ಬೆಂಗಳೂರು: ಬೆಳಕಿನ ಹಬ್ಬವಾದ ದೀಪಾವಳಿ ಹಿಂದೂ ಗಳಿಗೆ ಪ್ರಮುಖವಾಗಿದ್ದು, ಇದಕ್ಕಾಗಿ ರಾಜಧಾನಿ ಬೆಂಗ ಳೂರು ಸಜ್ಜಾಗಿದೆ. ಹಬ್ಬ ಇನ್ನೂ 2 ದಿನ ಇರುವಂತೆಯೇ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ.
ಹೂ-ಹಣ್ಣು, ತರಕಾರಿ ಹಾಗೂ ಪೂಜೆ ಸಾಮಗ್ರಿಗಳ ಖರೀದಿಯಲ್ಲಿ ಮಹಿಳೆಯರು ನಿರತರಾಗಿದ್ದರೆ, ಬಣ್ಣ ಬಣ್ಣದ ಅತ್ಯಾಕರ್ಷಕ ಆಕಾಶಬುಟ್ಟಿ, ವಿವಿಧ ವಿನ್ಯಾಸಗಳ ಹಣತೆ, ವಿವಿಧ ರೀತಿಯ ಪಟಾಕಿಗಳ ಖರೀದಿಯಲ್ಲಿ ಮಕ್ಕಳು ಸೇರಿದಂತೆ ಯುವಜನತೆ ಉತ್ಸಾಹ ತೋರುತ್ತಿತ್ತು.
-ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಸಿಲಿ ಕಾನ್ ಸಿಟಿ ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳು ಸೇರಿದಂತೆ ಅಂಗಡಿ ಮುಂಗಟ್ಟುಗಳಲ್ಲಿ ಮಂಗಳವಾ ರವೇ ಜನಸ್ತೋಮ ಕಂಡುಬಂದಿತು. ಅದರಲ್ಲೂ ಮಂಗಳವಾರ ಧನತ್ರಯೋದಶಿ ಹಿನ್ನೆಲೆಯಲ್ಲಿ ಚಿನ್ನದಂಗಡಿಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಕೆ.ಆರ್. ಮಾರುಕಟ್ಟೆ, ಗಾಂಧಿ ಬಜಾರ್, ಯಶ ವಂತಪುರ, ಬಸವನಗುಡಿ, ಮಲ್ಲೇಶ್ವರ, ಕೆ.ಆರ್.ಪುರ, ಬನಶಂಕರಿ ಮಾರುಕಟ್ಟೆಗಳಲ್ಲಿ ಹೂವು-ಹಣ್ಣುಗಳ ಖರೀದಿ ಜೋರಾಗಿದ್ದರೆ, ಜಯನಗರ, ಚಿಕ್ಕಪೇಟೆ, ಕಮರ್ಷಿಯಲ್ ಸ್ಟ್ರೀಟ್, ಮಲ್ಲೇಶ್ವರದಲ್ಲಿ ಜಗಮಗಿಸುವ ಆಕಾಶಬುಟ್ಟಿಗಳು, ವಿಭಿನ್ನ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಮಣ್ಣಿನ ದೀಪ, ಬಣ್ಣ ಬಣ್ಣದ ಕ್ಯಾಂಡಲ್, ಪಟಾಕಿಗಳ ಖರೀದಿಯ ಭರಾಟೆ ಜೋರಾಗಿತ್ತು. ಆಯುಧ ಪೂಜೆಯನ್ನು ದಸರಾ ಹಬ್ಬದಲ್ಲಿ ಮಾಡುವುದು ಸಾಮಾನ್ಯ. ಆದರೆ, ಕೆಲವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾಹನಗಳ ಪೂಜೆ, ವಿವಿಧ ಯಂತ್ರ, ಉಪಕರಣಗಳು, ಸಲಕರಣೆಗಳ ಪೂಜೆ ಮಾಡುವುದರೊಂದಿಗೆ ಆಯುಧ ಪೂಜೆಯನ್ನು ಮಾಡುತ್ತಾರೆ. ಜತೆಗೆ ಗೋಪೂಜೆಯೂ ನಡೆಯಲಿದೆ. ಒಟ್ಟಾರೆ ಹಬ್ಬದ ಸಂಭ್ರಮದೊಟ್ಟಿಗೆ ಹೂವು-ಹಣ್ಣಿನ ದರದಲ್ಲೂ ಏರಿಕೆ ಕಂಡುಬಂದಿದೆ.
