Advertisement

“ಜಾತಿ, ಮತ, ಧರ್ಮ ಕಿತ್ತೂಗೆಯಲು ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಿ’

07:37 AM Jul 31, 2017 | |

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಮಗನೊಂದಿಗೆ ಚೆಸ್‌ ಆಡಿದ ಫೋಟೋ ಪ್ರಕಟಿಸಿ ಇಸ್ಲಾಂ ಮೂಲಭೂತವಾದಿಗಳ ಆಕ್ರೋಶಕ್ಕೆ ಗುರಿಯಾಗಿದ್ದ ಕ್ರಿಕೆಟಿಗ ಮೊಹಮ್ಮದ್‌ ಕೈಫ್ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.

Advertisement

ಮೂಲಭೂತವಾದಿಗಳ ವರ್ತನೆಯನ್ನು ಕಟು ಪದಗಳಿಂದ ಟೀಕಿಸಿದ್ದಾರೆ. ಅಷ್ಟೇ ಅಲ್ಲ ಜಾತಿ, ಮತ, ಧರ್ಮದ ಬೇಲಿಯನ್ನು ಕಿತ್ತೂಗೆಯಲು ಕ್ರೀಡೆಯಿಂದ ಸಾಧ್ಯ. ನೀವೆಲ್ಲ ಹೆಚ್ಚು ಕ್ರೀಡೆಯಲ್ಲಿ ಪಾಲ್ಗೊಳ್ಳಿ ಅಂಧತ್ವವನ್ನು ತೊಲಗಿಸಿರಿ ಎಂದು ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ. ಈ ಮೂಲಕ ಮೂಲಭೂತವಾದಿಗಳಿಗೆ ಕೈಫ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಚೆಸ್‌ ಒಂದು ಅದ್ಭುತ ಆಟ. ಎಲ್ಲಕ್ಕಿಂತ ಮಿಗಿಲಾಗಿ ಇದು ಭಾರತದ ಆಟ. ಇದಕ್ಕೆ ಪುರಾತನ ಇತಿಹಾಸವಿದೆ. ಚೆಸ್‌ ಆಡುವ ಮೂಲಕ ನಾನು ಬುದ್ಧಿ ಶಕ್ತಿ ಹೆಚ್ಚಿಸಿಕೊಂಡಿದ್ದೇನೆ. ಹಲವು ಕಷ್ಟದ ಸಂದರ್ಭಗಳನ್ನು ಸಲೀಸಾಗಿ ಎದುರಿಸಿದ್ದೇನೆ. ಚೆಸ್‌ ಆಟ ಅಷ್ಟರ ಮಟ್ಟಿಗೆ ನನಗೆ ಸಹಾಯ ಮಾಡಿದೆ. ಇದನ್ನು ಆಡುವುದು ಕ್ರೈಂ ಮಾಡಿದಷ್ಟು ದೊಡ್ಡ ತಪ್ಪು ಎನ್ನುವ ಮಟ್ಟದ ಚಿತ್ರಣ ನೀಡಲಾಗಿದೆ ಎಂದು ಅವರು ಟ್ವೀಟರ್‌ನಲ್ಲಿ ಉತ್ತರಿಸಿದ್ದಾರೆ. ಮೂರು ದಿನಗಳ ಹಿಂದೆ ಕೈಫ್ ಮಗ ನೊಂದಿಗೆ ಚೆಸ್‌ ಆಡಿದ ಫೋಟೋ ಪ್ರಕಟಿಸಿ ದನ್ನು ಮುಸ್ಲಿಂ ಸಂಪ್ರದಾಯ ವಾದಿಗಳು ಖಂಡಿಸಿದ್ದರು. ಇಸ್ಲಾಂನಲ್ಲಿ ಚೆಸ್‌ ಆಡಬಾರದು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next