Advertisement

Sukhoi ಎಂಜಿನ್‌ ಪೂರೈಕೆಗೆ ಎಚ್‌ಎಎಲ್‌ ಜತೆಗೆ ಕೇಂದ್ರ ಒಪ್ಪಂದ

01:18 AM Sep 10, 2024 | Team Udayavani |

ಹೊಸದಿಲ್ಲಿ: ಸು-30ಎಂಕೆಐ(ಸುಖೋಯ್‌ ಯುದ್ಧ ವಿಮಾನ) ಗಳಿಗೆ ಅಗತ್ಯವಿರುವ 240 ಏರೋ-ಎಂಜಿನ್‌ಗಳ ನಿರ್ಮಾಣಕ್ಕೆ, ಬೆಂಗಳೂರಿನ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿ.(ಎಚ್‌ಎಎಲ್‌) ಜತೆ ಕೇಂದ್ರ ರಕ್ಷಣ ಸಚಿವಾಲಯವು ಸೋಮವಾರ 26,000 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.

Advertisement

ಸುಖೋಯ್‌ 30 ಯುದ್ಧವಿಮಾನಗಳ ಕಾರ್ಯಾ ಚರಣೆ ಹೆಚ್ಚಿಸುವ ನಿಟ್ಟಿನಲ್ಲಿ ಎಚ್‌ಎಎಲ್‌ ಮೂಲಕ ಎಂಜಿನ್‌ಗಳನ್ನು ರಕ್ಷಣ ಇಲಾಖೆ ಖರೀದಿ ಮಾಡಲಿದೆ. 240 ಏರೋ ಎಂಜಿನ್‌ನಗಳನ್ನು ಎಚ್‌ಎಎಲ್‌, ತನ್ನ ಕೋರಾಪತ್‌ ಘಟಕದಲ್ಲಿ ನಿರ್ಮಾಣ ಮಾಡಿ, 8 ವರ್ಷದಲ್ಲಿ ಪೂರೈಕೆ ಮಾಡಲಿದೆ. ಆತ್ಮನಿರ್ಭರ ಭಾರತ್‌ಕ್ಕೆ ಬಲ ನೀಡುವುದಕ್ಕಾಗಿ ಕೇಂದ್ರ ಸರಕಾರ ಈ ಒಪ್ಪಂದವನ್ನು ಮಾಡಿಕೊಂಡಿದೆ. ರಕ್ಷಣ ಕಾರ್ಯದರ್ಶಿ ಗಿರಿಧರ್‌ ಅರಮನೆ ಹಾಗೂ ವಾಯು ಪಡೆ ಮುಖ್ಯಸ್ಥ ವಿ.ಆರ್‌.ಚೌಧರಿ ಸಮ್ಮುಖದಲ್ಲಿ ಎಚ್‌ಎಎಲ್‌, ರಕ್ಷಣ ಇಲಾಖೆ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next