Advertisement
ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಚಾಲಕ ಚಲಾಯಿಸುತ್ತಿದ್ದ ಕಾರು ಮತ್ತು ಟೆಂಪೋ ಮಧ್ಯೆ ಜ. 12ರಂದು ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಎರಡೂ ವಾಹನಗಳಿಗೂ ಹಾನಿಯಾಗಿದೆ. ಟೆಂಪೋ ಚಾಲಕ ನಗರ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಿದ ನಗರ ಠಾಣೆ ಪೊಲೀಸರು ಅಪ್ರಾಪ್ತ ವಯಸ್ಸಿನ ಕಾರು ಚಾಲಕನ ಪೋಷಕರ ವಿರುದ್ಧ ಪ್ರಕರಣ ದಾಖ ಲಿಸಿದ್ದಾರೆ. ಬಳಿಕ ನಗರದಲ್ಲಿ ನಿಯಮ ಉಲ್ಲಂ ಸುವವರ ವಿರುದ್ಧ ಕಠಿನ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.
Related Articles
Advertisement
18 ವರ್ಷಕ್ಕೆ ಮೊದಲು ವಾಹನ ಚಲಾಯಿಸಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ತಿಳಿದಿದ್ದರೂ ಹುಶಾರಾಗಿ ಹೋಗಿ ಬರಬೇಕು ಎಂದು ಎಚ್ಚರಿಕೆ ಕೊಟ್ಟು ಗಾಡಿ ಕೊಡುವ ಪೋಷಕರಿದ್ದಾರೆ. ಆದರೆ ಇದರಿಂದ ಸಮಸ್ಯೆಗಳೇ ಹೆಚ್ಚು ಎಂಬುದರ ಅರಿವಿಲ್ಲ. ನಿಯಮಗಳನ್ನು ಪಾಲಿಸದೆ ವಾಹನ ಚಾಲನೆ ಮಾಡುವುದರಿಂದ ಮತ್ತಷ್ಟು ಅಪಾಯ ಸಂಭವಿಸುವ ಸಾಧ್ಯತೆಯಿದೆ.
ಪೊಲೀಸರ ಎಚ್ಚರಿಕೆ ಮಧ್ಯೆಯೂ ಹೆಚ್ಚಳ :
ಮೋಟಾರು ವಾಹನ ಕಾಯಿದೆ ಕಲಂ 184ರಡಿ ಅಪ್ರಾಪ್ತರಿಗೆ ವಾಹನ ಚಾಲನೆ ಮಾಡಲು ಅವಕಾಶ ಮಾಡಿಕೊಟ್ಟ ಪೋಷಕರು ಅಥವಾ ವಾಹನ ಮಾಲೀಕರಿಗೆ, ಅಪ್ರಾಪ್ತರಿಗೆ ದಂಡ ವಿಧಿಸಲಾಗುತ್ತಿದೆ. ಮೋಟಾರು ವಾಹನ ಕಾಯ್ದೆಯಂತೆ 50 ಲಕ್ಷ ರೂ ತನಕವೂ ದಂಡ ವಿಧಿಸಲು ಅವಕಾಶವಿದೆ. ಈ ವಿಚಾರದಲ್ಲಿ ಎಷ್ಟೇ ಎಚ್ಚರಿಕೆ ನೀಡಿದರೂ ಘಟನೆಗಳು ಮರುಕಳಿಸುತ್ತಲೇ ಇವೆ.
2019ರಲ್ಲಿ ಸಾಣುರು ಬಳಿ ಅಪ್ರಾಪ್ತ ವಾಹನ ಚಾಲನೆ ಮಾಡಿದ್ದ ಸಂದರ್ಭ ಇಬ್ಬರು ಮೃತಪಟ್ಟ ಘಟನೆ ನಡೆದಿತ್ತು. ಬಳಿಕ ಘಟನೆಗಳು ನಡೆಯದಿದ್ದರೂ, ಅಪ್ರಾಪ್ತರು ವಾಹನ ಚಲಾಯಿಸುವ ಪ್ರಕರಣಗಳು ಏರಿಕೆಯಾಗುತ್ತಿವೆ.
ಲೈಸೆನ್ಸ್ ಹೊಂದದೆ ವಾಹನ ಚಲಾಯಿಸುವುದು ಕಾನೂನು ಬಾಹಿರ. ಚಾಲನೆ ಪರವಾನಿಗೆ ಹೊಂದದಿದ್ದಲ್ಲಿ ರಸ್ತೆ ನಿಯಮಗಳ ಬಗ್ಗೆ ತಿಳಿಯುವುದಿಲ್ಲ. ಮಕ್ಕಳಿಗಿಂತ ಹೆಚ್ಚಾಗಿ ಪೋಷಕರೇ ಅಪ್ರಾಪ್ತ ವಯಸ್ಕರಿಗೆ ವಾಹನ ಕೊಡುವ ವಿಚಾರದಲ್ಲಿ ಜಾಗೃತರಾಗಿರಬೇಕು.–ತೇಜಸ್ವಿ, ಪೊಲೀಸ್ ಉಪ ನಿರೀಕ್ಷಕರು, ಗ್ರಾಮಾಂತರ ಠಾಣೆ ಕಾರ್ಕಳ
ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವುದು ಕಂಡು ಬಂದಲ್ಲಿ ಅವರ ಮೇಲೆ ಮತ್ತು ಹೆತ್ತವರ ಮೇಲೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಕಾಯ್ದೆ ಪ್ರಕಾರ ದಂಡ , ಕೇಸ್ ಹಾಕಲಾಗುವುದು.–ಮಧು ಬಿ.ಇ., ಪೊಲೀಸ್ ಉಪನಿರೀಕ್ಷಕರು, ನಗರ ಪೊಲೀಸ್ ಠಾಣೆ ಕಾರ್ಕಳ
ಬಾಲಕೃಷ್ಣ ಭೀಮಗುಳಿ