Advertisement

ಮಾರ್ಗಸೂಚಿಯಂತೆ ಗಣೇಶ ಚತುರ್ಥಿ ಆಚರಿಸಿ

01:14 PM Aug 22, 2020 | Suhan S |

ಶಿಡ್ಲಘಟ್ಟ: ಜಿಲ್ಲಾದ್ಯಂತ ಗೌರಿ ಮತ್ತು ಗಣೇಶ ಚತುರ್ಥಿಯನ್ನು ಸರ್ಕಾರದ ಮಾರ್ಗಸೂಚಿಗಳೊಂದಿಗೆ ಹಬ್ಬ ಆಚರಿಸಿ ಎಂದು ತಿಳಿಸಿರುವ ಜಿಲ್ಲಾಧಿ ಕಾರಿ ಲತಾ, ಎಲ್ಲರಿಗೂ ಹಬ್ಬದ ಶುಭಾ ಶಯ ಕೋರಿದರು.

Advertisement

ಚಿಕ್ಕಬಳ್ಳಾಪುರ ನಗರ ಮಾದರಿಯನ್ನಾಗಿಸಲು ಪಣತೊಟ್ಟಿ ರುವ ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಮತ್ತು ನಗರ ಸಭೆಯ ಅಧಿಕಾರಿಗಳೊಂದಿಗೆ ಜಿಲ್ಲಾ ಕೇಂದ್ರದ 11 ಮತ್ತು 16ನೇ ವಾರ್ಡ್‌ ಗಳಿಗೆ ಭೇಟಿ ನೀಡಿ ಅಲ್ಲಿನ ಸ್ವತ್ಛತೆ ಪರಿವೀಕ್ಷಣೆ ನಡೆಸಿದರು. ನಂತರ ಮಾತನಾಡಿದ ಜಿಲ್ಲಾಧಿಕಾರಿ ಲತಾ, ವಾರ್ಡ್‌ ನಂಬರ್‌ 11 ಮತ್ತು 16ರ ಎಲ್ಲಾ ರಸ್ತೆಗಳು, ಚರಂಡಿಗಳು, ಮನೆ ಕಸ ಸಂಗ್ರಹಣೆ ಬಗ್ಗೆ, ಹಸಿ ಕಸ, ಒಣ ಕಸ ಬೇರ್ಪಡಿಕೆ ಬಗ್ಗೆ, ಹೋಟೆಲ್‌ ಗಳ ಶುಚಿತ್ವದ ಬಗ್ಗೆ, ಎಲ್ಲಾ ಅಂಗಡಿಗಳ ಮುಂದೆ ಕೊರೊನಾ ಅರಿವು ಮೂಡಿ ಸುವ ಬ್ಯಾನರ್‌ಗಳ ಬಗ್ಗೆ, ಪರಿ ವೀಕ್ಷಣೆ ಮಾಡಿ ಈ ವಾರ್ಡ್‌ನ ಸ್ವಚ್ಛತೆ ಪರಿಶೀಲನೆ ಮಾಡಲಾ ಯಿತು ಎಂದು ಹೇಳಿದರು.

ಕ್ಯಾಪ್ಟನ್‌ಗಳ ನೇಮಕ: ಪ್ರತಿಯೊಂದು ವಾರ್ಡ್‌ಗಳಲ್ಲಿ ಕೋವಿಡ್‌-19 ತಡೆಯಲು ಟಾಸ್ಕ್ ಪೋರ್ಸ್‌ಗಳನ್ನು ನೇವಿುಸಿದಂತೆ ಸ್ವತ್ಛತೆಯನ್ನು ಕಾಪಾ ಡಲು ಕ್ಯಾಪ್ಟನ್‌ಗಳನ್ನು ನೇಮಿಸುವ ಮೂಲಕ ನಗರದಲ್ಲಿನ ಬ್ಲಾಕ್‌ಸ್ಪಾಟ್‌ಗಳನ್ನು ಪೂರ್ತಿ ಯಾಗಿ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ನಗರದ ಸಾರ್ವಜನಿಕರಿಗೆ ಕಸ ವಿಲೇವಾರಿಯ ಬಗ್ಗೆ ಅರಿವು ಮೂಡಿಸಿ, ಮನೆ ಗಳಿಂದಲೇ ಒಣ ಮತ್ತು ಹಸಿ ಕಸವಾಗಿವಿಂಗಡಿಸಿ ಸಮರ್ಪಕ ವಾಗಿ ವಿಲೇವಾರಿ  ಮಾಡಬೇಕು, ಚರಂಡಿ ಮತ್ತು ರಸ್ತೆಗಳು ಸ್ವಚ್ಛವಾಗಿರಬೇಕು, ಇದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಬಹುದು ಎಂದು ಹೇಳಿ ದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇ ಶಕಿ ರೇಣುಕಾ, ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತ ಲೋಹಿತ್‌, ಸದಸ್ಯ ಯತೀಶ್‌, ವಾರ್ಡ್‌ ನೋಡಲ್‌ ಅಧಿಕಾರಿ ಲಕ್ಷ್ಮೀಪತಿ, ಕಿರಿಯ ಅಭಿ ಯಂತರರು, ಆರೋಗ್ಯ ನಿರೀಕ್ಷಕರು, ನೋಡಲ್‌ ಅಧಿಕಾರಿಗಳು ಉಪಸ್ಥಿತರಿದ್ದರು.

ಕೋವಿಡ್‌ ಸೋಂಕು ಹರಡದಂತೆ ಕ್ರಮವಹಿಸಿ : ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನ,  ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು ಧರಿಸಿ, ದಿನನಿತ್ಯ ಸ್ಯಾನಿಟೈಸೇಷನ್‌ ಮಾಡಬೇಕು, ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಲತಾ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಸರ್ಕಾರ ಹೊರಡಿಸಿದ ಕೋವಿಡ್‌-19 ನಿಯಂತ್ರಣಾ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಲ್ಲದೆ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ,ಪೊಲೀಸ್‌ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕದಳ ಹಾಗೂ ಇತರೆ ಇಲಾಖೆ ಗಳಿಂದ ಹೊರಡಿಸಲಾದ ಸೂಚನೆ ಕಡ್ಡಾಯವಾಗಿ ಪಾಲಿಸಲು ಸೂಚಿಸಿದ್ದಾರೆ.ಶಾಂತಿ ಸೌಹಾರ್ದತೆಯಿಂದ ಗಣೇಶೋತ್ಸವವನ್ನು ಆಚರಿಸಬೇಕು, ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ಶಿಸ್ತು ಕಾಪಾಡುವುದು, ರಾಷ್ಟ್ರೀಯ ನಿರ್ದೇಶನ, ರಾಜ್ಯ ಸರ್ಕಾರದ ಆದೇಶ, ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಲತಾ ಆದೇಶಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next