ಹಿರೇಕೆರೂರ: ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಸರ್ಕಾರದ ನಿರ್ದೇಶನದಂತೆ ಮಕ್ಕಳ ಹಿತದೃಷ್ಟಿಯಿಂದ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಇಎಸ್ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ತಿಳಿಸಿದರು. ಇಲ್ಲಿನ ಕೆ.ಎಚ್. ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆಯುವ ದ್ವಿತೀಯ ಪಿಯುಸಿ ಇಂಗ್ಲಿಷ್ ಭಾಷಾ ಪರೀಕ್ಷೆ ನಿಮಿತ್ತ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಅವರು ಮಾಹಿತಿ ನೀಡಿದರು.
ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೆ ಪರೀಕ್ಷೆ ಬರೆಯಬೇಕು. ಇಲಾಖೆ ನಿಯಮದಂತೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜು ಹಾಗೂ ಕೊಠಡಿಯನ್ನು ಸಂಪೂರ್ಣ ಸ್ಯಾನಿಟೈಸರ್ ಮಾಡಲಾಗಿದ್ದು, ನಮ್ಮ ಮಹಾವಿದ್ಯಾಲಯದಲ್ಲಿ ತಾಲೂಕಿನ 7 ಪದವಿ ಪೂರ್ವ ಕಾಲೇಜುಗಳ 530 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 3 ಗೇಟ್‌ಗಳ ಮೂಲಕ ವಿದ್ಯಾರ್ಥಿಗಳ ಆಗಮನಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಥರ್ಮಲ್ ಸ್ಕ್ಯಾನರ್ ನಿಂದ ಪರೀಕ್ಷಿಸಲಾಗುವುದು. ವಿದ್ಯಾರ್ಥಿಗಳ ಕೈಗೆ ಸ್ಯಾನಿಟೈಸರ್ ಸಿಂಪಡಿಸಿ ಕೊಠಡಿಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು.
ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾಸ್ಕ್ ವಿತರಿಸಲಾಗುವುದು ಎಂದು ತಿಳಿಸಿದರು. ಪ್ರಾಚಾರ್ಯ ಎಸ್. ವೀರಭದ್ರಯ್ಯ, ಉಪನ್ಯಾಸಕರಾದ ಎಸ್.ಬಿ. ನೂಲ್ವಿ, ಎಂ.ಎಸ್. ರುದ್ರಗೌಡ, ಜಾವಿದ್ ಬಾಷಾ, ಕೆ.ಎಚ್. ಮಾವಿನತೋಪ, ರೇಖಾ ಎಂ.ಪಿ., ರಮೇಶ ಮೆಣಸಿನಗೇರಿ, ಕೆ.ಆರ್. ಲಮಾಣಿ, ಆರ್.ಎಂ. ಕರೆಗೌಡ, ಎನ್.ಬಿ. ಮುದಕನಗೌಡರ, ಎಂ.ಜಿ. ಕಡದಕಟ್ಟಿ, ಸಿ.ಸಿ. ಮರಿಗೂಳಪ್ಪನವರ ಇತರರಿದ್ದರು.
ಶಿಗ್ಗಾವಿ: ಪಿಯು ಆಂಗ್ಲಭಾಷೆ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ನೀಡಿದ ಥರ್ಮಲ್ ಸ್ಕ್ರೀನಿಂಗ್ ಮಷಿನ್, ಸ್ಯಾನಿಟೈಜ್ ಮತ್ತು ಮಾಸ್ಕ್ಗಳನ್ನು ಅಭಿಮಾನಿ ಬಳಗದವರು ವಿತರಿಸಿದರು. ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಬಿಇಒ ಎಂ.ವಿ. ಚಿಕ್ಕಮಠ, ರೇಣುಕನಗೌಡ ಪಾಟೀಲ, ಶ್ರೀಕಾಂತ ಬುಳ್ಳಕ್ಕನವರ, ಮಂಜುನಾಥ ಬ್ಯಾಹಟ್ಟಿ, ನರಹರಿ ಕಟ್ಟಿ, ಮಲ್ಲನಗೌಡ ಪಾಟೀಲ, ಹರ್ಜಪ್ಪ ಲಮಾಣಿ, ಲಿಂಗರಾಜ ಹಳವಳ್ಳಿ, ಅಶೋಕ ಹುಣಸಿಕಟ್ಟಿ, ಹನುಮಂತಪ್ಪ ಹರಿಜನ, ಷಣ್ಮುಖ ಹರಿಜನ, ಶಂಕರಣ್ಣ ಇಂಗಳಗಿ, ರಾಜೇಶ
ದೊಡ್ಡಮನಿ ಸೇರಿದಂತೆ ಮುಖ್ಯಾಧ್ಯಾಪಕರು, ಶಿಕ್ಷಕರು ಇದ್ದರು.