ಪಡುಬಿದ್ರಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿಸ್ತಾರಕ್ ಯೋಜನೆಯಡಿ ಕಾರ್ಯಕರ್ತರು ತೊಡಗಿಸಿಕೊಂಡು ಕೇವಲ ಚುನಾವಣೆಯ ದೃಷ್ಟಿಯಿಂದಷ್ಟà ಅಲ್ಲದೆ ಮತದಾರರ ಮನೆ, ಮನೆಗಳಿಗೆ ತೆರಳಿ ಕೇಂದ್ರ ಸರಕಾರದ ಅನೇಕ ಜನೋಪಯೋಗಿ ಯೋಜನೆಗಳು, ಸಾಧನೆಗಳನ್ನು ತಲುಪಿಸಬೇಕು. ಸಮಾಜಕ್ಕೆ ಪೂರಕವಾಗಿರುವ ಕಾರ್ಯಕ್ರಮಗಳ ಮಾಹಿತಿಯನ್ನು ಅವರಿಗೆ ತಿಳಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಹೊಟೇಲ್ ಅಮರ್ ಕಾಂಫರ್ಟ್ಸ್ನ ಸಿರಿ ಗಾರ್ಡನ್ ಹಾಲ್‌ನಲ್ಲಿ ಬಿಜೆಪಿ ಶಕ್ತಿಕೇಂದ್ರದ ಸಭೆಯನ್ನು ಉದ್ಘಾಟಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಜಗತ್ತು ಇಂದು ಭಾರತದತ್ತ ಕಣ್ಣರಳಿಸಿ ನೋಡುತ್ತಿರುವ ಪರಿ, ಪ್ರಧಾನಿ ನರೇಂದ್ರ ಮೋದಿ ಸೈನಿಕರ ಕ್ಷೇಮಾಭಿವೃದ್ಧಿಗೆ ಕೈಗೊಂಡ ಕಾರ್ಯಕ್ರಮಗಳು, ಸೈನ್ಯದ ಬಲವರ್ಧನೆ, ಚೀನಾ ದೇಶಕ್ಕೂ ಭಾರತವಿಂದು ಸಡ್ಡು ಹೊಡೆದು ನಿಂತಿರುವುದನ್ನು ಜನರಿಗೆ ತಿಳಿಸಬೇಕಿದೆ. ಕರ್ನಾಟಕದ ಭಾಗ್ಯಲಕ್ಷಿ$¾à ಯೋಜನೆಯು ಕೇವಲ ಮೂರನೇ ಒಂದಂಶ ಹೆಣ್ಮಕ್ಕಳಿಗೆ ಮಾತ್ರ ದೊರೆಯುತ್ತಿದ್ದು ಮೂರನೇ ಎರಡಂಶ ಮಕ್ಕಳು ಇದರಿಂದ ವಂಚಿತರಾಗಿರುವುದನ್ನು ನಾವು ಮತದಾರರಿಗೆ ತಿಳಿಸಬೇಕೆಂದೂ ಶೋಭಾ ಹೇಳಿದರು.
ಮಾಜಿ ಶಾಸಕ ಲಾಲಾಜಿ ಮೆಂಡನ್ ಮಾತನಾಡಿ ಕಾಪು ಇಂದು ಡಂಪಿಂಗ್ ಯಾರ್ಡ್ ಆಗಿದೆ. ತೆರಿಗೆ ಏರಿಕೆಯ ಹೊರೆ ಜನತೆಯ ಮೇಲಾಗಿದೆಯಲ್ಲದೇ ಅಭಿವೃದ್ಧಿ ಶೂನ್ಯ. ಜಿಲ್ಲೆಗೆ ಸಂಸದೆ ಅವರ 278ಕೋಟಿ ರೂ. ಗಳ ಅನುದಾನವು ಹರಿದು ಬಂದಿದ್ದು ಕಾಪು ಕ್ಷೇತ್ರದಲ್ಲೂ ಅನೇಕ ರಸ್ತೆ ಕಾಮಗಾರಿಗಳಾಗಿವೆ ಎಂದರು. ಉಡುಪಿ ಜಿ. ಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ ಮಾತನಾಡುತ್ತಾ ಪಕ್ಷಕ್ಕಾಗಿ ಮನೆ, ಮನೆಗಳಿಗೆ ಇಂದು ನಾವಿರಿಸುವ ಹೆಜ್ಜೆಯು ಮುಂದೆ ಚುನಾವಣೆಯ ವೇಳೆಗೆ ವಾಮನನ ತ್ರಿವಿಕ್ರಮ ಹೆಜ್ಜೆಯಾಗಬೇಕಿದೆ ಎಂದರು. ಬಿಜೆಪಿ ಜಿಲ್ಲಾ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಮಾತನಾಡಿ ವಿಸ್ತಾರಕ್ ಯೋಜನೆಯಡಿ ಕಾರ್ಯಕರ್ತರು ರಾಜ್ಯದ ಪ್ರತಿಯೊಂದು ಬೂತ್‌ನಲ್ಲಿನ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸಂಪರ್ಕಿಸುವಂತಾಗಬೇಕು ಎಂದರು.
ಕಾಪು ಮಂಡಲ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಬಿಜೆಪಿ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಪ್ರೇಮ ಪ್ರಸಾದ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ತಾ. ಪಂ. ಸದಸ್ಯರಾದ ಕೇಶವ ಮೊಯಿಲಿ, ನೀತಾ ಗುರುರಾಜ್, ಜಿಲ್ಲಾ ಕಾರ್ಯದರ್ಶಿ ರಮಾಕಾಂತ ದೇವಾಡಿಗ, ಗ್ರಾಮ ಸಮಿತಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಶಕ್ತಿಕೇಂದ್ರದ ಪ್ರ | ಕಾರ್ಯದರ್ಶಿ ಸತೀಶ್ ಶೆಟ್ಟಿ, ವಿವಿಧ ಪ್ರಕೋಷ್ಟಗಳ ಸಂಚಾಲಕರಾದ ಉದಯಕುಮಾರ್ ಶೆಟ್ಟಿ ಇನ್ನ, ಬಿ. ಮಿಥುನ್ ಆರ್. ಹೆಗ್ಡೆ, ಪ್ರಾಣೇಶ್ ಹೆಜಮಾಡಿ ಮತ್ತಿತರರು ಉಪಸ್ಥಿತರಿದ್ದರು.
ಪಡುಬಿದ್ರಿ ಶಕ್ತಿಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ನಿರ್ವಹಸಿದರು.