Advertisement

Alanda; ಕುವೈತ್ ಅಗ್ನಿ ದುರಂತದಲ್ಲಿ ಮೃತ ವ್ಯಕ್ತಿಯ ಶವ ಸ್ವಗ್ರಾಮಕ್ಕೆ ಆಗಮನ: ಅಂತ್ಯಕ್ರಿಯೆ

12:31 PM Jun 15, 2024 | Team Udayavani |

ಕಲಬುರಗಿ: ಕುವೈತ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿರುವ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದ ವಿಜಯಕುಮಾರ ಪಾರ್ಥೀವ ಶರೀರ ಸ್ವಗ್ರಾಮ ಸರಸಂಬಾಕ್ಕೆ ತಡರಾತ್ರಿ ಆಗಮಿಸಿತು.

Advertisement

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಸರಸಂಬಾ ಗ್ರಾಮಕ್ಕೆ ತಡರಾತ್ರಿ ಆಗಮನವಾಗಿದ್ದು, ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನೆರವೇರಿತು.

ಕುವೈತ್ ಅಗ್ನಿ ದುರಂತದಲ್ಲಿ ಸರಸಂಬಾ ಗ್ರಾಮದ ಟ್ರಕ್ ಡ್ರೈವರ್ ವಿಜಯಕುಮಾರ್ (40) ಸಹ ಸಾವಿಗೀಡಾಗಿದ್ದರು. ಮನೆ ಮಗನ ಸಾವಿನಿಂದ ವಿಜಯಕುಮಾರ ಕುಟುಂಬದಲ್ಲಿ ದು:ಖ ಮುಗಿಲು ಮುಟ್ಟಿದೆ.

ಮಗನನ್ನು ಕಳೆದುಕೊಂಡ ಹೆತ್ತವರ ರೋಧನ, ಪತಿಯನ್ನು ಕಳೆದುಕೊಂಡ ಪತ್ನಿಯ ಆಕ್ರಂದನ, ಅಪ್ಪನನ್ನು ಕಳೆದುಕೊಂಡ ಮಕ್ಕಳ ಕಣ್ಣೀರಧಾರೆ ಕಂಡು ಬಂತು. ಕುವೈತ್ ನಲ್ಲಿ ದುಡಿದು ಇತ್ತ ಊರಲ್ಲಿನ ಕುಟುಂಬಕ್ಕೆ ಹಣ ವಿಜಯಕುಮಾರ ಕಳುಹಿಸುತ್ತಿದ್ದರು.

ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯ ಸಾವಿನಿಂದ ಕಂಗಾಲಾಗಿರುವ ಮನೆಯವರ ಕಂಬನಿ ಕಟ್ಟೆಯೊಡೆದಿದೆ. ಇಡೀ ಗ್ರಾಮದಲ್ಲಿಯೇ ಸ್ಮಶಾನ ಮೌನವಾಗಿದೆಯಲ್ಲದೇ ಗ್ರಾಮಸ್ಥರು ಕಂಬನಿ ಮಿಡಿಯುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next