Advertisement

ಕೌ ಶಬ್ದ ತೆಗೆಯಲು ಸೂಚನೆ!

03:25 AM Jul 13, 2017 | Karthik A |

ನವದೆಹಲಿ/ಕೋಲ್ಕತಾ: ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಡಾ.ಅಮರ್ತ್ಯ ಸೆನ್‌ ಕುರಿತಾಗಿ ನಿರ್ಮಾಣಗೊಂಡ ಸಾಕ್ಷ್ಯಚಿತ್ರ ‘ದ ಆರ್ಗ್ಯುಮೆಂಟೆಟಿವ್‌ ಇಂಡಿಯನ್‌’ನಲ್ಲಿ ಬಳಕೆ ಮಾಡಲಾಗಿರುವ ಹಲವು ಪದಗಳನ್ನು ತೆಗೆದು ಹಾಕುವಂತೆ ಕೇಂದ್ರೀಯ ಸಿನಿಮಾ ಪ್ರಮಾಣ ಮಂಡಳಿ (ಸಿಬಿಎಫ್ಸಿ) ಸೂಚಿಸಿದೆ. ಮಂಡಳಿಯ ಕ್ರಮವನ್ನು ವಿರೋಧಿಸಿರುವ ಚಿತ್ರನಿರ್ದೇಶಕ, ಅರ್ಥಶಾಸ್ತ್ರಜ್ಞ ಸುಮನ್‌ ಘೋಷ್‌ ಸೆನ್ಸಾರ್‌ ಮಂಡಳಿಯ ನಿರ್ದೇಶನವನ್ನು ಅನುಸರಿಸುವುದಿಲ್ಲ ಎಂದು ಹೇಳಿದ್ದಾರೆ. ಸೆನ್ಸಾರ್‌ ಮಂಡಳಿಯ ಕ್ರಮ ಈಗ ವಿವಾದವನ್ನು ಹುಟ್ಟುಹಾಕಿದೆ.

Advertisement

ಮಂಗಳವಾರ ಈ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ್ದ ಮಂಡಳಿ. ಸಾಕ್ಷ್ಯಚಿತ್ರದಲ್ಲಿದ್ದ ಗುಜರಾತ್‌, ಕೌ, ಹಿಂದುತ್ವ ವ್ಯೂ ಆಫ್ ಇಂಡಿಯಾ, ಹಿಂದು ಇಂಡಿಯಾ ಎಂಬ ಪದಗಳನ್ನು ತೆಗೆಯುವಂತೆ ಸೂಚಿಸಿತ್ತು. ಬೀಪ್‌ ಸದ್ದು ಬಳಿಸಿದ ಬಳಿಕ ‘ಯುಎ’ ಪ್ರಮಾಣದ ಜೊತೆ ಚಿತ್ರವನ್ನು ಪ್ರದರ್ಶಿಸಬಹುದು ಎಂದಿತ್ತು. ‘ಈ ಸಾಕ್ಷ್ಯಚಿತ್ರದಲ್ಲಿ ಸೇನ್‌ ಭಾರತದಲ್ಲಿ ಹೆಚ್ಚಾಗಿರುವ ಅಸಹಿಷ್ಣುತೆ ಕುರಿತು ಮಾತನಾಡಿದ್ದಾರೆ.

ಭಾರತದಂಥ ಪ್ರಜಾಪ್ರಭುತ್ವವಿರುವ ದೇಶದಲ್ಲಿ ಸಾಕ್ಷ್ಯಚಿತ್ರವೊಂದರಲ್ಲಿ ಸರ್ಕಾರವನ್ನು ಟೀಕಿಸುವುನ್ನೂ ಸಹಿಸದೇ ಇರುವುದು ನಿಜಕ್ಕೂ ಆಶ್ಚರ್ಯಕರ. ಈಗಿನ ಸಮಯದ ಪ್ರಮುಖ ಚಿಂತಕನೊಬ್ಬರ ಅಭಿಪ್ರಾಯವನ್ನು ಚಿತ್ರದಲ್ಲಿ ನಿಶ್ಯಬ್ದಗೊಳಿಸಿ ಎಂದು ಹೇಳಿರುವುದು ಖಂಡನೀಯ ಎಂದಿದ್ದಾರೆ. ಇದೇ ವೇಳೆ ಸಿನಿಮಾ ಪ್ರಮಾಣೀಕರಣ ವ್ಯವಸ್ಥೆ ಆನ್‌ಲೈನ್‌ ಆಗಿರುವುದರಿಂದ ಶೀಘ್ರವೇ ಬಿಕ್ಕಟ್ಟು ಮಕ್ತಾಯವಾಗಬಹುದೆಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಮಂಡಳಿ ಕ್ರಮ ಪ್ರಶ್ನಿಸಿದ್ದಾರೆ. ಸರ್ಕಾರದ ವಿರುದ್ಧವಾಗಿರುವ ಯಾವುದೇ ಧ್ವನಿಯನ್ನು ಅಡಗಿಸುವಂಥ ಸ್ಥಿತಿ ಉಂಟಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next