Advertisement
“ಮೇಕ್ ಇನ್ ಇಂಡಿಯಾ’ದ ಪರಿಣಾಮವು ಭಾರತ ಅಜೇಯ ಎಂಬುದನ್ನು ತೋರಿಸುತ್ತದೆ. ಈ ಪ್ರಯತ್ನವು ಹತ್ತು ವರ್ಷಗಳ ಹಿಂದೆ ನಮ್ಮಂತಹ ಪ್ರತಿಭಾವಂತ ರಾಷ್ಟ್ರವು ಆಮದು ದಾರನಾಗಿ ಮಾತ್ರ ಇರದೆ ರಫ್ತುದಾರನೂ ಆಗುವುದನ್ನು ಖಚಿತ ಪಡಿಸಿಕೊಳ್ಳಲು ಉತ್ಪಾದನೆಯಲ್ಲಿ ಭಾರತದ ಪ್ರಗತಿಯನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಪ್ರಾರಂಭ ವಾಯಿತು. ಕಳೆದ ದಶಕವನ್ನು ಪ್ರತಿಬಿಂಬಿಸುವಾಗ, 140 ಕೋಟಿ ಭಾರತೀಯರ ಶಕ್ತಿ ಮತ್ತು ಕೌಶಲ್ಯವು ನಮ್ಮನ್ನು ಎಷ್ಟು ದೂರಕ್ಕೆ ಕೊಂಡೊಯ್ದಿದೆ ಎಂಬುದರ ಬಗ್ಗೆ ನಾನು ಹೆಮ್ಮೆಯಿಂದ ಬೀಗುತ್ತಿದ್ದೇನೆ. ನಾವು ಕನಸಿನಲ್ಲಿಯೂ ಯೋಚಿಸದ ಕ್ಷೇತ್ರಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮೇಕ್ ಇನ್ ಇಂಡಿಯಾ ಛಾಪು ಗೋಚರಿಸುತ್ತಿದೆ. ನಾನು ಒಂದೆರಡು ಉದಾಹರಣೆ ನೀಡುತ್ತೇನೆ.
Related Articles
ರಕ್ಷಣ ಉತ್ಪಾದನ ರಫ್ತು 1,000 ಕೋಟಿಗಳಿಂದ 21,000 ಕೋಟಿಗೆ ಏರಿಕೆಯಾಗಿದ್ದು, 85ಕ್ಕೂ ಹೆಚ್ಚು ದೇಶಗಳನ್ನು ತಲುಪಿದೆ.
Advertisement
ಮನ್ ಕೀ ಬಾತ್ ಸಂಚಿಕೆಯೊಂದರಲ್ಲಿ ನಾನು ಆಟಿಕೆ ಉದ್ಯಮವನ್ನು ಪುನಶ್ಚೇತನಗೊಳಿಸುವ ಅಗತ್ಯದ ಬಗ್ಗೆ ಮಾತನಾಡಿದ್ದಾರೆ ಮತ್ತು ಅದನ್ನು ಹೇಗೆ ಮಾಡಲಾಗುತ್ತದೆ ಎಂಬು ದನ್ನು ನಮ್ಮ ಜನರು ತೋರಿಸಿದ್ದಾರೆ! ಕಳೆದ ಕೆಲವು ವರ್ಷಗಳಲ್ಲಿ, ರಫ್ತುಗಳಲ್ಲಿ ಶೇ.239 ರಷ್ಟು ಬೆಳವಣಿಗೆಯನ್ನು ನಾವು ನೋಡಿದ್ದೇವೆ, ಅಲ್ಲದೇ ಆಮದು ಅರ್ಧದಷ್ಟು ಕಡಿಮೆ ಯಾ ಗಿದೆ, ಇದು ವಿಶೇಷ ವಾಗಿ ನಮ್ಮ ಸ್ಥಳೀಯ ತಯಾರಕರು ಮತ್ತು ಮಾರಾಟ ಗಾರರಿಗೆ ಪ್ರಯೋ ಜ ನವನ್ನು ನೀಡಿದೆ, ಇದ ರಲ್ಲಿ ಚಿಕ್ಕ ಮಕ್ಕಳನ್ನು ಉಲ್ಲೇಖೀಸದೇ ಇರಲಾದೀತೇ!
ಇಂದಿನ ಭಾರತದ ಅನೇಕ ಗಣ್ಯ ವ್ಯಕ್ತಿಗಳು -ನಮ್ಮ ವಂದೇ ಭಾರತ್ ರೈಲುಗಳು, ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ನಮ್ಮ ಕೈಯಲ್ಲಿರುವ ಮೊಬೈಲ್ ಫೋನ್ಗಳು ಇವೆಲ್ಲದರ ಮೇಕ್ ಇನ್ ಇಂಡಿಯಾ ಲೇಬಲ್ ಅನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿದ್ದಾರೆ. ಎಲೆಕ್ಟ್ರಾನಿಕ್ಸ್ನಿಂದ ಬಾಹ್ಯಾಕಾಶ ಕ್ಷೇತ್ರದವರೆಗೆ, ಇದು ಭಾರತೀಯ ಪ್ರತಿಭೆ ಮತ್ತು ಗುಣಮಟ್ಟವನ್ನು ಪ್ರತಿನಿಧಿಸುತ್ತದೆ.
