ದೇವನಹಳ್ಳಿ: ಮನುಷ್ಯನ ಅಂಗಾಗಗಳು ಅತೀ ಮುಖ್ಯಾವಾದದ್ದು, ಕೆಲವರಿಗೆ ಹುಟ್ಟಿನಿಂದಲೇ ದೃಷ್ಠಿ ದೋಷ ವಿರುತ್ತದೆ. ವಿಪರ್ಯಾಸವೆಂದರೆ ಕೆಲವರು ಪಟಾಕಿ ಹಚ್ಚಿ ಕಣ್ಣು ಕಳೆದುಕೊಳ್ಳುತ್ತಾರೆ ಎಂದು ನಂದಿ ರೂರಲ್ ಎಜುಕೇಷನ್ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ವೈ.ಕೆ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.
ನಗರದ ಶಾಂತಿನಗರ ಬಡಾವಣೆಯಲ್ಲಿರುವ ಶಾಂತಿ ನಿಕೇತನ್ ಪಬ್ಲಿಕ್ ಶಾಲೆ ಆವರಣದಲ್ಲಿ ನಡೆದ ಪಟಾಕಿ ಕುರಿತು ಅರಿವು ಮೂಡಿಸುವ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೀಪಾವಳಿ ದೀಪದಿಂದ ದೀಪ ಹಚ್ಚಿ ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬವೇ ಹೊರತು ಪಟಾಕಿ ಸಿಡಿಸುವುದಲ್ಲ.
ಶಬ್ಧ ಮಾಲಿನ್ಯ ಉಂಟು ಮಾಡುವ ಪಟಾಕಿ ಸಿಡಿತದಿಂದ ರಕ್ತದೊತ್ತಡ, ಹೃದಯ ಸಂಬಂಧಿ ರೋಗಿಗಳಿಗೆ ತೊಂದರೆ ಯಾಗುತ್ತದೆ. ದುಬಾರಿ ಪಟಾಕಿ ಖರೀದಿಸುವ ಬದಲಿಗೆ ಹೊಸ ಉಡುಗೆ ಖರೀದಿಸಿ. ಸಂಭ್ರಮ ಮತ್ತು ಪ್ರಶಾಂತತೆಯ ಹಬ್ಬಕ್ಕೆ ಪಟಾಕಿಯಿಂದ ಭಂಗ ತರುವುದು ಬೇಡ. ಪಟಾಕಿ ಹಚ್ಚದಂತೆ ನೆರೆಹೊರೆಯವರಿಗೆ ಅರಿವು ಮೂಡಿಬೇಕು ಎಂದರು.
ಶಾಲೆಯ ಆಡಳಿತಾಧಿಕಾರಿ ಚೇತನ್ ಯಾದವ್ ಮಾತನಾಡಿ, ಪಟಾಕಿಯಲ್ಲಿನ ರಾಸಾಯಿನಿಕ ವಿಷಯುಕ್ತ ವಸ್ತುಗಳು ಆಮ್ಲಜನಕದೊಂದಿಗೆ ಸೇರಿ ಮನುಷ್ಯ ಮತ್ತು ಪ್ರತಿಯೊಂದು ಜೀವ ಸಂಕುಲದ ಮೇಲೆ ಪರಿಣಾಮ ಬೀರಿ ಅನಾರೋಗ್ಯಕರ ವಾತವರಣಕ್ಕೆ ಅವಕಾಶ ಮಾಡಿಕೊಡುತ್ತದೆ.
ಅಪ್ರಾಪ್ತ ಮಕ್ಕಳು ವಯೋವೃದ್ಧರು ರೋಗಿಗಳ ಮೇಲೆ ವ್ಯಕ್ತಿರಿಕ್ತ ತ್ತ ಪರಿಣಾಮ ಬೀರುವುದು. ಯಾವುದೇ ಕಾರಣಕ್ಕೂ ಪಟಾಕಿ ಸಿಡಿಸಲು ಮಂದಾಗಬಾರದು. ಪರಿಸರಕ್ಕೆ ಮಾರಕ ವಾಗಿರುವ ಪಟಾಕಿ ಸಿಡಿಸದೆ. ನೈಸರ್ಗಿಕ ಮಣ್ಣಿನ ಹಣತೆ ಹಚ್ಚಿ ದೀಪಾವಳಿ ಆಚರಿಸಿ ಎಂದು ಸಲಹೆ ನೀಡಿದರು.
ಮುಖ್ಯ ಶಿಕ್ಷಕಿ ಕನಕ ದುರ್ಗ ಮಾತನಾಡಿ, ಮಣ್ಣಿನ ಹಣತೆ ಹಚ್ಚುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರಾದಾಯವಾಗಿದ್ದು, ಮಕ್ಕಳು ಪಟಾಕಿಗಳನ್ನು ಸಾಂಕೇತಿಕವಾಗಿ ಸಿಡಿಸಬೇಕು. ಜೊತೆಗೆ ಜಾಗೃತಿ ವಹಿಸಬೇಕು. ಹಲವು ಮಂದಿ ಪಟಾಕಿ ಹಚ್ಚುವ ವೇಳೆ ತಮ್ಮ ಕಣ್ಣು ಕಳೆದುಕೊಂಡಿರುವ ಅನೇಕ ಉದಾರಣೆಗಳು ಇವೆ ಎಂದು ಎಚ್ಚರಿಸಿದರು.
“ಪಟಾಕಿ ಬಿಡಿ ಬಡ ಮಕ್ಕಳಿಗೆ ಒಪ್ಪೋತ್ತು ಊಟ ಕೊಡಿ’ ಎಂಬ ಘೋಷಣೆಯೊಂದಿಗೆ ಹಲವಾರು ಭಿತ್ತಿಪತ್ರಗಳನ್ನು ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಅಣುಕು ಪ್ರದರ್ಶನ ಮಾಡುವ ಮೂಲಕ ಪಟಾಕಿಯ ದುಷ್ಟಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು. ಈ ವೇಳೆ ಹಿರಿಯ ಶಿಕ್ಷಕರಾದ ಕೆ.ಆರ್ ಗೀತಾ, ಕೆ.ಆರ್ ರಮೇಶ್, ಕೆ.ಬಿ ಪ್ರಶಾಂತ್, ಮತ್ತಿತರರು ಇದ್ದರು.