Advertisement

ಗೋಡಂಬಿ ಕೃಷಿ ವಿಪುಲಗೊಳಿಸಲು ಕ್ರಮ: ಸಚಿವೆ ಜೆ. ಮೆರ್ಸಿಕುಟ್ಟಯಮ್ಮ

02:16 PM Apr 07, 2017 | |

ಕಾಸರಗೋಡು: ಜಿಲ್ಲೆಯಲ್ಲಿ ಗೋಡಂಬಿ ಕೃಷಿಯನ್ನು ವಿಪುಲಗೊಳಿಸಲು ಮತ್ತು ಗೋಡಂಬಿ ಕಾರ್ಮಿಕರ ಉದ್ಯೋಗ ಸಂರಕ್ಷಣೆಗಾಗಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೀನುಗಾರಿಕೆ ಮತ್ತು ಗೋಡಂಬಿ ಉದ್ದಿಮೆ ಸಚಿವೆ ಜೆ. ಮೆರ್ಸಿಕುಟ್ಟಯಮ್ಮ ಅವರು ಹೇಳಿದರು.

Advertisement

ಜಿಲ್ಲೆಯ ತೋಟಗಾರಿಕಾ ನಿಗಮದ ತೋಟಗಳಿಂದ ಗೋಡಂಬಿ ಸಂಗ್ರಹಿಸುವ ಕುರಿತಾಗಿ ಕಾಸರಗೋಡು ಸರಕಾರಿ ಅತಿಥಿ ಮಂದಿರದಲ್ಲಿ ನಡೆದ ಅವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ತೋಟಗಾರಿಕಾ ನಿಗಮದ ಗೋಡಂಬಿ ಕೃಷಿ ರಂಗದಲ್ಲಿ ಆಧುನಿಕ ತಾಂತ್ರಿಕತೆಯನ್ನು ಬಳಸಿ ಗೋಡಂಬಿ ಸಸಿಗಳನ್ನು ಅಭಿವೃದ್ಧಿಪಡಿಸಬೇಕಾದ ಅನಿವಾರ್ಯತೆ ಇದೆ. ತೋಟಗಾರಿಕಾ ಎಸ್ಟೇಟ್‌ಗಳಲ್ಲಿ ಅಕ್ರಮವಾಗಿ ವಾಹನ ಸಾಗುವುದು ಹಾಗೂ ಗೇರುಬೀಜ ಕಳವು ಮಾಡಿ ಸಾಗಿಸುವುದನ್ನು ತಡೆಯಲು ಪೊಲೀಸರನ್ನು ನೇಮಿಸಲಾಗುವುದು. ತೋಟಗಳ ನಿರ್ವಹಣೆಗೆ ಕೋ-ಆರ್ಡಿನೇಶನ್‌ ಸಮಿತಿ ರಚಿಸಲಾಗುವುದು ಎಂದು ಸಚಿವರು ಹೇಳಿದರು.

ಸಭೆಯಲ್ಲಿ ಗೋಡಂಬಿ ಅಭಿವೃದ್ಧಿ ನಿಗಮದ ಚೇರ್‌ಮನ್‌ ಎಸ್‌. ಜಯಮೋಹನ್‌, ಕಾಫೆಕ್ಸ್‌ ಚೇರ್‌ಮನ್‌ ಎಸ್‌.ಸುಧೇಯನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ. ಸೈಮನ್‌, ಕೆಎಸ್‌ಸಿಡಿಸಿ ಮ್ಯಾನೇಜಿಂಗ್‌ ಡೈರೆಕ್ಟರ್‌ ಟಿ.ಎಫ್‌. ಸೇವ್ಯರ್‌, ಮಾಜಿ ಶಾಸಕರಾದ ಪಿ. ರಾಘವನ್‌, ಕೆ.ಪಿ. ಸತೀಶ್ಚಂದ್ರನ್‌, ನ್ಯಾಯವಾದಿ ಸಿ.ಎಚ್‌. ಕುಂಞಂಬು, ವಿವಿಧ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಗೋಡಂಬಿ ಕಾರ್ಮಿಕರು, ಸಿಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next