Advertisement

ಕಾರ್ಬೋರೇಟರ್‌, ಫ್ಯುಯೆಲ್ ಇಂಜೆಕ್ಷನ್‌, ಯಾವುದು ಬೆಸ್ಟ್‌ ಗೊತ್ತೇ ?

02:06 PM Aug 24, 2018 | |

ಬೈಕ್‌ ಖರೀದಿಗೆ ಹೋಗಿದ್ದೀರಿ. ಆದರೆ ಅಲ್ಲಿ ಎರಡು ಮಾದರಿಗಳಿವೆ. ಒಂದು ಕಾರ್ಬೋರೇಟರ್‌, ಇನ್ನೊಂದು ಫ್ಯುಯೆಲ್ ಇಂಜೆಕ್ಷನ್‌ (ಎಫ್ಐ) ಮಾದರಿಯದ್ದು. ಯಾವುದು ಬೆಸ್ಟ್‌ ಎನ್ನುವುದು ನಿಮ್ಮ ಪ್ರಶ್ನೆಯಾಗಿರಬಹುದು. ಉತ್ತರ ಇಲ್ಲಿದೆ. ಹೈಪರ್ಫಾರ್ಮೆನ್ಸ್‌ ಬೈಕ್‌ ಗಳು, ಕಾರುಗಳಲ್ಲಿ ಫ್ಯುಯೆಲ್ ಇಂಜೆಕ್ಷನ್‌ ಸಿಸ್ಟಂ ಸಾಮಾನ್ಯ. ಕಡಿಮೆ ದರದ, ನಿತ್ಯವೂ ಬಳಸುವ ಸಾಮಾನ್ಯ ಬೈಕುಗಳಲ್ಲಿ ಕಾರ್ಬೋರೇಟರ್‌ ಮಾದರಿಗಳಿರುತ್ತವೆ. 

Advertisement

ಏನಿದು ವ್ಯವಸ್ಥೆ?
ಕಾರ್ಬೋರೇಟರ್‌ ಮತ್ತು ಫ್ಯುಯೆಲ್ ಇಂಜೆಕ್ಷನ್‌ ವ್ಯವಸ್ಥೆಗಳು ಇಂಧನವನ್ನು ದಹನಕೂಲಿ ವ್ಯವಸ್ಥೆಗೆ ಪರಿವರ್ತಿಸುವ ಒಂದು ಸಾಧನ. ಇವುಗಳು ಪೆಟ್ರೋಲ್‌ ಗೆ ಸೂಕ್ತ ಪ್ರಮಾಣದ ಗಾಳಿಯನ್ನು ಸೇರಿಸಿ, ಸಿಲಿಂಡರ್‌ ಒಳಗೆ ಉರಿಯುವಂತೆ ಮಾಡುತ್ತದೆ. ಈ ಮೂಲಕ ಎಂಜಿನ್‌ನಲ್ಲಿ ಶಕ್ತಿ ಹೊರಸೂಸಲು ನೆರವಾಗುತ್ತವೆ. ಆದರೆ ಇವುಗಳು ಕಾರ್ಯಾಚರಿಸುವ ಶೈಲಿಗಳು ಭಿನ್ನ. ಆದ್ದರಿಂದ ಕಾರ್ಬೋರೇಟರ್‌  ಮಾದರಿಗೆ ಕಡಿಮೆ ದರವಿದ್ದು, ಫ್ಯುಯೆಲ್  ಇಂಜೆಕ್ಷನ್‌ ಇರುವ ವಾಹನಕ್ಕೆ ತುಸು ಹೆಚ್ಚಿನ ದರವಿರುತ್ತದೆ. ಈಗಿನ ಕಾಲದಲ್ಲಿ ಎಲ್ಲ ಪೆಟ್ರೋಲ್‌ ಕಾರುಗಳಿಗೆ ಫ್ಯುಯೆಲ್ ಇಂಜೆಕ್ಷನ್‌ ವ್ಯವಸ್ಥೆ ಇದ್ದರೆ, ಬೈಕ್‌ಗಳಲ್ಲಿ ಎರಡೂ ಮಾದರಿಗಳು ಲಭ್ಯವಿರುತ್ತವೆ.

ಕಾರ್ಬೋರೇಟರ್‌ ಕಾರ್ಯಾಚರಣೆ ಹೇಗೆ?
ಕಾರ್ಬೋರೇಟರ್‌ಗಳಲ್ಲಿ ಜೆಟ್‌ ಎಂಬ ಭಾಗವಿದ್ದು ಇದರಲ್ಲಿ ಇಂಧನ ಎಂಜಿನ್‌ ಒಳಗೆ ಹರಿಯುತ್ತದೆ. ಆದರೆ ಇದರ ಪ್ರಮಾಣ ಎಷ್ಟು ಪ್ರಮಾಣದಲ್ಲಿ ಏರ್‌ಫಿಲ್ಟರ್‌ ಮೂಲಕ ಕಾರ್ಬೋರೇಟರ್‌ ಗಳು ತೆಗೆದುಕೊಳ್ಳುತ್ತವೆ ಎಂಬುದರ ಮೇಲೆ ನಿಂತಿದೆ. ಎಂಜಿನ್‌ಗೆ ಒಂದು ಅನುಪಾತದಲ್ಲಿ ಇಂಧನ ಮತ್ತು ಗಾಳಿ ಹರಿದು ದಹನಕೂಲಿ ವ್ಯವಸ್ಥೆಗೆ ನೆರವಾಗುತ್ತವೆ. ಕಾರ್ಬೋರೇಟರ್‌ ವ್ಯವಸ್ಥೆಯಲ್ಲಿ ಎಂಜಿನ್‌ ಹೊರಗಡೆಯೇ ಗಾಳಿ, ಇಂಧನ ಮಿಶ್ರಣವಾಗುತ್ತದೆ. ಈ ಕಾರಣ ಈ ವ್ಯವಸ್ಥೆ ದುಬಾರಿಯಾದ್ದಲ್ಲ.