ಹೂವಿನ ದರ ಏರಿಕೆ: ಮಾರುಕಟ್ಟೆಯಲ್ಲಿ ಕಳೆದ ವಾರಕ್ಕಿಂತ ಹೂವಿನ ದರಲ್ಲಿ ಏರಿಕೆ ಕಂಡು ಬಂದಿದ್ದು, ಬುಧವಾರ ಹಾಗೂ ಗುರುವಾರದಂದು ಮತ್ತಷ್ಟು ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು. ಒಂದು ಕೆ.ಜಿ. ಸೇವಂತಿಗೆ ಹೂವಿಗೆ 250 ರಿಂದ 300 ರೂ. ಇದ್ದರೆ, ಗುಲಾಬಿ 300 ರೂ., ಮಲ್ಲಿಗೆ 800ರಿಂದ 1,000 ರೂ., ಕನಕಾಂಬರ 1,200 ರಿಂದ 1,600 ರೂ., ಚೆಂಡು ಹೂವು 150 ರೂ.ನಂತೆ ನಗರದ ಗಾಂಧಿ ಬಜಾರ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆ. ಅದೇ ರೀತಿ, ಒಂದು ಕೆ.ಜಿ. ಸೇಬಿಗೆ 150ರಿಂದ 170 ರೂ., ದ್ರಾಕ್ಷಿ 90 ರೂ., ಕಿತ್ತಳೆ 45ರಿಂದ 50 ರೂ., ಅನಾನಸ್ 60 ರೂ., ದಾಳಿಂಬೆ 150ರಿಂದ 200 ರೂ., ಸಪೋಟ 65 ರೂ., ಬಾಳೆ ಹಣ್ಣು 115 ರೂ., ಮೂಸಂಬಿ 60 ರೂ., ಸೀತಾಫಲ 50 ರೂ.ಗಳಿಗೆ ಮಾರಾಟ ಮಾಡಲಾಯಿತು. ಅದೇ ರೀತಿ, ಮಂಗಳವಾರದ ಕೆ.ಆರ್. ಮಾರುಕಟ್ಟೆ ಯಲ್ಲಿ ಒಂದು ಕೆ.ಜಿ.ಆಲೂಗಡ್ಡೆಗೆ 40 ರೂ., ಈರುಳ್ಳಿ 40 ರೂ., ಕ್ಯಾರೆಟ್ 60 ರೂ., ಟೊಮೆಟೋ 40 ರೂ., ಮೆಣಸಿನಕಾಯಿ 80 ರೂ., ಸೌತೆಕಾಯಿ 30 ರೂ., ಬೀನ್ಸ್ 100 ರೂ., ಬದನೆಕಾಯಿ 60 ರೂ., ಸೀಮೆ ಬದನೆ 80 ರೂ., ಹಸಿ ಬಟಾಣಿ 180ರಿಂದ 200 ರೂ., ಹೀರೇಕಾಯಿ 80 ರೂ., ಹಾಗಲಕಾಯಿ 60 ರೂ., ಬೆಳ್ಳುಳ್ಳಿ 380 ರೂ., ಶುಂಠಿ 240 ರೂ.ಗಳಂತೆ ಮಾರಾಟ ಮಾಡಲಾಗಿದೆ ಎಂದು ಕೆ.ಆರ್. ಮಾರು ಕಟ್ಟೆಯ ತರಕಾರಿ ವ್ಯಾಪಾರಿ ಅಕ್ರಮ್ ತಿಳಿಸುತ್ತಾರೆ.
