Advertisement
ಶುಕ್ರವಾರದ ಕ್ವಾರ್ಟರ್ ಫೈನಲ್ನಲ್ಲಿ ಅಗ್ರ ಶ್ರೇಯಾಂಕದ ಸಿಂಧು ಚೀನದ ದೈ ವಾಂಗ್ ಅವರನ್ನು 21-15, 21-17 ಅಂತರದಿಂದ ಮಣಿಸಿದರು. ಪುರುಷರ ಸಿಂಗಲ್ಸ್ನಲ್ಲಿ ಲಕ್ಷ್ಯ ಸೇನ್ ಭಾರತದವರೇ ಆದ ಮೀರಾಬ ಲುವಾಂಗ್ ಮೈಸ್ನಮ್ ಅವರನ್ನು 21-8, 21-19ರಿಂದ ಮಣಿಸಿದರು.
ಸಿಂಧು ಅವರ ಸೆಮಿಫೈನಲ್ ಎದುರಾಳಿ ಭಾರತದವರೇ ಆದ ಉನ್ನತಿ ಹೂಡಾ. ಇವರು ಅಮೆರಿಕದ ಇಶಿಕಾ ಜೈಸ್ವಾಲ್ ವಿರುದ್ಧ 21-16, 21-9 ಅಂತರದ ಜಯ ಸಾಧಿಸಿದರು. ಲಕ್ಷ್ಯ ಸೇನ್ ಜಪಾನ್ನ ಶೋಗೊ ಒಗಾವ ವಿರುದ್ಧ ಆಡಲಿದ್ದಾರೆ. ಡಬಲ್ಸ್ನಲ್ಲೂ ಮುನ್ನಡೆ
ವನಿತಾ ಡಬಲ್ಸ್, ಮಿಶ್ರ ಡಬಲ್ಸ್ನಲ್ಲೂ ಭಾರತೀಯರಿಗೆ ಸೆಮಿಫೈನಲ್ ಟಿಕೆಟ್ ಲಭಿಸಿದೆ. ಡಬಲ್ಸ್ನಲ್ಲಿ ದ್ವಿತೀಯ ಶ್ರೇಯಾಂಕದ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಮಲೇಷ್ಯಾದ ಗೊ ಪೀ ಕೀ-ಟೋಹ್ ಮಿ ಕ್ಸಿಂಗ್ ಅವರನ್ನು 21-8, 21-15ರಿಂದ ಮಣಿಸಿದರು. ಮಿಶ್ರ ಡಬಲ್ಸ್ನಲ್ಲಿ ಧ್ರುವ ಕಪಿಲ-ತನಿಷಾ ಕ್ರಾಸ್ಟೊ ಮಲೇಷ್ಯಾದ ಲೂ ಬಿಂಗ್ ಕುನ್-ಹೊ ಲೊ ಈ ವಿರುದ್ಧ 21-16, 21-13 ಅಂತರದ ಮೇಲುಗೈ ಸಾಧಿಸಿದರು.