Advertisement
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಗುರುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂ¸ ಉದ್ಘಾಟಿಸಿ ಮಾತನಾಡಿದರು. ಸುದ್ದಿ ನೀಡುವ ಧಾವಂತದಲ್ಲಿ ಸುದ್ದಿಯ ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ ಭಿತ್ತರಿಸಲಾಗುತ್ತದೆ.
Related Articles
Advertisement
ಹಾದಿ ತಪ್ಪುತ್ತಿದ್ದಾರೆ: ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೊಸಬರಿಗೆ ಮಾರ್ಗದರ್ಶನ ನೀಡುವ ಹಿರಿಯ ಪತ್ರಕರ್ತರ ಸಂಖ್ಯೆಯೂ ಕಡಿಮೆಯಾಗಿದೆ. ಹಿರಿಯರ ಮಾತುಗಳನ್ನು ಕೇಳುವಷ್ಟು ವ್ಯವಧಾನ ಕಿರಿಯ ಪತ್ರಕರ್ತರಿಗಿಲ್ಲದ ಕಾರಣ ಹಾದಿ ತಪ್ಪುತ್ತಿದ್ದಾರೆ ಎಂದು ವಿಷಾದಿಸಿದರು.
ಬದಲಾವಣೆಗೆ ಹೊಂದಿಕೊಳ್ಳಿ: ರಂಗಕರ್ಮಿ ಪ್ರಕಾಶ್ ಬೆಳವಾಡಿ ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪತ್ರಿಕೋದ್ಯಮ ಅಗತ್ಯವಿದೆ. ಆದರೆ, ಎಲ್ಲಾ ಕ್ಷೇತ್ರಗಳಂತೆ ಪತ್ರಿಕಾರಂಗವೂ ಬದಲಾವಣೆಯತ್ತ ಸಾಗಲಿದ್ದು, ಮುಂದಿನ ಕೆಲವು ವರ್ಷಗಳ ನಂತರ ಮುದ್ರಣ ಮಾಧ್ಯಮ ಸ್ಥಗಿತವಾಗಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಡಿವೈಸ್ ಮೂಲಕ ಮನೆಯಲ್ಲೇ ಅವರಿಗೆ ಬೇಕಾದ ಸುದ್ದಿಗಳನ್ನು ನೋಡುವ ವ್ಯವಸ್ಥೆ ಬಂದರೂ ಆಶ್ಚರ್ಯವಿಲ್ಲ. ಹೀಗಾಗಿ ಪತ್ರಕರ್ತರು ಇಂತಹ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಜಾjಗಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಕೆ.ವಿ.ಸಂಪತ್‌ಕುಮಾರ್, ರೇಣುಕಾ ತುಂಬಸೋಗೆ, ಬಾಪುಲಿಂಗರಾಜೇ ಅರಸ್, ಟಿ.ಎನ್. ಹೇಮಂತ್‌ಕುಮಾರ್, ಎಚ್.ಎಲ್.ಶಾರದಾಸಂಪತ್, ನೇತ್ರರಾಜು ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಉತ್ತಮ ವರದಿಗಾರಿಕೆ ಪ್ರಶಸ್ತಿಯನ್ನು ಹರೀಶ್ ಎಲ್.ತಲಕಾಡು, ಉತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ಅನುರಾಗ್ ಬಸವರಾಜ್ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಂದೀಪ್ ಡಿ., ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಇತರರಿದ್ದರು.
ಪತ್ರಿಕೋದ್ಯಮದಲ್ಲಿದ್ದ ನನಗೆ ಸಂಸದನಾಗುವ ಅವಕಾಶ ಆಕಸ್ಮಿಕವಾಗಿ ದೊರೆತಿದೆ. ಅನುಭವವಿಲ್ಲದಿದ್ದರೂ ಯಾರಿಂದಲೂ ಒಂದು ಪೈಸೆಯೂ ಲಂಚ ಪಡೆಯದೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಸಂಸದನಾದ ಮಾತ್ರಕ್ಕೆ ಅಹಂಕಾರ ಹಾಗೂ ಭ್ರಮಾಲೋಕದಲ್ಲಿ ತೇಲದೆ ಹಳೆಯದನ್ನು ನೆನಪಿಸಿಕೊಂಡು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದೇನೆ.-ಪ್ರತಾಪ್‌ಸಿಂಹ, ಸಂಸದ