Advertisement

Shravan: ಶ್ರಾವಣದ ಸಂಭ್ರಮ – ಸಡಗರ

11:48 PM Aug 17, 2023 | Team Udayavani |

ಶ್ರಾವಣ ಹೆಸರೇ ನವೋಲ್ಲಾಸ, ನವಚೈತನ್ಯಕ್ಕೆ ಪರ್ಯಾಯ ಎಂಬಂತಿದೆ. ಮಾಸ ಪೂರ್ತಿ ಹಬ್ಬ ಹರಿದಿನಗಳ ಸಡಗರ.
ಹೊಸ ನೀರು, ಹೊಸ ಚಿಗುರು, ಹೊಸ ಪುಷ್ಪಗಳ ಘಮದೊಂದಿಗೆ ಹಬ್ಬಗಳ ಮೆರವಣಿಗೆ ಸಾಗುವ ಪರ್ವಕಾಲ.

Advertisement

ಶ್ರಾವಣ ಮಾಸ: ಶ್ರುತಿ-ಕೃತಿಗಳ ಪುಣ್ಯ ಪ್ರಾಪ್ತಿ ಯಾಗುವ ಮಾಸ; ಏಕೆಂದರೆ ಹರಿಹರರಿಬ್ಬರಿಗೂ ಪ್ರಿಯವಾದ ಮಾಸ.
ಕಾವ್ಯೋದ್ಯೋಗಕ್ಕೆ ಹಾಗೂ ಅಭಿಜಿದ್ಯೋಗಕ್ಕೆ ಅನುಕೂಲ ವೇಳೆ ಅಂದರೆ ಭಾವಗಳು ಕಾವ್ಯಗಳಾಗುವ ಸಂದರ್ಭ. ಸಾಂಖ್ಯಸೂತ್ರವನ್ನೇ ತಿರುವು ಮುರುವು ಮಾಡಿ ಪ್ರಕೃತಿ – ಸಾಕ್ಷಿಯೆದುರು ಪುರುಷನಾಟ್ಯದ ನವೋನವ ವಿಚಿತ್ರ ಘಟಿಸುವ ಪರ್ವಕಾಲ. ಶ್ರಾವಣ ಸಂಭವಿಸುವುದು ಆಕಸ್ಮಿಕ ಘಟನೆಯಲ್ಲ. ಕಳೆದ ವರ್ಷವೂ ಸನ್ನಿಹಿತವಾಗಿದೆ, ಮುಂದೆಯೂ ಒದಗಿ ಬರುತ್ತಲೇ ಇರುತ್ತದೆ. ಒಂದೇ ಜೀವನ ತತ್ತÌದ ಆವಿಷ್ಕಾರವನ್ನು ವ್ಯಕ್ತಿ ಬದುಕಿನಲ್ಲಿ, ರಾಷ್ಟ್ರದ ಜೀವನದಲ್ಲಿ ಪ್ರಕೃತಿಯ ಪರಿವರ್ತನೆಯಲ್ಲಿ ಕಾಣುತ್ತಾರೆ ಕವಿ ದ.ರಾ. ಬೇಂದ್ರೆ.

ಶ್ರಾವಣದಲ್ಲಿ ಪ್ರಕೃತಿ ಪಡೆಯುವ ಹೊಸ ಹುಟ್ಟು ಹಾಗೂ ಅದರ ವೈಭವ. ಈ ಸನ್ನಿವೇಶ ಸಡಗರಗಳಿಗೆ ಪ್ರೇರಣೆಯಾಗುತ್ತದೆ, ಅರಳಲು ಸಹಕಾರಿ. ಇದೇ ಅಲ್ಲವೇ ವೈಭವ. ವೈಭವ ಕಾಣುವುದಕ್ಕೆ- ಅನುಭವಿಸಲು ಅಥವಾ ಶ್ರುತಿಗೆ-ಕೃತಿಗೆ. ಪ್ರಕೃತಿ ಹಚ್ಚಹಸುರಾಗಿದೆ, ತಳಿರಿದೆ, ಹೂವಿದೆ, ಚಿಗುರಿದ ಹುಲ್ಲುಕಡ್ಡಿಗಳೂ ಇವೆ. ಇವೆಲ್ಲವೂ ಆಕರ್ಷಣೀಯವೇ, ಸೊಬಗೈರಿ ಬಾನೆತ್ತರಕ್ಕೆ ಮುಖಮಾಡಿ ನರ್ತಿಸುವಂತಹುವೇ.

