತ್ತು:
ತಾಯಿ ಮದೀನಾ ಖಾತೂನ್ ಹೇಳಿಕೆಯಂತೆ ಕಲು ಖಾನ್ ಗೆ ಮದುವೆ ನಿಗದಿಯಾದ ಹಿನ್ನೆಲೆಯಲ್ಲಿ ಮುಂದಿನ ತಿಂಗಳು 5 ರಂದು ಊರಿಗೆ ಬರುವವನಿದ್ದ ಅಲ್ಲದೆ ಮನೆಗೆ ವಿದ್ಯುತ್ ಅಳವಡಿಸಲು ಹಣ ಕಲಿಸುವುದಾಗಿ ಹೇಳಿದ್ದ ಆದರೆ ಇದೀಗ ಆತನ ಸಂಪರ್ಕವೇ ಇಲ್ಲದಂತಾಗಿದೆ ಎಂದು ತಾಯಿ ಅಳಲುತೋಡಿಕೊಂಡಿದ್ದಾರೆ.

Advertisement

ಇದನ್ನೂ ಓದಿ: Sandalwood: ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌

Advertisement

Udayavani is now on Telegram. Click here to join our channel and stay updated with the latest news.

Next