ಬಣ್ಣ-ಬಣ್ಣದ ದೀಪ, ಹಸಿರು ಪಟಾಕಿ : ಬಸವನಗುಡಿ, ಗಾಂಧಿ ಬಜಾರ್ ಮತ್ತಿತರ ಕಡೆ ಹಬ್ಬದ ವಿಶೇಷವಾಗಿ ಸಣ್ಣ ಅಳತೆಯ ಒಂದು ಡಜನ್ ಮಣ್ಣಿನ ಹಣತೆಗೆ ರೂ.50 ರಿಂದ 60 ರವರೆಗೆ ಇದ್ದರೆ, ಸ್ವಲ್ಪ ದೊಡ್ಡ ಅಳತೆಯ ಮಣ್ಣಿನ ಹಣತೆಗೆ 100ರಿಂದ 120 ರೂ. ವರೆಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಗಾತ್ರಕ್ಕೆ ಅನುಗುಣವಾಗಿ ಆಕಾಶ ಬುಟ್ಟಿಗಳು ಮಾರಾಟಕ್ಕಿದ್ದು, 150 ರೂ.ನಿಂದ 2,500 ರೂ.ರವರೆಗೆ ಮಾರಾಟವಾಗುತ್ತಿತ್ತು. ಇದರಲ್ಲೂ ನಕ್ಷತ್ರ ಮಾದರಿ, ಕಂದಿಲು ಆಕಾರದ ಆಕಾಶ ಬುಟ್ಟಿಗಳು, ಕೋಮಲ್ ಡಿಸೈನ್, ಗುಲಾಬ್ ರಂಗೀಲಾ, ಚಂದ್ರನ ಆಕಾರದ ಆಕಾಶ ಬುಟ್ಟಿಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದವು. ದೀಪಾವಳಿ ಎಂದಾಕ್ಷಣ ನಗರದ ವಿವಿಧ ಶಾಲಾ-ಕಾಲೇಜು ಮೈದಾನಗಳಲ್ಲಿ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತದೆ. ಅದರಲ್ಲಿ ವಿಶೇಷವಾಗಿ ಸುರ್ ಸುರ್ ಬತ್ತಿ, ಭೂಚಕ್ರ, ಹೂ ಕುಂಡ, ವಿಷ್ಣು ಚಕ್ರ, ಆನೆ ಪಟಾಕಿ, ರಾಕೆಟ್, ಮಾಲೆ ಪಟಾಕಿ ಸೇರಿದಂತೆ ವಿವಿಧ ಹಸಿರು ಪಟಾಕಿಗಳನ್ನು ಮಾರಾಟ ಮಾಡಲಾಗುತ್ತಿದೆ.
ನಗರದ ಐಟಿ-ಬಿಟಿ, ಖಾಸಗಿ ಕಂಪನಿಗಳಲ್ಲಿ ಸೋಮವಾರದಂದೆ ದೀಪಾವಳಿ ಹಬ್ಬವನ್ನು ಆಚರಿಸಿ, ಪೂಜೆ ಸಲ್ಲಿಸಲಾಗಿದೆ. ಕಳೆದ ವಾರಕ್ಕಿಂತ ಹೂವಿನ ದರಲ್ಲಿ ಏರಿಕೆ ಕಂಡಿದ್ದು, ಬುಧವಾರ ಹಾಗೂ ಗುರುವಾರದಂದು ಮತ್ತಷ್ಟು ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
– ಕೆ.ಆರ್.ದಿವಾಕರ್, ಅಧ್ಯಕ್ಷ, ಕೆ.ಆರ್.ಮಾರುಕಟ್ಟೆ ಸಗಟು ಹೂ ಮಾರಾಟಗಾರರ ಸಂಘ
–ಭಾರತಿ ಸಜ್ಜನ್