ಶ್ರಾವಣದ ಶ್ರುತಿಯಲ್ಲಿ – ಕೃತಿಯಲ್ಲಿ ಆಧ್ಯಾತ್ಮಿಕ ಅನುಭೂತಿ ಇದೆ. ಅಂದರೆ ಪ್ರಕೃತಿಯಲ್ಲಾದ ಬದಲಾವಣೆ ಹೇಗೆ ಮಾನವನನ್ನು ಉತ್ತೇಜಿಸುತ್ತದೆ, ದಿಗ್ಭ್ರಮೆಯಿಂದ ಪರಿಸರವನ್ನು ಗ್ರಹಿಸುತ್ತಾ ಸಹಜ ವಾಗಿ ನಡೆದುಕೊಳ್ಳುವಂತೆ ಮಾಡುತ್ತದೆ, ಇದೇ ಅನುಭೂತಿಯ ಪರಿಣಾಮ. ಇದೆಲ್ಲವೂ ಶ್ರಾವಣ ಮಾಸದಲ್ಲಿ, ಶ್ರಾವಣದ ಆಚರಣೆಯಲ್ಲಿ ಸ್ಪಷ್ಟ.

ಶ್ರಾವಣಕ್ಕೆ ಮಾಸ ನಿಯಾಮಕ ದೇವರು ಶ್ರೀಧರ. ಮನನ್ನಿಯಾಮಕ ದೇವರು ರುದ್ರ. ಲಕ್ಷ್ಮೀಯನ್ನು ಧರಿಸಿದವನು ಶ್ರೀಧರ, ಚಂದ್ರನನ್ನು ಧರಿಸಿದವನು ಈಶ್ವರ. ಲಕ್ಷ್ಮೀಯಿಂದ ಸಮೃದ್ಧಿ ಹಾಗೂ ಚಂದ್ರನಿಂದ ಸುಖ ಪ್ರಾಪ್ತಿ ಎಂದಾದರೆ ಶ್ರಾವಣವು ಅಧಿಕವಾದ ಸಂತೋಷವನ್ನು ಅನುಗ್ರಹಿಸುತ್ತದೆ. ಹರಿಹರರ ಪ್ರೀತ್ಯರ್ಥವಾಗಿದೆ ಶ್ರಾವಣದ ಗ್ರಹಿಕೆ.
ನಾಗರ ಪಂಚಮಿ: ನಾಡಿಗೆ ದೊಡ್ಡದಾದ ನಾಗರ ಪಂಚಮಿ (ನಾಗಪಂಚಮಿ) ಶ್ರಾವಣ ಮಾಸದ ಐದನೇ ದಿನ ಆಚರಿಸಲ್ಪಡುತ್ತದೆ. ಭೂಮಿಪುತ್ರ ನಾಗನ ಆರಾಧನೆ
ಯಿಂದ ಸಂತಾನ, ಸಂಪತ್ತು, ಕೃಷಿ ಸಮೃದ್ಧಿ ಎಂಬುದು ನಂಬಿಕೆ. ನಾಗನಿಗೆ ತಂಪೆರೆದು, ತನಿ ಹರಕೆ ಗೊಂಡು “ತನಿ’ಯನ್ನು ಬಯಸುವ ಈ ಆಚರಣೆ
ಯಲ್ಲಿ ನಾಗ-ಭೂಮಿ-ಕೃಷಿಯ ಆರಾಧನಾ ಆಶ ಯವಿದೆ. ನಾಗ ಮತ್ತು ವೃಕ್ಷ ಅವಳಿ ಚೇತನಗಳು ಎಂಬುದು ಒಂದು ಒಪ್ಪಿಗೆ. ಅದರಂತೆ ನಾಗಬನಗಳನ್ನು ಉಳಿಸುವ – ಬೆಳೆಸುವ ಕೆಲಸ ಆಗಬೇಕಿದೆ.

Advertisement

ಮಂಗಳ ಗೌರೀ ವೃತ: ಹೊಸದಾಗಿ ದಾಂಪತ್ಯಕ್ಕೆ ಕಾಲಿಟ್ಟ ನೂತನ ವಧೂ ವರರು ಸಂತಸದ ದಾಂಪತ್ಯ ಸುಖ ಪ್ರಾಪ್ತಿಗಾಗಿ ಕೊನೆಯ ಎರಡು ಮಂಗಳವಾರಗಳಲ್ಲಿ ಈ ವ್ರತವನ್ನು ಆಚರಿಸುತ್ತಾರೆ.

