Advertisement

ಜನಧನ ಖಾತೆಗೆ ಎರಡನೇ ಕಂತಿನ ಹಣ ಜಮೆ

08:15 AM May 04, 2020 | Hari Prasad |

ಜನಧನ ಖಾತೆಗೆ ಎರಡನೇ ಕಂತಿನ 500 ರೂ. ಜಮೆ ಮಾಡಲಾಗಿದೆ. ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ಫ‌ಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾಯಿಸಲಾಗಿದೆ ಎಂದು ವಿತ್ತ ಸಚಿವಾಲಯ ಶನಿವಾರ ತಿಳಿಸಿದೆ.

Advertisement

ಲಾಕ್‌ಡೌನ್‌ ಘೋಷಿಸಿದ್ದರಿಂದ ಜನರಿಗೆ ನೆರವಾಗಲು ಮೂರು ತಿಂಗಳು ತಲಾ 500 ರೂ. ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಈಗಾಗಲೇ ಏಪ್ರಿಲ್‌ ಕಂತಿನ ಹಣವನ್ನು ನೀಡಲಾಗಿದೆ.

ನಿಗದಿತ ದಿನದಂದೇ ಹಣ ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ಖಾತೆ ಸಂಖ್ಯೆಯ ಕಡೆಯ ಅಂಕಿ 0,1 ಇದ್ದವರಿಗೆ ಮೇ 4ರಂದು ಹಣ ಜಮೆ ಆಗಲಿದೆ. ಕಡೆಯ ಅಂಕಿ 2, 3 ಇದ್ದವರಿಗೆ ಮೇ 5 ರಂದು, ಕಡೆಯ ಅಂಕಿ 4, 5 ಇದ್ದವರಿಗೆ ಮೇ 6, ಕಡೆಯ
ಅಂಕಿ 6, 7 ಇದ್ದವರಿಗೆ ಮೇ 8, ಕಡೆಯ ಅಂಕಿ 9, 10 ಇದ್ದವರಿಗೆ ಮೇ 11 ರಂದು ಹಣ ವರ್ಗಾವಣೆ ಆಗಲಿದೆ.

ಆಯಾ ದಿನದಂದು ಜನರು ಹಣ ಬಿಡಿಸಿಕೊಳ್ಳಬಹುದಾಗಿದೆ, ಇಲ್ಲವೇ ಮೇ 11ರ ಬಳಿಕ ಯಾವಾಗ ಬೇಕಾದರೂ ಡ್ರಾ ಮಾಡಿಕೊಳ್ಳಬಹುದು. ಇದರಿಂದ ಒಮ್ಮೆಲೆ ಜನರು ಬ್ಯಾಂಕ್‌ಗಳ ಮುಂದೆ ಮುಗಿ ಬೀಳುವುದು ತಪ್ಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next