Advertisement

CBI vs. CBI: ಸುಪ್ರೀಂ ಮೆಟ್ಟಲೇರಿದ ಡೆಪ್ಯುಟಿ ಎಸ್‌ಪಿ AK ಬಸ್ಸಿ

11:42 AM Oct 30, 2018 | Team Udayavani |

ಹೊಸದಿಲ್ಲಿ : ಸಿಬಿಐ ವರ್ಸಸ್‌ ಸಿಬಿಐ ಕದನದ ಮುಂದುವರಿದ ಭಾಗವಾಗಿ ಸಿಬಿಐನ ಡೆಪ್ಯುಟಿ ಎಸ್‌ಪಿ AK ಬಸ್ಸಿ ಅವರು ಇದೀಗ ಸುಪ್ರೀಂ ಕೋರ್ಟ್‌ ಮೆಟ್ಟಲೇರಿದ್ದಾರೆ. ತನ್ನ ವಿರುದ್ಧ ಸರಕಾರ ಕಳೆದ ವಾರ ಜಾರಿಗೊಳಿಸಿರುವ ವರ್ಗಾವಣೆ ಆದೇಶವನ್ನು ಬಸ್ಸಿ ಪ್ರಶ್ನಿಸಿದ್ದಾರೆ.

Advertisement

ಆದರೆ ಸುಪ್ರೀಂ ಕೋರ್ಟ್‌ ಬಸ್ಸಿ ಅವರ ಮನವಿ ಪ್ರಕಾರ  ಶುಕ್ರವಾರದ ತುರ್ತು ವಿಚಾರಣೆಯ ಕೋರಿಕೆಯನ್ನು ತಿರಸ್ಕರಿಸಿದೆ. 

ಸಿಬಿಐ ಎರಡನೇ ಕ್ರಮಾಂಕದ ಉನ್ನತ ಅಧಿಕಾರಿಯಾಗಿರುವ ರಾಕೇಶ್‌ ಅಸ್ಥಾನ ವಿರುದ್ಧದ ಲಂಚದ ಆರೋಪದ ಬಗ್ಗೆ ತನ್ನಲ್ಲಿ ನಿರ್ಣಾಯಕ ಸಾಕ್ಷ್ಯವಿದೆ ಎಂದು ಬಸ್ಸಿ ಹೇಳಿಕೊಂಡಿದ್ದಾರೆ. ಮಾತ್ರವಲ್ಲ ತಾಂತ್ರಿಕ ಕಣ್ಗಾವಲು  ಸಾಕ್ಷ್ಯವನ್ನು ತರಿಸಿಕೊಳ್ಳುವಂತೆ ಅವರು ಸುಪ್ರೀಂ ಕೋರ್ಟ್‌ ಗೆ ಮನವಿ ಮಾಡಿಕೊಂಡಿದ್ದಾರೆ.  ಮೇಲಾಗಿ ಅಸ್ಥಾನ ವಿರುದ್ದ  ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ವನ್ನು ರಚಿಸಬೇಕೆಂದೂ ಬಸ್ಸಿ ಆಗ್ರಹಿಸಿದ್ದಾರೆ. 

ತನಿಖಾಧಿಕಾರಿ ಬಸ್ಸಿ ಅವರು ಅಸ್ಥಾನಾ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ತನಿಖೆಯನ್ನು ನಡೆಸುತ್ತಿದ್ದರು. ಕಳೆದ ಬುಧವಾರ ಬಸ್ಸಿ ಅವರನ್ನು ಪೋರ್ಟ್‌ ಬ್ಲೇರ್‌ ಗೆ ಭ್ರಷ್ಟಾಚಾರ ನಿಗ್ರಹ ಶಾಖೆ (ಎಸಿಬಿ) ಡೆಪ್ಯುಟಿ ಎಸ್‌ಪಿ ಯಾಗಿ “ಸಾರ್ವಜನಿಕ ಹಿತಾಸಕಿ’ಯಲ್ಲಿ ವರ್ಗಾಯಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next