ವರಮಹಾಲಕ್ಷ್ಮೀ ವ್ರತ: ಇದು ಸಂಪತ್ತಿನ ರಾಣಿಯ ಉಪಾಸನೆ. ಶ್ರಾವಣ ಮಾಸದ ಶುದ್ಧ ಪಕ್ಷದ ಎರಡನೇ ಶುಕ್ರವಾರ ಈ ವ್ರತಾನುಷ್ಠಾನಕ್ಕೆ ಸಕಾಲ. ಲಕ್ಷ್ಮೀ ಸಮುದ್ರ ಮಥನ ಕಾಲದಲ್ಲಿ ಹುಟ್ಟಿದವಳು.

ನಾರಾಯಣನನ್ನು ವರಿಸಿ ತಾನು ಮಹಾಲಕ್ಷ್ಮೀ ಯಾದಳು, ನಾರಾಯಣನು ಲಕ್ಷ್ಮೀ ನಾರಾಯಣ ನಾದ. ಸ್ಥಿತಿಕರ್ತನಾದ ನಾರಾಯಣನು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀಗೆ ವಲ್ಲಭನಾಗಿ ಸೌಭಾಗ್ಯ ವಂತನಾದ, ಲಕ್ಷ್ಮೀ ಬಹುಮಾನ್ಯಳಾದಳು.ಇಂತಹ ಲಕ್ಷ್ಮೀಯು ವರಗಳನ್ನು ಕೊಡುತ್ತಾಳೆ ಎಂಬ ಸಂಕಲ್ಪದೊಂದಿಗೆ ಈ ವ್ರತಾಚರಣೆ. ಕಲೊ³àಕ್ತ ಪೂಜೆ, ವ್ರತ ಮಹಿಮೆಯ ಕಥಾಶ್ರವಣ ಪೂಜಾ ವಿಧಾನ.

ಕೃಷ್ಣಜನ್ಮಾಷ್ಟಮಿ: ಯುಗಾಂತದ ಯುಗ ಪ್ರವರ್ತಕನಾಗಿ ಭಗವಂತನು ಧರ್ಮವಾಗಿ ಅವತರಿ ಸಿದ್ದು ಕೃಷ್ಣಾವತಾರ. ದ್ವಾಪರಯುಗಕ್ಕೆ ಮೌಲ್ಯಯುತ ಅಂತ್ಯವನ್ನು ಬರೆದ ಭಗವಾನ್‌ ವಾಸುದೇವನು ಜಗತ್ತಿನ ಕತ್ತಲೆಯನ್ನು ಕಾಣುತ್ತಾ ಸೆರೆಮನೆಯಲ್ಲಿ ಜನಿಸಿದ. ವರ್ಣರಂಜಿತ ಬದುಕು ಬಾಳಿದ, ಗೀತಾಚಾರ್ಯ ನಾಗಿ ವಿರಾಟ್‌ ಪುರುಷನಾಗಿ ಬೆಳೆದ. ಈ ಮಹನೀಯ ಜನಿಸಿದ್ದು ಶ್ರಾವಣದಲ್ಲಿ, ಕೃಷ್ಣ ಪಕ್ಷದ ಅಷ್ಟಮಿಯಂದು. ಜನ್ಮಾಷ್ಟಮಿ ಮರುದಿನದ ಲೀಲೋತ್ಸವವು ಸಂಭ್ರಮವು ಮೂರ್ಧನ್ಯಕ್ಕೆ ಏರುವ ಸಂದರ್ಭ.

