Advertisement

‘ಚರ್ಚ್‌ ಶತಮಾನೋತ್ಸವಕ್ಕೆ ಸರ್ವಧರ್ಮದ ಸಹಕಾರ ಅಗತ್ಯ’

12:14 PM Dec 20, 2017 | Team Udayavani |

ಉಳ್ಳಾಲ: ಚರ್ಚ್‌ನ ಶತಮಾನೋತ್ಸವವನ್ನು ಇಡೀ ಉಳ್ಳಾಲದ ಕಾರ್ಯಕ್ರಮವಾಗಿ ಆಚರಿಸುವ ನಿಟ್ಟಿನಲ್ಲಿ ಸರ್ವಧರ್ಮದವರ ಪ್ರಯತ್ನ ಅಗತ್ಯ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್‌ ಹೇಳಿದರು. ಅವರು ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬಾಸ್ಟಿಯನ್ನರ ಧರ್ಮಕೇಂದ್ರದ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಜನವರಿಯಲ್ಲಿ ಜರಗಲಿರುವ ಸೌಹಾರ್ದ ಸಮ್ಮಿಲನ ಮತ್ತು ಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿಯಾಗಿ ಚರ್ಚ್‌ನಲ್ಲಿ ಜರಗಿದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

Advertisement

ಕಾರ್ಯಕ್ರಮದ ಯಶಸ್ಸಿಗೆ ಜನಪ್ರತಿ ನಿಧಿಗಳು, ಸಮಿತಿ ಹಾಗೂ ಅಧಿಕಾರಿ ವರ್ಗದವರ ಸಹಕಾರ ಅಗತ್ಯ. ಸೌಹಾರ್ದ ಸಮ್ಮಿಲನದಲ್ಲಿ ಎಲ್ಲ ಧರ್ಮದವರು ಭಾಗವಹಿಸುತ್ತಾರೆ. ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಮುಂದಾಗಬೇಕಿದೆ ಎಂದು ಹೇಳಿದರು.

ಚರ್ಚ್‌ನ ಧರ್ಮಗುರು ಡಾ| ಜೆ.ಬಿ. ಸಲ್ದಾನ ಮಾತನಾಡಿ, ಶತಮಾನೋತ್ಸವ ಪೂರ್ವಭಾವಿಯಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇದಕ್ಕೆ ಅಧಿಕಾರಿಗಳ ಸಹಕಾರ ಅಗತ್ಯ ಎಂದು ಹೇಳಿದರು.

ಚರ್ಚ್‌ ಪಾಲನ ಸಮಿತಿ ಅಧ್ಯಕ್ಷ ಮೆಲ್ವಿನ್‌ ಸಿ. ಡಿ’ಸೋಜಾ, ಕಾರ್ಯದರ್ಶಿ ರೊನಾಲ್ಡ್‌ ಫೆರ್ನಾಂಡಿಸ್‌, ಶತಮಾನೋತ್ಸವ ಸಮಿತಿ ಅಧ್ಯಕ್ಷ ಡೆಮೆಟ್ರಿಯಸ್‌ ಡಿ’ಸೋಜಾ, ಕಾರ್ಯದರ್ಶಿ ಜೋಸ್ಲಿನ್‌ ಡಿ’ಸೋಜಾ, ಸಂತ ಸೆಬಾಸ್ಟಿಯನ್ನರ ಕಾಲೇಜಿನ ಪ್ರಾಂಶುಪಾಲ ಫಾ| ಎಡ್ವಿನ್‌ ಮಸ್ಕರೇನ್ಹಸ್‌, ಸೌಹಾರ್ದ ಸಮ್ಮೇಳನದ ಪ್ರ. ಸಂಚಾಲಕ ಸುರೇಶ್‌ ಭಟ್ನಗರ, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್‌ ಕುಂಞಿಮೋನು, ಉಪಾಧ್ಯಕ್ಷ ಚಿತ್ರಕಲಾ ಚಂದ್ರಕಾಂತ್‌, ಸ್ಥಾಯೀ ಸಮಿತಿ ಉಸ್ಮಾನ್‌ ಕಲ್ಲಾಪು, ಸುಂದರ್‌ ಉಳಿಯ, ಮಹಮ್ಮದ್‌ ಮುಕ್ಕಚ್ಚೇರಿ ಬಾಝಿಲ್‌ ಡಿ’ ಸೋಜಾ, ಮುಖ್ಯಾಧಿಕಾರಿ ವಾಣಿ ಆಳ್ವ, ಕೌನ್ಸಿಲರ್‌ಗಳಾದ ರಝೀಯಾ ಇಬ್ರಾಹಿಂ, ಮಹಾಲಕ್ಷ್ಮಿ ಉಳ್ಳಾಲ್‌, ರಿಚರ್ಡ್‌ ವೇಗಸ್‌, ರವಿ ಕಾಪಿಕಾಡ್‌, ಕಿಶೋರ್‌, ಸುಕುಮಾರ್‌, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆ ದೇವಕಿ ಉಳ್ಳಾಲ್‌, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಮೆಸ್ಕಾಂ ಅಧಿಕಾರಿಗಳಾದ ದಯಾನಂದ್‌, ರಾಜೇಶ್‌, ಅಗ್ನಿಶಾಮಕ ಇಲಾಖೆಯ ಜಿ.ಶೇಖರ್‌, ಡೇನಿಸ್‌ ಡಿ’ಸೋಜಾ, ಹೆರಾಲ್ಡ್‌ ಡಿ’ ಸೋಜಾ, ಆರೋಗ್ಯ ಇಲಾಖೆ ಉಳ್ಳಾಲ ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next