Advertisement

ಸಂತ್ರಸ್ತೆಯ ಫೋಟೋ ಬಿಡುಗಡೆ

12:52 PM Sep 15, 2018 | Karthik A |

ಕೊಚ್ಚಿ: ಅತ್ಯಾಚಾರಕ್ಕೊಳಗಾಗಿರುವ ಕ್ರೈಸ್ತ ಸನ್ಯಾಸಿನಿಯ ಫೋಟೋವನ್ನು ಮಿಷನರೀಸ್‌ ಆಫ್ ಜೀಸಸ್‌ ಶುಕ್ರವಾರ ಬಿಡುಗಡೆ ಮಾಡುವ ಮೂಲಕ ಅತ್ಯಾಚಾರ ತಡೆ ಕಾಯ್ದೆಯ ಉಲ್ಲಂಘನೆ ಮಾಡಿದೆ. ಆರೋಪ ಹೊತ್ತಿರುವ ಬಿಷಪ್‌ ಫ್ರಾಂಕೋ ಮುಲಕ್ಕಲ್‌ ಮತ್ತು ಸನ್ಯಾಸಿನಿ ಜತೆಗೆ ಕಾರ್ಯಕ್ರಮವೊಂದರಲ್ಲಿ ಇದ್ದ ಫೋಟೋಗಳನ್ನು ಮಾಧ್ಯಮಗಳಿಗೆ ನೀಡಲಾಗಿದೆ. ಇದೇ ವೇಳೆ, ಮಿಷನರೀಸ್‌ ಆಫ್ ಜೀಸಸ್‌ ವಿರುದ್ಧ ಕೇರಳ ಪೊಲೀಸರು ಶುಕ್ರವಾರ ಕೇಸು ದಾಖಲಿಸಿಕೊಂಡಿದ್ದಾರೆ.

Advertisement

ಆರೋಪ ಹಿನ್ನೆಲೆಯಲ್ಲಿ ಮಿಷನರೀಸ್‌ ಆಫ್ ಜೀಸಸ್‌ ತನಿಖಾ ಸಮಿತಿ ನೇಮಿಸಿತ್ತು. ಸಮಿತಿಯು ಬಿಷಪ್‌ ಮುಲಕ್ಕಲ್‌ಗೆ ಕ್ಲೀನ್‌ಚಿಟ್‌ ನೀಡಿದೆ ಎಂದು ಹೇಳಲಾಗಿದೆ. ನಿರ್ದಿಷ್ಟ ದಿನಾಂಕದಂದು ಅತ್ಯಾಚಾರ ನಡೆದಿದೆ ಎಂದು ನನ್‌ ಹೇಳಿಕೊಂಡಿದ್ದು, ಅದರ ಮಾರನೇ ದಿನವೇ ಅವರು ಬಿಷಪ್‌ ಜತೆಗಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಸಾಬೀತುಪಡಿಸಲು ಫೋಟೋವನ್ನು ಬಹಿರಂಗಪಡಿಸಲಾಗಿದೆ ಎಂದು ಹೇಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next