Advertisement

ಕೆಮ್ಮು, ಶೀತ ಇದ್ರೆ ಕಚೇರಿಗೆ ಬರಬೇಡಿ

01:25 AM Jun 10, 2020 | Hari Prasad |

ಹೊಸದಿಲ್ಲಿ: ವಿವಿಧ ಇಲಾಖೆಗಳಲ್ಲಿನ ಸಿಬಂದಿಗೆ ಕೋವಿಡ್ ವೈರಸ್‌ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರಕಾರ, ಕೇಂದ್ರ ಸರಕಾರಿ ಅಧಿಕಾರಿಗಳು ಮತ್ತು ಸಿಬಂದಿ ಕಡ್ಡಾಯವಾಗಿ ಪಾಲಿಸಬೇಕಿರುವ 13 ಅಂಶಗಳ ಹೊಸ ಮಾರ್ಗಸೂಚಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.

Advertisement

ಹೊಸ ಮಾರ್ಗಸೂಚಿ ಪ್ರಕಾರ ಸೋಂಕಿನ ಲಕ್ಷಣ ಹೊಂದಿರುವ ಸಿಬಂದಿ ಕಚೇರಿಗೆ ಬರುವಂತಿಲ್ಲ. ಸಣ್ಣ ಪ್ರಮಾಣದ ಜ್ವರ, ಕೆಮ್ಮು ಹೊಂದಿರುವ ಸಿಬಂದಿ ಮನೆಯಲ್ಲೇ ಉಳಿಯಬೇಕು.

ದಿನವೊಂದಕ್ಕೆ 20 ಸಿಬಂದಿ ಮಾತ್ರ ಕಚೇರಿಗೆ ಬರಬೇಕು. ಕಂಟೈನ್ಮೆಂಟ್‌ ಕೇಂದ್ರಗಳಲ್ಲಿ ವಾಸಿಸುವ ಸಿಬಂದಿ ಮನೆಯಿಂದಲೇ ಕೆಲಸ ಮಾಡಬೇಕು. ಈ ಮಾರ್ಗಸೂಚಿಗಳನ್ನು ಪಾಲಿಸದ ಅಧಿಕಾರಿ, ಸಿಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ.

ಸೂಚನೆಗಳಲ್ಲೇನಿದೆ?
1. ಸೋಂಕಿನ ಲಕ್ಷಣಗಳಿಲ್ಲದ ಸಿಬಂದಿ ಮಾತ್ರ ಕಚೇರಿಗೆ ಬರಬೇಕು.

2. ಕಂಟೈನ್ಮೆಂಟ್‌ ವಲಯಗಳಲ್ಲಿ ವಾಸವಿರುವ ಅಧಿಕಾರಿ, ಸಿಬಂದಿ ಮನೆಯಿಂದಲೇ ಕೆಲಸ ಮಾಡಬೇಕು.

Advertisement

3. ದಿನವೊಂದಕ್ಕೆ 20 ಸಿಬಂದಿ ಮಾತ್ರ ಕಚೇರಿಗೆ ಬರುವಂತೆ ಮತ್ತು ಉಳಿದವರು ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅನುಗುಣವಾಗಿ ಪಾಳಿ ಪಟ್ಟಿ ಸಿದ್ಧಪಡಿಸಬೇಕು.

4. ಇಬ್ಬರು ಕಾರ್ಯದರ್ಶಿಗಳು ಒಂದೇ ಕ್ಯಾಬಿನ್‌ ಬಳಸುತ್ತಿದ್ದರೆ ದಿನ ಬಿಟ್ಟು ದಿನ ಒಬ್ಬರಂತೆ ಕಚೇರಿಗೆ ಬರಬೇಕು.

5.ಒಂದು ವಿಭಾಗದಲ್ಲಿ ಏಕಕಾಲಕ್ಕೆ ಇಬ್ಬರಿಗಿಂತ ಹೆಚ್ಚು ಅಧಿಕಾರಿಗಳು ಇರುವಂತಿಲ್ಲ.

6. ಕಚೇರಿ ಒಳಗಿರುವಾಗ ಫೇಸ್‌ ಶೀಲ್ಡ್‌, ಮಾಸ್ಕ್ ಧರಿಸುವುದು ಕಡ್ಡಾಯ.

7. ಬಳಸಿದ ಮಾಸ್ಕ್, ಕೈಗವಸುಗಳನ್ನು ಹಳದಿ ಬಣ್ಣದ ಬಯೋ ಮೆಡಿಕಲ್‌ ಕಸದ ಬುಟ್ಟಿಗೇ ಹಾಕಬೇಕು.

8. ಅಧಿಕಾರಿಗಳು ತಾವಿರುವ ಸ್ಥಳದಿಂದಲೇ ವೆಬ್‌-ರೂಮ್‌ನಲ್ಲಿ ಭಾಗವಹಿಸಲು ಅಗತ್ಯ ಸೌಲಭ್ಯ ಕಲ್ಪಿಸಬೇಕು.

9. ಮುಖಾಮುಖಿ ಸಭೆ, ಚರ್ಚೆ, ಸಂವಾದ ನಡೆಸಬಾರದು. ಸಂವಹನಕ್ಕೆ ಇಂಟರ್‌ಕಾಂ, ಫೋನ್‌ ಬಳಸಬೇಕು.

10. ಕಚೇರಿಯಲ್ಲಿ ಸ್ಯಾನಿಟೆ„ಸರ್‌ ಇರಿಸಿ, ಅರ್ಧ ಗಂಟೆಗೊಮ್ಮೆ ಕೈ ತೊಳೆಯುವುದು ಕಡ್ಡಾಯ.

11. ಆಗಾಗ ಮುಟ್ಟುವ ಎಲೆಕ್ಟ್ರಿಕ್‌ ಸ್ವಿಚ್‌, ಬಾಗಿಲ ಹಿಡಿ, ಎಲಿವೇಟರ್‌ (ಲಿಫ್ಟ್‌) ಬಟನ್‌, ಮೆಟ್ಟಿಲುಗಳ ಹ್ಯಾಂಡ್‌ ರೇಲ್‌ ಮೊದಲಾದವುಗಳನ್ನು ಪ್ರತಿ ಗಂಟೆಗೊಮ್ಮೆ ಸ್ವಚ್ಛಗೊಳಿಸಬೇಕು. ಸಿಬಂದಿ ಕೂಡ ತಾವು ಬಳಸುವ ಕೀಬೋರ್ಡ್‌, ಮೌಸ್‌, ಫೋನ್‌, ಎಸಿ ರಿಮೋಟ್‌ಗಳನ್ನು ಆಗಾಗ ಸ್ವಚ್ಛಗೊಳಿಸಬೇಕು.

12. ಸಿಬಂದಿ ನಡುವೆ ಪರಸ್ಪರ ಒಂದು ಮೀಟರ್‌ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.

13. ಎಲ್ಲ ಅಧಿಕಾರಿಗಳು ಈ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next