Advertisement
ಅವರು ಸರ್ವಋತು ಬಂದರು ಪ್ರದೇಶ ಕಾರವಾರದ ಬೈತಖೋಲದಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಗಾಳ ಹಾಕುವ ಸ್ಪರ್ಧೆ ಮುಂದಿನ ದಿನದಲ್ಲಿ ದೊಡ್ಡ ಮಟ್ಟದಲ್ಲಿ ಮಾಡೋಣ ಎಂದರು.
Related Articles
Advertisement
ಜಿಲ್ಲಾ ಮೀನು ಮಾರಾಟಗಾರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಮಾತನಾಡಿ, ಸಮುದ್ರದಲ್ಲಿ ಮೀನುಗಾರರು ಮೀನು ಹಿಡಿಯುವ ಸಂದರ್ಭದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸೀಬರ್ಡ್ ಆದ ಮೇಲೆ ಅವರ ದಬ್ಟಾಳಿಕೆ ಹೆಚ್ಚಾಗಿದೆ. ಹೊಡೆಯುವುದು, ಬಂದೂಕು ತೋರಿಸುವುದು ಮಾಡುತ್ತಾರೆ. ಇದರಿಂದ ಮೀನುಗಾರರ ಭಯದ ವಾತಾವರಣದಲ್ಲೇ ಮೀನುಗಾರಿಕೆ ಮಾಡುವ ಅನಿವಾರ್ಯತೆ ಇದೆ. ಜಿಲ್ಲಾಧಿಕಾರಿಗಳಾದ ಮುಗಿಲನ್ ಅವರು ಗಮನಕ್ಕೆ ತಂದಾಗ, ಅವರು ಸೀಬರ್ಡ್ ಅಧಿಕಾರಿಗಳಿಗೆ ಕೆಲ ಸೂಚನೆ ನೀಡಿದ್ದಾರೆ. ಈಗ ಸೀಬರ್ಡ್‌ನವರ ದಬ್ಟಾಳಿಕೆ ಕಡಿಮೆಯಾಗಿದೆ ಎಂದರು.
ಮೀನುಗಾರರದ್ದು ಸಂಕಷ್ಟದ ಬದುಕು. ಮೀನುಗಾರಿಕೆಗೆ ತೆರಳಿದ ಎಲ್ಲರಿಗೂ ಮೀನು ದೊರೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಗಾಳಿ ಮಳೆ ನಡುವೆ ಮೀನಿಗಾಗಿ ಹೋರಾಡುವ ಮೀನುಗಾರರಿಗೂ ಇದೀಗ ಗಾಳ ಹಾಕಿ ಮೀನು ಹಿಡಿಯುವ ಪದ್ಧತಿ ಮರೆತುಹೋಗಿದೆ. ಆದರೆ ಈ ಪದ್ಧತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವಕರು ಈ ಸ್ಪರ್ಧೆ ಆಯೋಜಿಸಿರುವುದು ಒಳ್ಳೆಯದು ಎಂದು ಹೇಳಿದರು.
ಮೀನುಗಾರಿಕಾ ಇಲಾಖೆ ಉಪನಿರ್ದೇಶಕಿ ಕವಿತಾ ಆರ್.ಕೆ., ಮೀನುಗಾರ ಮುಖಂಡ ರಾಜೇಶ ಮಾಜಾಳಿಕರ್, ನಗರಸಭೆ ಸದಸ್ಯೆ ಸ್ನೇಹಲ್ ಚೇತನ ಹರಿಕಂತ್ರ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪ್ರತೀಕ ಶೆಟ್ಟಿ, ತುಕಾರಾಮ್ ಉಳ್ವೆàಕರ್, ಅಶೋಕ ಕುಡ್ತಲ್ಕರ್ ಸೇರಿದಂತೆ ಇನ್ನಿತರರು ಇದ್ದರು.
ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಗೆ ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲದೆ ಹುಬ್ಬಳ್ಳಿ ಸೇರಿ ವಿವಿಧ ಭಾಗಗಳಿಂದ ಸುಮಾರು 30ಕ್ಕೂ ಹೆಚ್ಚು ಸ್ಪರ್ಧಾಳುಗಳು ಆಗಮಿಸಿದ್ದರು. ಕೈಯಲ್ಲಿ ಮತ್ತು ರೇಡಿಯಂ ಮೂಲಕ ಹೀಗೆ ಎರಡು ವಿಧದಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯೂ ಸಂಜೆವರೆಗೆ ನಡೆಯಿತು.
ಪರಿಣಿತ ಗಾಳ ಹಾಕುವ ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೆಲವರು ಸಣ್ಣ ಪುಟ್ಟ ಮೀನುಗಳನ್ನು ಹಿಡಿದರೆ ಇನ್ನು ಕೆಲವರು ಎರಡು ಕೆ.ಜಿ ತೂಕದ ಮೀನನ್ನು ಸಹ ಹಿಡಿದು ಗಮನ ಸೆಳೆದರು. ಇನ್ನು ಕೇವಲ ಮೀನು ಹಿಡಿಯಲು ಮಾತ್ರವಲ್ಲದೆ ನೋಡಲು ಕೂಡ ಸಾಕಷ್ಟು ಮಂದಿ ಆಗಮಿಸಿದ್ದರು. ನಗರದ ಬೈತಖೋಲ್‌ನಲ್ಲಿ ಯುವ ಮೀನುಗಾರರ ಸಂಘರ್ಷ ಸಮಿತಿಯು ರವಿವಾರ ಆಯೋಜಿಸಿದ್ದ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಕಾರ್ಯಕ್ರಮ ಆಯೋಜಿಸಿತ್ತು.