ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಈಗ ಮತ್ತೊಂದು ಟೆನ್ಶನ್ ಎದುರಾಗಿದೆ. ವಿಚಾರಣೆಗೆ ಎದುರಾಗುವಂತೆ ಸಿಬಿಐ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರಿಗೆ ಸಮನ್ಸ್ ನೀಡಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ನಂದ ಸಮನ್ಸ್ ಬಂದಿರುವುದು ನಿಜ. ನ.19 ರಂದು ನನಗೆ ಸಮನ್ಸ್ ಜಾರಿ ಆಗಿದೆ. ನ.25ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದರು.
ನ.19ರಂದು ನಾನು ಮಗಳ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದೆ. ಆಗ ನಮ್ಮ ಕಚೇರಿಗೆ ಬಂದು ಸಮನ್ಸ್ ಕೊಟ್ಟು ಹೋಗಿದ್ದಾರೆ. 23 ಕ್ಕೆ ಹಾಜರಾಗುವಂತೆ ಹೇಳಿದ್ದಾರೆ. ನಾಳೆಯಿಂದ ಉತ್ತರ ಕರ್ನಾಟಕ ಪ್ರವಾಸ ಆಯೋಜಿಸಲಾಗಿದೆ. ನಾನು ಸಿಬಿಐ ಅಧಿಕಾರಿಗೆ ಕರೆ ಮಾಡಿ ಮನವಿ ಮಾಡಿ, ನಾನು ಉತ್ತರ ಕರ್ನಾಟಕ ಪ್ರವಾಸ ಇರುವುದರಿಂದ 25 ಕ್ಕೆ ಹಾಜರಾಗುತ್ತೇನೆ ಅಂತ ಕೇಳಿದೆ, ಅವರು ಒಪ್ಪಿಗೆ ನೀಡಿದ್ದಾರೆ ಎಂದರು.
ಇದನ್ನೂ ಓದಿ:ಡಿಕೆ ಶಿವಕುಮಾರ್ ಭೇಟಿಯಾದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ
ಅಕ್ಟೋಬರ್ 5ರಂದು ಡಿಕೆ ಶಿವಕುಮಾರ್ ಮನೆ ಮತ್ತು ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ವಿಚಾರಣೆ ನಡೆಸಲು ಸಿಬಿಐ ಸಮನ್ಸ್ ನೀಡಿದೆ.