Advertisement

ಸಣ್ಣ ನಗರಗಳಲ್ಲೂ ನರೇಗಾ: ಕೋವಿಡ್ 19 ಬಿಕ್ಕಟ್ಟಿನ ಉದ್ಯೋಗ ನಷ್ಟಕ್ಕೆ ‘ನರೇಗಾ’ಆಸರೆ

02:30 AM Sep 03, 2020 | Hari Prasad |

ಹೊಸದಿಲ್ಲಿ: ಗ್ರಾಮೀಣ ನಿರುದ್ಯೋಗಿಗಳಿಗೆ ಆಸರೆಯಾಗಿರುವ, ವಿಶ್ವದ ಬೃಹತ್‌ ಉದ್ಯೋಗ ಯೋಜನೆ ನರೇಗಾ’ವನ್ನು ಸಣ್ಣ ನಗರಗಳಿಗೂ ವಿಸ್ತರಿಸಲು ಕೇಂದ್ರ ಸರಕಾರ ಚಿಂತಿಸಿದೆ.

Advertisement

ಕೋವಿಡ್ 19 ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡ ನಗರಗಳ ಲಕ್ಷಾಂತರ ಮಂದಿಗೆ ನರೇಗಾ ಆಸರೆಯಾಗಲಿದೆ.

ಈ ಉದ್ದೇಶಿತ ಯೋಜನೆಗೆ ಅನುಮೋದನೆ ಸಿಕ್ಕಿದರೆ ಸಣ್ಣಪುಟ್ಟ ನಗರಗಳಿಗೆ ವಿಸ್ತರಿಸಲಾಗುತ್ತದೆ.

ಆರಂಭಿಕ ಹಂತದಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ನರೇಗಾವನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಜಯ್‌ ಕುಮಾರ್‌ ತಿಳಿಸಿದ್ದಾರೆ.

ನಗರ ಮಟ್ಟದಲ್ಲಿ ನರೇಗಾ ಅನುಷ್ಠಾನಕ್ಕೆ ಕೇಂದ್ರ ಸರಕಾರ ಕಳೆದ ವರ್ಷವೇ ಚಿಂತಿಸಿತ್ತು. ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಈ ಪರಿಕಲ್ಪನೆಗೆ ವೇಗ ಲಭಿಸಿದೆ ಎಂದು ಹೇಳಿದ್ದಾರೆ.

Advertisement

ದೊಡ್ಡ ನಗರಗಳಿಗಿಲ್ಲ
ನರೇಗಾವನ್ನು ಆರಂಭಿಕ ಹಂತದಲ್ಲಿ ಸಣ್ಣಪುಟ್ಟ ನಗರಗಳಲ್ಲಿ ಅಳವಡಿಸಲಾಗುತ್ತದೆ. ದೊಡ್ಡ ನಗರಗಳಲ್ಲಿ ಹೆಚ್ಚಾಗಿ ವೃತ್ತಿಪರರು ಯೋಜನೆಗಳನ್ನು ಕೈಗೊಳ್ಳುವುದರಿಂದ ನರೇಗಾ ಅಳವಡಿಕೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

202 ರೂ. ದೈನಂದಿನ ವೇತನ ಹೊಂದಿರುವ ನರೇಗಾ ಯೋಜನೆ ಮೂಲಕ ಪ್ರಸ್ತುತ ಗ್ರಾಮೀಣ ಭಾಗದ ಜನರಿಗೆ ವರ್ಷಕ್ಕೆ 100 ದಿನಗಳ ಉದ್ಯೋಗ ಕಲ್ಪಿಸುತ್ತಿದೆ.

ಏನೇನು ಕೆಲಸ?
ರಸ್ತೆ ನಿರ್ಮಾಣ, ಕಟ್ಟಡ ಕಾಮಗಾರಿ, ಗಿಡ ನೆಡುವುದು, ಕಿರು ಅರಣ್ಯ ಪೋಷಣೆ ಇತ್ಯಾದಿ ಕೆಲಸಗಳನ್ನು ಸಣ್ಣ ನಗರಗಳಲ್ಲಿ ನರೇಗಾ ಕೂಲಿಗಳಿಂದ ಮಾಡಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next