Advertisement

ರೈತರ ಭರವಸೆ ಈಡೇರಿಸದ ಕೇಂದ್ರ ಸರ್ಕಾರ-ಪ್ರತಿಭಟನೆ

12:54 PM Feb 01, 2022 | Team Udayavani |

ಶಹಾಬಾದ: ಕೇಂದ್ರ ಸರ್ಕಾರ ರೈತರ ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿ ಸೋಮವಾರ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ತಹಶೀಲ್ದಾರ್‌ ಕಚೇರಿ ಮುಂಭಾಗದಲ್ಲಿ ವಿಶ್ವಾಸ ದ್ರೋಹ ದಿನಾಚರಣೆ ಮೂಲಕ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಮಾತನಾಡಿದ ಸಮನ್ವಯ ಸಮಿತಿ ಮುಖಂಡರು, ಡಿ.9ರಂದು ಕೇಂದ್ರ ಸರ್ಕಾರದಿಂದ ಬಂದ ಪತ್ರದ ಆಧಾರದ ಮೇಲೆ ಸಂಯುಕ್ತ ಕಿಸಾನ್‌ ಮೋರ್ಚಾವನ್ನು ಅಮಾನತುಗೊಳಿಸಲು ನಿರ್ಧರಿಸಿದ್ದು, ಸರ್ಕಾರ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಮತ್ತೊಮ್ಮೆ ದೇಶದ ರೈತರಿಗೆ ವಂಚನೆಯಾಗಿದ್ದು, ದೇಶಾದ್ಯಂತ ರೈತರಿಂದ ಇಂದು ವಿಶ್ವಾಸದ್ರೋಹದ ದಿನ ಆಚರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಮೇಲಾದ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವ ಭರವಸೆಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪ್ರಕರಣಗಳಲ್ಲಿ ರೈತರು ನಿರಂತರವಾಗಿ ಸಮನ್ಸ್‌ ಪಡೆಯುತ್ತಿದ್ದಾರೆ. ಮೋರ್ಚಾವನ್ನು ಅಮಾನತುಗೊಳಿಸಿದ ನಂತರ, ಕೇಂದ್ರ ಸರ್ಕಾರವು ತನ್ನ ರೈತ ವಿರೋಧಿ ಕಾರ್ಯಸೂಚಿಯೊಂದಿಗೆ ಮುಂದುವರೆಯುತ್ತಿದೆ ಎಂದು ಆರೋಪಿಸಿದರು.

ಈ ವೇಳೆ ಗ್ರೇಡ್‌ -2 ತಹಶೀಲ್ದಾರ್‌ ಗುರುರಾಜ ಸಂಗಾವಿ ಮೂಲಕ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಮನವಿ ಸಲ್ಲಿಸಿದರು. ರೈತ ಕೃಷಿ ಕಾರ್ಮಿಕ ಸಂಘಟನೆಯ ತಾಲೂಕ ಕಾರ್ಯದರ್ಶಿ ರಾಜೇಂದ್ರ ಅತನೂರು, ಬಸವರಾಜ ಕೋರಿ, ಜಗನ್ನಾಥ ಎಸ.ಹೆಚ್‌, ರಮೇಶ ದೇವಕರ್‌, ಸದಸ್ಯರಾದ ನೀಲಕಂಠ ಎಂ.ಹುಲಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next