Advertisement

Catholic Priest: ಚರ್ಚ್‌ ಪಾದ್ರಿ ಬಿಜೆಪಿಗೆ ಸೇರ್ಪಡೆ, ಕರ್ತವ್ಯದಿಂದ ವಜಾಗೊಳಿಸಿದ ಚರ್ಚ್

01:50 PM Oct 03, 2023 | Team Udayavani |

ತಿರುವನಂತಪುರ: ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡ ಕೆಲವೇ ಗಂಟೆಗಳಲ್ಲಿ ಕ್ಯಾಥೋಲಿಕ್‌ ಪಾದ್ರಿಯೊಬ್ಬರನ್ನು ಚರ್ಚ್‌ ನ ವಿಕಾರ್‌ ಹುದ್ದೆಯಿಂದ ವಜಾಗೊಳಿಸಿರುವ ಘಟನೆ ಇಡುಕ್ಕಿಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.‌

Advertisement

ಇದನ್ನೂ ಓದಿ:Lahore 1947: ಸನ್ನಿ ಡಿಯೋಲ್‌ ಸಿನಿಮಾಕ್ಕೆ ಆಮಿರ್‌ ಬಂಡವಾಳ; ಸೂಪರ್‌ ಹಿಟ್ ನಿರ್ದೇಶಕ ಸಾಥ್

ಸೋಮವಾರ (ಅ.02) ಇಡುಕ್ಕಿಯ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ಅಜಿ ಅವರಿಂದ ಫಾ|ಕುರಿಯಕೋಸೆ ಮಟ್ಟಂ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದ್ದರು. ಈ ವಿಷಯ ತಿಳಿದ ಕೂಡಲೇ ಕ್ಯಾಥೋಲಿಕ್‌ ಧರ್ಮಪ್ರಾಂತ್ಯವು ಫಾ.ಕುರಿಯಕೋಸೆ ವಿರುದ್ಧ ಕ್ರಮ ತೆಗೆದುಕೊಂಡಿರುವುದಾಗಿ ಪಿಟಿಐ ವರದಿ ವಿವರಿಸಿದೆ.

ಆದಿಮಲಿ ಸಮೀಪದ ಮಂಕುವಾ ಸೈಂಟ್‌ ಥಾಮಸ್‌ ಚರ್ಚ್‌ ನಲ್ಲಿ ಫಾದರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಫಾ.ಮಟ್ಟೊಮ್‌ ಅವರನ್ನು ತಾತ್ಕಾಲಿಕವಾಗಿ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ ಎಂದು ಚರ್ಚ್‌ ತಿಳಿಸಿದೆ.

ಚರ್ಚ್‌ ನ ಪಾದ್ರಿಯಾದವರು ಯಾವುದೇ ರಾಜಕೀಯ ಪಕ್ಷವನ್ನು ಸೇರುವುದಾಗಲಿ ಅಥವಾ ಸಕ್ರಿಯವಾಗಿ ಪಾಲ್ಗೊಳ್ಳುವುದು ಕಾನೂನು ಬಾಹಿರ. ಈ ಹಿನ್ನೆಲೆಯಲ್ಲಿ ಕ್ಯಾನೊನ್‌ ಕಾನೂನು ಪ್ರಕಾರ ಫಾದರ್‌ ಕುರಿಯಕೋಸೆ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗಿದೆ ಎಂದು ಚರ್ಚ್‌ ವಕ್ತಾರರೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

Advertisement

“ನಾನು ಪ್ರಚಲಿತ ವಿಷಯಗಳನ್ನು ಗಮನಿಸುತ್ತಿದ್ದೇನೆ. ಹಾಗಾಗಿ ಭಾರತೀಯ ಜನತಾ ಪಕ್ಷ ಸೇರದಿರಲು ನನಗೆ ಯಾವ ಕಾರಣವೂ ಸಿಕ್ಕಿಲ್ಲ. ನನಗೆ ಬಿಜೆಪಿಯಲ್ಲಿ ಹಲವಾರು ಮಂದಿ ಗೆಳೆಯರಿದ್ದಾರೆ. ಈಗ ನಾನು ಬಿಜೆಪಿ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದೇನೆ ಎಂದು ಫಾ. ಕುರಿಯಕೋಸೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next