Advertisement

Caste census issue: ಲೋಕಸಭೆಯಲ್ಲಿ ಅನುರಾಗ್‌-ರಾಹುಲ್‌ ಜಟಾಪಟಿ

12:27 AM Jul 31, 2024 | Team Udayavani |

ಹೊಸದಿಲ್ಲಿ: ಜಾತಿ ಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಭೆ­ಯಲ್ಲಿ ಮಾಜಿ ಸಚಿವ ಅನುರಾಗ್‌ ಠಾಕೂರ್‌ ಮತ್ತು ವಿಪಕ್ಷ ನಾಯಕ ರಾಹುಲ್‌ ಗಾಂಧಿ ನಡುವೆ ವಾಗ್ವಾದ ನಡೆದಿದೆ.

Advertisement

“ತನ್ನ ಜಾತಿಯ ಬಗ್ಗೆಯೇ ಗೊತ್ತಿಲ್ಲದವರು ಜಾತಿ ಗಣತಿ ಬಗ್ಗೆ ಮಾತ ನಾಡುತ್ತಿದ್ದಾರೆ’ ಎಂದು ಠಾಕೂರ್‌ ಹೇಳಿದ್ದು  ವಾಗ್ವಾದಕ್ಕೆ ಕಾರಣವಾಯಿತು. ಗದ್ದಲದ ನಡುವೆ­ಯೇ ಮಾತನಾಡಿದ ರಾಹುಲ್‌ ಗಾಂಧಿ “ನೀವು ನನ್ನನ್ನು ಏನು ಬೇಕಾ ದರೂ ಹೇಳಿ ಅವಮಾನ ಮಾಡ ಬಹುದು. ಜಾತಿ ಗಣತಿ ನಡೆಸುವ ಬಗ್ಗೆ ಸಂಸತ್‌ನಲ್ಲಿ ಮಸೂದೆ ಮಂಡಿಸಿ ಅದಕ್ಕೆ ಅನುಮೋದನೆ ಪಡೆದು ಕೊಳ್ಳು­ತ್ತೇವೆ’ ಎಂದರು. ತುಳಿತಕ್ಕೆ ಒಳಗಾದವರ ಬಗ್ಗೆ ದುಡಿಯುವವರಿಗೆ, ಅವರ ಪರ ಕೆಲಸ ಮಾಡುವವರು ಯಾವತ್ತೂ ಅವಮಾನ ಎದುರಿಸುತ್ತಾರೆ.

ನಾನು ಅರ್ಜುನನಂತೆ: ಮಹಾ­ಭಾರತ ದಲ್ಲಿ ಅರ್ಜುನ ನನಗೆ ಹಕ್ಕಿ ಕಣ್ಣು ಮಾತ್ರ ಕಾಣುತ್ತದೆ ಎಂದು ಹೇಳಿದಂತೆ ನನಗೆ ಜಾತಿ ಗಣತಿ ನಡೆಸುವ ಉದ್ದೇಶ ಮಾತ್ರ ಹೊಂದಿ­ದ್ದೇನೆ. ಅನುರಾಗ್‌ ತಮಗೆ ಅವಮಾನ ಮಾಡಿದ್ದರೂ, ಅವರಿಂದ ಕ್ಷಮೆ ಬಯ ಸುವುದಿಲ್ಲ ಎಂದರು ರಾಹುಲ್‌ ಗಾಂಧಿ.

Advertisement

Udayavani is now on Telegram. Click here to join our channel and stay updated with the latest news.

Next