Advertisement

ಹಾಂಕಾಂಗ್‌ಗೆ ನೇರ ಸಂಪರ್ಕ ಕಲ್ಪಿಸುವ ವಿಮಾನ ಹಾರಟ ಪ್ರಾರಂಭ

02:17 PM Sep 02, 2022 | Team Udayavani |

ಬೆಂಗಳೂರು: ಹಾಂಕಾಂಗ್‌ನೊಂದಿಗೆ ಉತ್ತಮ ವ್ಯಾವಹಾರಿಕ ಬಾಂಧವ್ಯ ಹೊಂದುವ ಉದ್ದೇಶದಿಂದ ಅಕ್ಟೋಬರ್‌ 11ರಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾಂಕಾಂಗ್‌ಗೆ ನೇರ ವಿಮಾನ ಸಂಪರ್ಕ ಪ್ರಾರಂಭಿಸಲಾಗುತ್ತಿದ್ದು, ಕ್ಯಾಥೆ ಪೆಸಿಫಿಕ್‌ ವಿಮಾನವು ಹಾರಾಟ ನಡೆಸಲಿದೆ.

Advertisement

ಬೆಂಗಳೂರು ವಿಮಾನ ನಿಲ್ದಾಣವೂ ದೇಶದ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ವಿಶ್ವದ ಎಂಟು ಪತಿಷ್ಠಿತ ವಿಮಾನ ಸಂಸ್ಥೆಗಳು ಬೆಂಗಳೂರು ವಿಮಾನ ನಿಲ್ದಾಣವನ್ನು ದಕ್ಷಿಣ ಭಾರತದ ಗೇಟ್‌ವೇ ಎಂದೇ ಪರಿಗಣಿಸಿವೆ. ಇದರ ಹೆಮ್ಮೆಯ ಭಾಗವಾಗಿ ಇದೀಗ ಹಾಂಕಾಂಗ್‌ಗೆ ನೇರವಾಗಿ ವಿಮಾನ ಹಾರಟವನ್ನು ಪ್ರಾರಂಭಿಸುತ್ತಿರುವುದು ಖುಷಿ ನೀಡಿದೆ. ಅಕ್ಟೋಬರ್‌ 11 ರಿಂದ ಕ್ಯಾಥೆ ಪೆಸಿಫಿಕ್‌ನ ಬೋಯಿಂಗ್‌ 777-300 ಎರಡು ವಿಮಾನವು ತಡೆರಹಿತ ಹಾರಾಟ ನಡೆಸಲಿದೆ ಎಂದು ಬಿಐಎಎಲ್‌ನ ಮುಖ್ಯ ಕಾರ್ಯತಂತ್ರ ಅಧಿಕಾರಿ ಸತ್ಯಕಿ ರಘುನಾಥ್‌ ಹೇಳಿದರು.

ಇದನ್ನೂ ಓದಿ:ಪ್ರಧಾನಿ ಮೋದಿ ಮಂಗಳೂರಿಗೆ ಆಗಮನ: ಆತ್ಮೀಯ ಸ್ವಾಗತ, ಕಾರ್ಯಕರ್ತರ ಹರ್ಷೋಧ್ಘಾರ

ಈ ವಿಮಾನದಲ್ಲಿ ಮೂರು ಕ್ಯಾಬಿನ್‌ಗಳಿದ್ದು ಎಕನಾಮಿಕ್‌, ಪ್ರೀಮಿಯಂ ಎಕನಾಮಿಕ್‌ ಹಾಗೂ ಬ್ಯುಸಿನೆಸ್‌ ಕ್ಲಾಸ್‌ ಇರಲಿದೆ.  ಇದುವರೆಗೂ ಮುಂಬೈ ಹಾಗೂ ದೆಹಲಿಯಿಂದ ಮಾತ್ರ ಹಾಂಕಾಂಗ್‌ಗೆ ನೇರವಾಗಿ ವಿಮಾನ ಸೌಲಭ್ಯವಿತ್ತು. ದಕ್ಷಿಣ ಭಾರತದ ಜನರು ಹಾಂಕಾಂಗ್‌ಗೆ ತೆರಳಲು ದೆಹಲಿಯಲ್ಲಿ ಇಂಟರ್‌ಚೇಂಜ್‌ ಮಾಡಬೇಕಾಗಿತ್ತು. ಆದರೀಗ ದಕ್ಷಿಣ ಭಾರತದ ಜನರಿಗಾಗಿಯೇ ಬೆಂಗಳೂರಿನಲ್ಲಿ ನೇರ ಸಂಪರ್ಕ ಕಲ್ಪಿಸುವ ವಿಮಾನ ಹಾರಾಟವನ್ನು ಪ್ರಾರಂಭಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ವಿವರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next