ಮೇಕ್ ಇನ್ ಇಂಡಿಯಾ ಯೋಜನೆ ವಿಶೇಷವಾಗಿದೆ, ಏಕೆಂದರೆ ಇದು ಬಡವರಿಗೆ ದೊಡ್ಡ ಕನಸುಗಳಿಗೆ ಮತ್ತು ಅವರ ಆಕಾಂಕ್ಷೆಗಳಿಗೆ ರೆಕ್ಕೆ ನೀಡಿದೆ. ಇದು ಅವರಿಗೆ ತಾವೂ ಸಂಪತ್ತಿನ ಸೃಷ್ಟಿಕರ್ತರಾಗಬಹುದು ಎಂಬ ವಿಶ್ವಾಸವನ್ನು ನೀಡಿದೆ. ಎಂ ಎಸ್ಎಂಇ ವಲಯದ ಮೇಲಿನ ಪರಿಣಾಮವು ಅಷ್ಟೇ ಗಮನಾರ್ಹವಾಗಿದೆ. ಒಂದು ಸರಕಾರವಾಗಿ, ಈ ಮನೋಭಾವ ವನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ದಶಕದ ಸುದೀರ್ಘ ದಾಖಲೆಯು ಸ್ವತಃ ಇದನ್ನೇ ಹೇಳುತ್ತದೆ. ಉತ್ಪಾದನೆ ಆಧಾರಿತ ಪೋ›ತ್ಸಾಹಕ (ಪಿ ಎಲ್ ಐ) ಪರಿವರ್ತಕ ಯೋಜನೆಯಾಗಿದೆ. ಸಾವಿರಾರು ಕೋಟಿಗಳ ಹೂಡಿಕೆಗಳನ್ನು ಸಕ್ರಿಯಗೊಳಿಸುತ್ತಿದೆ ಮತ್ತು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ವ್ಯವಹಾರವನ್ನು ಸುಲಭಗೊಳಿಸುವಲ್ಲಿ ನಾವು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ.
ಇಂದು ಭಾರತದ ಪರವಾಗಿ ಬಹಳಷ್ಟು ನಡೆಯುತ್ತಿದೆ- ನಾವು ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ಬೇಡಿಕೆಯ ಪರಿಪೂರ್ಣ ಮಿಶ್ರಣವಾಗಿದ್ದೇವೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ಪ್ರಮುಖ ಆಟಗಾರನಾಗಲು ಅಗತ್ಯವಿರುವ ಎಲ್ಲವನ್ನೂ ನಾವು ಹೊಂದಿದ್ದೇವೆ, ನಮ್ಮನ್ನು ವ್ಯಾಪಾರಕ್ಕಾಗಿ ವಿಶ್ವಾಸಾರ್ಹ ಪಾಲುದಾರರಾಗಿ ನೋಡಲಾಗುತ್ತಿದೆ. ನಮ್ಮಲ್ಲಿ ಅತ್ಯಂತ ಅಸಾಧಾರಣವಾದ ಯುವ ಶಕ್ತಿಯೂ ಇದೆ, ಸ್ಟಾರ್ಟ್ ಅಪ್ ಜಗತ್ತಿನಲ್ಲಿ ಅವರ ಯಶಸ್ಸು ಎಲ್ಲರಿಗೂ ಗೋಚರಿಸುತ್ತಿದೆ. ಹೀಗಾಗಿ ಆವೇಗ ಸ್ಪಷ್ಟವಾಗಿ ಭಾರತದ ಪರವಾಗಿದೆ. ಜಾಗತಿಕ ಸಾಂಕ್ರಾಮಿಕದಂತಹ ಅಭೂತಪೂರ್ವ ಸವಾಲುಗಳನ್ನು ಎದುರಿಸುತ್ತಿದ್ದರೂ, ಭಾರತವು ಬೆಳವಣಿಗೆಯ ಹಾದಿಯಲ್ಲಿ ದೃಢವಾಗಿ ಉಳಿದಿದೆ.
ಇಂದು ನಮ್ಮನ್ನು ಜಾಗತಿಕ ಬೆಳವಣಿಗೆಯ ಚಾಲಕರನ್ನಾಗಿ ನೋಡಲಾಗುತ್ತಿದೆ. ಮೇಕ್ ಇನ್ ಇಂಡಿಯಾ ವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮ್ಮನ್ನು ಬೆಂಬಲಿಸು ವಂತೆ ನಾನು ನನ್ನ ಯುವ ಸ್ನೇಹಿತರಿಗೆ ಕರೆ ನೀಡುತ್ತೇನೆ. ನಾವೆಲ್ಲರೂ ಶ್ರೇಷ್ಠತೆಗಾಗಿ ಶ್ರಮಿಸಬೇಕು. ಗುಣಮಟ್ಟವನ್ನು ಒದಗಿಸುವುದು ನಮ್ಮ ಬದ್ಧತೆಯಾಗಬೇಕು. ಶೂನ್ಯ ದೋಷ ನಮ್ಮ ಮಂತ್ರವಾಗಬೇಕು. ನಾವು ಒಟ್ಟಾಗಿ, ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಮಾತ್ರವಲ್ಲದೇ ಜಗತ್ತಿಗೆ ಉತ್ಪಾದನೆ ಮತ್ತು ನಾವೀನ್ಯತೆಯ ಶಕ್ತಿಕೇಂದ್ರವಾಗುವ ಭಾರತ ನಿರ್ಮಾಣವನ್ನು ಮುಂದುವರಿಸೋಣ.
– ನರೇಂದ್ರ ಮೋದಿ, ಪ್ರಧಾನಮಂತ್ರಿ