ಉಪಾಕರ್ಮ-ರಾಖೀ ಬಂಧನ: ರಕ್ಷಾ ಬಂಧನ ಹಾಗೂ ಉಪಾಕರ್ಮಗಳಲ್ಲಿ ಒಂದು “ಭಾವ’ ಸಂಬಂಧಿ ಯಾದರೆ ಮತ್ತೂಂದು “ಜ್ಞಾನ’ ಶುದ್ಧಿ ಯನ್ನು ಎಚ್ಚರಿಸುವ ಆಚರಣೆ. ರಾಖೀ ಕಟ್ಟುವುದು, ಯಜ್ಞೋಪವೀತ ಧರಿಸುವುದು ಇವೆರಡು ದಾರ ಅಥವಾ ನೂಲಿನ ನಂಟನ್ನು ಅಂದರೆ ಆ ಮೂಲಕ ನೆರವೇರುತ್ತವೆ. ಕಟ್ಟುವುದು ಎಂದರೆ ಜೋಡಿಸುವುದು ಎಂದು ತಿಳಿಯಬಹುದು. ಇದು ಭ್ರಾತೃ – ಭಗಿನಿ ಭಾವವನ್ನು ಬೆಸೆಯುತ್ತದೆ. ಧರಿಸುವ ಯಜ್ಞೋಪವೀತವು ಮತ್ತೆ ವೇದಾಧ್ಯಯನಕ್ಕೆ ಉಪಕ್ರಮಿಸು ಎಂಬ ಸಂದೇಶವನ್ನು ಕೊಡುತ್ತದೆ. ಶ್ರಾವಣ ಮಾಸದ ಹುಣ್ಣಿಮೆ ಪ್ರಶಸ್ತವಾದ ದಿನ. ಪರಿಗ್ರಹಿಸಿದ ವೇದಕ್ಕೆ ಅನುಗುಣವಾಗಿ ವಿವಿಧ ದಿನ ಸ್ವೀಕಾರ ಕ್ರಮಗಳೂ ಇವೆ.

ಶ್ರಾವಣ ಶನಿವಾರ: ಶ್ರಾವಣ ಮಾಸ ದಲ್ಲಿ ಬರುವ ಶನಿವಾರ ದಿನಗಳಲ್ಲಿ ಶನಿ ದೇವರ ಕಲ್ಪೋಕ್ತ ಪೂಜೆ, ಶನಿಮಹಾತ್ಮೆ ಕಥಾಶ್ರವಣಗಳಿಂದ ಶನಿ ದೋಷಗಳು ಪರಿಹಾರ ವಾಗುತ್ತದೆ ಎಂಬುದು ಶ್ರದ್ಧೆ. ಅದರಂತೆ ದೇವಸ್ಥಾನಗಳಲ್ಲಿ, ಪೂಜಾ ಮಂದಿರ ಗಳಲ್ಲಿ ಸಾಮೂಹಿಕ ಶನಿಪೂಜೆಗಳು ನಡೆಯುತ್ತವೆ, ಬಹು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ.

ಸಂಪತ್‌ ಶನಿವಾರ ಎಂಬ ಲಕ್ಷ್ಮೀ ಪೂಜೆಯೂ ಸಂಪನ್ನಗೊಳ್ಳುತ್ತವೆ. ಬುಧ ಬೃಹಸ್ಪತಿ ವ್ರತ, ಶ್ರಾವಣ ಸೋಮವಾರ ವ್ರತ ಮುಂತಾದ ಆಚರಣೆಗಳೂ ಇವೆ.

ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ: ಸತ್ಯ – ಧರ್ಮ ಮಗ್ನರಾಗಿ ಭಜಿಸಿದವರಿಗೆ ಕಲ್ಪವೃಕ್ಷವಾಗಿ, ನಮಿಸಿದವರಿಗೆ ಕಾಮಧೇನುವಾಗಿ, ಭಕ್ತ-ಶಿಷ್ಯ ಸಂದೋ ಹವನ್ನು ಪೊರೆಯುತ್ತಾರೆ ಎಂಬ ವಿಶ್ವಾಸಕ್ಕೆ ಪಾತ್ರರಾದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಆರಾಧನಾ ಮಹೋತ್ಸವ ಸನ್ನಿಹಿತವಾಗುವುದು ಶ್ರಾವಣದಲ್ಲಿ.
ಹೀಗೆ ತಿಂಗಳು ಪೂರ್ತಿ ವೈವಿಧ್ಯಮಯ ಆಚರ ಣೆಗಳು ಶ್ರಾವಣದಲ್ಲಿ ನೆರವೇರಿ ಮುಂದಿನ ಗಣೇಶ ಚತುರ್ಥಿ, ಸೋಡರ ಹಬ್ಬಗಳ ಸಂಭ್ರಮಾಚರಣೆಗಳನ್ನು ಶ್ರಾವಣದ ಸಡಗರವು ಬರಮಾಡಿಕೊಳ್ಳುವಂತಿಲ್ಲವೇ?

Advertisement

Udayavani is now on Telegram. Click here to join our channel and stay updated with the latest news.

Next