ಧಾರವಾಡ: ಜಿಲ್ಲಾಡಳಿತ,ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಾ.10ರಂದು ದಲಿತ ವಚನಕಾರರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗಪೆದ್ದಿಯವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಯಂತಿಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂದು ಬೆಳಿಗ್ಗೆ 9 ಗಂಟೆಗೆ ಕಲಾಭವನದಿಂದ ವಚನಕಾರರಭಾವಚಿತ್ರಗಳು ಹಾಗೂ ಕಲಾತಂಡದ ಮೆರವಣಿಗೆ ಆರಂಭವಾಗುವುದು.
ಗಾಂಧಿಚೌಕ,7ನೇ ನಂಬರ್ ಶಾಲೆ, ಮಣಕಿಲ್ಲಾ, ಸಿಬಿಟಿ ಮಾರ್ಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘ ತಲುಪುವುದು. ಅಲ್ಲಿನ ಡಾ|ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬೆಳಿಗ್ಗೆ 11ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭವಾಗುವುದು.
ಲಕ್ಷ್ಮಣ ಬಕ್ಕಾಯಿ, ಮಾರ್ಕಂಡೇಯ ದೊಡ್ಡಮನಿ, ಮೋಹನ ನಾಗಮ್ಮನವರ, ಡಾ|ಶಿವಶಂಕರ ಪೋಳ ಅವರಿಂದ ವಚನಕಾರರ ಕುರಿತು ಉಪನ್ಯಾಸ ಏರ್ಪಡಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಸಾರ್ವಜನಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಕೋರಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್. ಕೆ.ರಂಗಣ್ಣವರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಮುಖಂಡರಾದ ಸಂಗಮೇಶ ಮಾದರ, ಮಹದೇವ ದೊಡ್ಡಮನಿ, ರಮೇಶ ದೊಡವಾಡ, ಅಶೋಕ ಬಂಢಾರಿ, ಉಮೇಶ ಶಿರಹಟ್ಟಿ, ಮಹೇಶ ಹುಲೆಣ್ಣವರ,ಯಲ್ಲಪ್ಪ ಸವಣೂರ, ಪರಶುರಾಮ ಒಕ್ಕುಂದ ಮತ್ತಿತರರು ಸಭೆಯಲ್ಲಿ ಇದ್ದರು.