ಮುಂಬಯಿ : ನವೀ ಮುಂಬಯಿಯಲ್ಲಿ ನಡೆದಿರುವ ಅತ್ಯಂತ ಅವಮಾನಕಾರೀ ಪ್ರಕರಣದಲ್ಲಿ, ವ್ಯಕ್ತಿಯೋರ್ವ ತುರ್‌ಭೇ ರೈಲ್ವೇ ನಿಲ್ದಾಣದಲ್ಲಿ ಹುಡುಗಿಯೊಬ್ಬಳಿಗೆ ಬಲವಂತದಿಂದ ಕಿಸ್ ನೀಡಲು ಯತ್ನಿಸಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿ ಇದೀಗ ವೈರಲ್ ಆಗಿದೆ.
ವಿಡಿಯೋದಲ್ಲಿ ಕಂಡು ಬರುವಂತೆ ಆರೋಪಿ ಕಾಮುಕ ವ್ಯಕ್ತಿಯು ಹುಡುಗಿಯತ್ತ ನಡೆದುಕೊಂಡು ಹೋಗುತ್ತಿದ್ದಾನೆ; ಆಕೆಯನ್ನು ಸಮೀಪಿಸುತ್ತಿದ್ದಂತೆಯೇ ಆಕೆಯನ್ನು ಬಲವಂತದಿಂದ ಬರಸೆಳೆದ ಆತ ಆಕೆಗೆ ಮುತ್ತಿಕ್ಕಲು ಯತ್ನಿಸಿದ್ದಾನೆ; ತನ್ನ ಮೇಲಿನ ಈ ಅನಿರೀಕ್ಷಿತ ಲೈಂಗಿಕ ದಾಳಿಯಿಂದ ಹುಡುಗಿ ಅರೆಕ್ಷಣ ತತ್ತರಿಸಿದಳಾದರೂ ಕೂಡಲೇ ಆ ಕಾಮುಕನಿಗೆ ಆಕೆ ಪ್ರತಿರೋಧ ಒಡ್ಡಿದ್ದಾಳೆ; ಆಗ ಏನೂ ಆಗಿಲ್ಲವೆಂಬಂತೆ ಕಾಮುಕ ವ್ಯಕ್ತಿಯು ಅಲ್ಲಿಂದ ನಡೆದುಕೊಂಡು ಹೋಗಿದ್ದಾನೆ.
#WATCH: Girl molested at Turbhe railway station in Navi Mumbai yesterday; accused has been arrested after complaint #Maharashtra pic.twitter.com/kwUfFhCZZG
— ANI (@ANI) February 23, 2018
Related Articles
ವಿಚಿತ್ರವೆಂದರೆ ತನ್ನ ಸುತ್ತಮುತ್ತಲಿರುವ ಜನರ ಬಗ್ಗೆ ಆರೋಪಿ ಕಾಮುಕ ವ್ಯಕ್ತಿಗೆ ಯಾವುದೇ ಭಯ, ಭೀತಿ, ಸಂಕೋಚ ಇದ್ದಂತೆ ಕಾಣುವುದಿಲ್ಲ. ಹಾಗೆಯೇ ಆತ ಹುಡುಗಿಯ ಮೇಲೆ ಅನಿರೀಕ್ಷಿತ ಲೈಂಗಿಕ ದಾಳಿ ಮಾಡುವಾಗ ಸಮೀಪದಲ್ಲಿ ಹಾದು ಹೋಗುವವರು ಯಾರೂ ಹುಡುಗಿಯ ನೆರವಿಗೆ ಬರಲಿಲ್ಲ ! ತಾನು ಕೆಲಸ ಮಾಡುವ ಘನ್‌ಸೋಲಿಗೆ ಹೋಗಲು ನಿನ್ನೆ ಗುರುವಾರ ಹುಡುಗಿಯು ಲೋಕಲ್ ಟ್ರೈನ್ ಕಾಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ, ಸಿಸಿಟಿವಿ ಗಮನಿಸುತ್ತಿದ್ದ ರೈಲ್ವೇ ರಕ್ಷಣಾ ಪಡೆ ಸಿಬಂದಿಗಳು ಆರೋಪಿ ಕಾಮುಕ ವ್ಯಕ್ತಿಯನ್ನು ಸೆರೆ ಹಿಡಿದಿದ್ದಾರೆ. 43ರ ಹರೆಯದ ಈ ವ್ಯಕ್ತಿಯನ್ನು ನರೇಶ್ ಕೆ ಜೋಶಿ ಎಂದು ಗುರುತಿಸಲಾಗಿದೆ. ಆತನಿಂದ ಲೈಂಗಿಕ ದಾಳಿಗೆ ಗುರಿಯಾದ ಹುಡುಗಿಯು ಪೊಲೀಸರಿಗೆ ದೂರು ನೀಡಿದ್ದಾಳೆ.