Advertisement

ಆ. 18ರಿಂದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌

02:51 AM Jul 12, 2020 | Hari Prasad |

ಪೋರ್ಟ್‌ ಆಫ್ ಸ್ಪೇನ್‌: 2020ರ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ (ಸಿಪಿಎಲ್‌) ಕ್ರಿಕೆಟ್‌ ಪಂದ್ಯಾವಳಿ ಆ. 18ರಿಂದ ಸೆ. 20ರ ತನಕ ಸಾಗಲಿದೆ.

Advertisement

ಎಲ್ಲ ಪಂದ್ಯಗಳು ಟ್ರಿನಿಡಾಡ್‌ ಆ್ಯಂಡ್‌ ಟೊಬಾಗೊದ ರಾಜಧಾನಿ ಪೋರ್ಟ್‌ ಆಫ್ ಸ್ಪೇನ್‌ನಲ್ಲಿ ನಡೆಯಲಿವೆ.
ಸ್ಥಳೀಯ ಸರಕಾರ ಅನುಮತಿ ನೀಡಿದ ಬಳಿಕ ಈ ಕೂಟವನ್ನು ಆಯೋಜಿಸಲು ತೀರ್ಮಾನಿಸಲಾಯಿತು.

ಇದರೊಂದಿಗೆ ಕೋವಿಡ್‌-19 ಕಾಲದಲ್ಲಿ ನಡೆಯಲಿರುವ ಮೊದಲ ಕ್ರಿಕೆಟ್‌ ಲೀಗ್‌ ಎಂಬ ಹೆಗ್ಗಳಿಕೆ ಸಿಪಿಎಲ್‌ನದ್ದಾಗಿದೆ.

ಇದರಲ್ಲಿ ವಿದೇಶಿಗರೂ ಪಾಲ್ಗೊಳ್ಳಲಿದ್ದಾರೆ. ಇವರೆಲ್ಲ ಇಲ್ಲಿಗೆ ಆಗಮಿಸುವ ಮುನ್ನ ಹಾಗೂ ಆಗಮಿಸಿದ ಬಳಿಕ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ.

ಎಲ್ಲ ತಂಡಗಳ ಆಟಗಾರರು ಮತ್ತು ಅಧಿಕಾರಿಗಳು ಒಂದೇ ಹೊಟೇಲಿನಲ್ಲಿ ತಂಗಲಿದ್ದು, ಎಲ್ಲರೂ ಮೊದಲೆರಡು ವಾರ ಕಟ್ಟುನಿಟ್ಟಾಗಿ ಕ್ವಾರಂಟೈನ್‌ ನಿಯಮಗಳನ್ನು ಪಾಲಿಸಬೇ ಕಿದೆ ಎಂದು ಸಿಪಿಎಲ್‌ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

Advertisement

ವೀಕ್ಷಕರಿಗೆ ಪ್ರವೇಶವಿಲ್ಲ
ಈ ಕೂಟಕ್ಕೆ ವೀಕ್ಷಕರ ನಿರ್ಬಂಧ ಇರಲಿದ್ದು, ಪಂದ್ಯಗಳೆಲ್ಲ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿವೆ. ರಶೀದ್‌ ಖಾನ್‌, ಮಾರ್ಕಸ್‌ ಸ್ಟೋಯಿನಿಸ್‌, ರಾಸ್‌ ಟೇಲರ್‌, ಕಾರ್ಲೋಸ್‌ ಬ್ರಾತ್‌ವೇಟ್‌, ಡ್ವೇನ್‌ ಬ್ರಾವೊ, ಕೈರನ್‌ ಪೊಲಾರ್ಡ್‌ ಮೊದಲಾದ ಸ್ಟಾರ್‌ ಆಟಗಾರರು ಇದರಲ್ಲಿ ಭಾಗವಹಿಸಲಿದ್ದಾರೆ.

48 ವರ್ಷದ ಪ್ರವೀಣ್‌ ತಾಂಬೆ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಮೊದಲ ಕ್ರಿಕೆಟಿಗ. ಇವರು ಟ್ರಿನ್‌ಬಾಂಗೊ ನೈಟ್‌ರೈಡರ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಕೆರಿಬಿಯನ್‌ನಲ್ಲಿ ಕೋವಿಡ್ 19 ಈವರೆಗೆ ದೊಡ್ಡ ಮಟ್ಟದಲ್ಲೇನೂ ವ್ಯಾಪಿಸಿಲ್ಲ. ಟ್ರಿನಿಡಾಡ್‌ನ‌ಲ್ಲಿ ಈವರೆಗೆ 133 ಪ್ರಕರಣಗಳಷ್ಟೇ ಕಂಡುಬಂದಿವೆ. ಹೀಗಾಗಿ ಇಲ್ಲಿ ಇಡೀ ಕೂಟವನ್ನು ಆಯೋಜಿಸಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next