Advertisement

ಐಸಿಐಸಿಐ ಬ್ಯಾಂಕ್‌ ಅಧಿಕಾರಿಗಳ ವಿಚಾರಣೆ

06:00 AM Apr 01, 2018 | Team Udayavani |

ಹೊಸದಿಲ್ಲಿ: ವಿಡಿಯೋಕಾನ್‌ ಸಂಸ್ಥೆಗೆ 2012ರಲ್ಲಿ ಐಸಿಐಸಿಐ ಬ್ಯಾಂಕ್‌ 3250 ಕೋಟಿ ರೂ. ಸಾಲ ನೀಡಿರುವುದಕ್ಕೆ ಸಂಬಂಧಿಸಿದ ಬ್ಯಾಂಕ್‌ ಅಧಿಕಾರಿಗಳನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದೆ. ಸಾಲ ನೀಡುವ ಪ್ರಕ್ರಿಯೆಯಲ್ಲಿ ಯಾವುದೇ ಅನುಕೂಲ ಒದಗಿಸಲಾಗಿತ್ತೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಲಾಗಿದೆ. ಈಗಾಗಲೇ ಐಸಿಐಸಿಐ ಬ್ಯಾಂಕ್‌ನ ಸಿಇಒ ಚಂದಾ ಕೊಚ್ಚಾರ್‌, ಪತಿ ದೀಪಕ್‌  ಹಾಗೂ ವಿಡಿಯೋಕಾನ್‌ ಮುಖ್ಯಸ್ಥ ವೇಣುಗೋಪಾಲ್‌ ಧೂತ್‌ ವಿರುದ್ಧ ಸಿಬಿಐ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಸಾಲ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಲು ಸಿಬಿಐ ನಿರ್ಧರಿಸಿದ್ದು, ಯಾವುದೇ ಅವ್ಯವಹಾರ ಕಂಡುಬಂದರೆ ಚಂದಾ ಹಾಗೂ ದೀಪಕ್‌ರನ್ನೂ ವಿಚಾರಣೆಗೆ ಒಳಪಡಿಸುವುದಾಗಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next