ಮುಂಬೈ: ನಟ ವಿಶಾಲ್ ಅಭಿನಯದ ಮಾರ್ಕ್ ಆಂಟನಿ ಚಿತ್ರದ ಪ್ರಮಾಣ ಪತ್ರ ಪಡೆಯಲು ಮುಂಬೈನ ಸೆಂಟ್ರಲ್ ಬ್ಯೂರೋ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಲಂಚ ಪಡೆದಿದೆ ಎಂಬ ಆರೋಪದ ಮೇಲೆ ಸಿಬಿಐ ಮೂರು ವ್ಯಕ್ತಿಗಳು ಸೇರಿದಂತೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
ನಟ ವಿಶಾಲ್ ಅಭಿನಯದ ಮಾರ್ಕ್ ಆಂಟನಿ ಚಿತ್ರಕ್ಕೆ ಪ್ರಮಾಣಪತ್ರ ಪಡೆಯಲು ಮುಂಬೈನ ಸೆಂಟ್ರಲ್ ಬ್ಯೂರೋ ಆಫ್ ಫಿಲ್ಮ್ ಸರ್ಟಿಫಿಕೇಶನ್ ನಟ ವಿಶಾಲ್ ಬಳಿ 6.5 ಲಂಚ ಲಂಚ ಪಡೆದಿದ್ದರು ಈ ಕುರಿತು ನಟ ವಿಶಾಲ್ ಫಿಲ್ಮ್ ಚೇಂಬರ್ ವಿರುದ್ಧ ಆರೋಪ ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಿಸಿಕೊಂಡ ಅಧಿಕಾರಿಗಳ ತಂಡ ಎಫ್‌ಐಆರ್ ನಲ್ಲಿ ನಮೂದಿಸಿದ ನಾಲ್ವರು ಆರೋಪಿಗಳ ಮನೆ ಸೇರಿದಂತೆ ಮುಂಬೈನ ನಾಲ್ಕು ಕಡೆಗಳಲ್ಲಿ ಶೋಧ ನಡೆಸಿದ್ದಾರೆ.
ನಟ ವಿಶಾಲ್ ಅಭಿನಯದ ಮಾರ್ಕ್ ಆಂಟನಿ ಚಿತ್ರದ ಹಿಂದಿ ಆವೃತ್ತಿ ಸೆಪ್ಟೆಂಬರ್ 28 ರಂದು ಬಿಡುಗಡೆಯಾಗಿತ್ತು.
ಈ ಕುರಿತು ಹೇಳಿಕೆ ನೀಡಿರುವ ಸಿಬಿಐ “ಸೆಪ್ಟೆಂಬರ್, 2023 ರಲ್ಲಿ, ಖಾಸಗಿ ವ್ಯಕ್ತಿಯೊಬ್ಬರು ರೂ. 7,00,000/- ಲಂಚವನ್ನು ಪಡೆಯಲು ಇತರರೊಂದಿಗೆ ಸಂಚು ರೂಪಿಸಿದರು ಮತ್ತು ಹಿಂದಿಗೆ ಡಬ್ ಮಾಡಿದ ಚಲನಚಿತ್ರಕ್ಕಾಗಿ ಮುಂಬೈನ CBFC ಯಿಂದ ಅಗತ್ಯವಿರುವ ಸೆನ್ಸಾರ್ ಪ್ರಮಾಣಪತ್ರವನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಆರಂಭದಲ್ಲಿ CBFC ಮುಂಬೈ ಅಧಿಕಾರಿಗಳ ಪರವಾಗಿ ದೂರುದಾರರಿಂದ ರೂ.7,00,000/- ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಬಳಿಕ ಸಂಧಾನ ಮಾತುಕತೆಯ ಬಳಿಕ ರೂ.6,54,000/- ಅನ್ನು ನೀಡುವಂತೆ ಮಾತುಕತೆ ನಡೆಸಲಾಗಿತ್ತು ಆ ಬಳಿಕ ಇಬ್ಬರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಹಾಕಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Bollywood: 9 ವರ್ಷದ ಸಲ್ಲು – ಅರಿಜಿತ್ ಮುನಿಸಿಗೆ ಕೊನೆ? ಟೈಗರ್ ಮನೆಗೆ ಭೇಟಿ ಕೊಟ್ಟ ಗಾಯಕ