Advertisement
ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, ಸರ್ಕಾರ ನಡೆಸಿರುವ ಈ ಹಿಂಬಾಗಿಲ ಮಾತುಕತೆ ಅಲ್ಪ ಪ್ರಮಾಣದ ಯಶಸ್ಸಿಗೆ ಕಾರಣವಾಗಿದೆ. ಈ ಮಾತುಕತೆಯ ಬಳಿಕವೇ ರಾಷ್ಟ್ರೀಯ ಹೆದ್ದಾರಿ 2ನ್ನು ಅಡ್ಡಗಟ್ಟಿದ್ದ ಕುಕಿ ಜನರು ಅಲ್ಲಿಂದ ಹೊರ ನಡೆದಿದ್ದಾರೆ. ಈಗ ಮೈತೇಯಿ ಸಮುದಾಯದ ಜತೆಗೆ ಮುಖಾಮುಖೀ ಮಾತುಕತೆಯನ್ನು ನಿರೀಕ್ಷಿಸಲಾಗಿದೆ. ಶೀಘ್ರವೇ ಮಣಿಪುರದ ಆಂತರಿಕ ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಗಲಭೆ ಶುರುವಾದಗಿನಿಂದ ಭದ್ರತಾ ಪಡೆಗಳ ಶಸ್ತ್ರಾಗಾರಗಳಿಂದ ಶಸ್ತ್ರಾಸ್ತ್ರಗಳನ್ನು ಗಲಭೆ ಗುಂಪುಗಳು ದೋಚಿವೆ. ಮೇ.3ರಿಂದ ಈ ವರೆಗೆ 5,000 ಶಸ್ತ್ರಾಸ್ತ್ರಗಳನ್ನು ದುಷ್ಕರ್ಮಿಗಳು ಲೂಟಿ ಮಾಡಿದ್ದಾರೆಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ ತೌಬಾಲ್ ಜಿಲ್ಲೆಯಲ್ಲಿ ಮಂಗಳವಾರವೂ ಶಸ್ತ್ರಾಸ್ತ್ರ ಲೂಟಿಗೆ ಗುಂಪುಗಳು ಮುಂದಾಗಿದ್ದು, ಅದನ್ನು ತಪ್ಪಿಸುವ ಭದ್ರತಾ ಪಡೆಗಳ ಪ್ರಯತ್ನದಲ್ಲಿ ದುಷ್ಕರ್ಮಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.