ಫ್ಯುಯೆಲ್ ಇಂಜೆಕ್ಷನ್‌ ಕಾರ್ಯಾಚರಣೆ ಹೇಗೆ?
ಫ್ಯುಯೆಲ್ ಇಂಜೆಕ್ಷನ್‌ ಸಿಸ್ಟಂನಲ್ಲೂ ಎರಡು ಮಾದರಿಗಳಿವೆ. ಒಂದು ಪೋರ್ಟ್‌ ಫ್ಯುಯೆಲ್ಇಂಜೆಕ್ಷನ್‌ ಇನ್ನೊಂದು ಡೈರೆಕ್ಟ್ ಫ್ಯುಯೆಲ್ ಇಂಜೆಕ್ಷನ್‌. ಇದು ಇತ್ತೀಚಿನದ್ದು. ಫ್ಯುಯೆಲ್ ಇಂಜೆಕ್ಷನ್‌ ವ್ಯವಸ್ಥೆಯಲ್ಲಿ ಎಂಜಿನ್‌ ಸಿಲಿಂಡರ್‌ ಹೊರಗೆ ಗಾಳಿ ಮತ್ತು ಇಂಧನ ಮಿಶ್ರವಾಗದೇ ಒಳಗಡೆಯೇ ಮಿಶ್ರವಾಗುವಂತೆ ಮಾಡಿ ದಹನಕ್ಕೆ ನೆರವಾಗುತ್ತದೆ. ಡೈರೆಕ್ಟ್ ಫ್ಯುಯೆಲ್ ಇಂಜೆಕ್ಷನ್‌ ವ್ಯವಸ್ಥೆಯಲ್ಲಿ ಎಂಜಿನ್‌ಗೆ ಎಷ್ಟು ಲೋಡ್‌ ಇದೆ ಎಂಬುದರ ಮೇಲೆ ಸಮ ಅನುಪಾತದಲ್ಲಿ ಇಂಧನ ಮತ್ತು ಗಾಳಿ ಮಿಶ್ರವಾಗಿ ಬಿಡುಗಡೆ ಮಾಡುತ್ತದೆ. ಇದರಲ್ಲಿ ವಿಶೇಷವಾಗಿ ಎಲೆಕ್ಟ್ರಾನಿಕ್‌ ವ್ಯವಸ್ಥೆ ಇರುತ್ತದೆ. ಪೋರ್ಟ್‌ ಫ್ಯುಯೆಲ್  ಇಂಜೆಕ್ಷನ್‌ ಮಾದರಿಯಲ್ಲಿ ಇಂಧನವನ್ನು ಸಿಲಿಂಡರ್‌ ಒಳಗೆ ಸ್ಪ್ರೇ ಮಾಡಿದಂತೆ ಮಾಡಿ ಗಾಳಿಯೊಂದಿಗೆ ಸೇರುವಂತೆ ಮಾಡಿ ದಹನಕ್ಕೆ ಅನುಕೂಲ ಕಲ್ಪಿಸುತ್ತದೆ. 

ಯಾವುದು ಉತ್ತಮ?
ಕಾರ್ಬೋರೇಟರ್‌ ವ್ಯವಸ್ಥೆ ಕೈಗೆಟಕುವಷ್ಟು ಕಡಿಮೆ ದರದ್ದು. ಫ್ಯುಯೆಲ್ ಇಂಜೆಕ್ಷನ್‌ ವ್ಯವಸ್ಥೆ ತೀರ ದುಬಾರಿ. ಅದರಲ್ಲೂ ಡೈರೆಕ್ಟ್ ಇಂಜೆಕ್ಷನ್‌ ವ್ಯವಸ್ಥೆ ಅತಿ ದುಬಾರಿ, ರೇಸ್‌ ಕಾರುಗಳು, ರೇಸ್‌ಬೈಕ್‌ಗಳು, ಅತಿ ಹೆಚ್ಚು ಪರ್ಫಾರ್ಮೆನ್ಸ್‌ ನೀಡುವ ವಾಹನಗಳಲ್ಲಿರುತ್ತವೆ. ಕಾರ್ಬೋರೇಟರ್‌  ಮಾದರಿಗೆ ಹೋಲಿಸಿದರೆ, ಫ್ಯುಯೆಲ್ ಇಂಜೆಕ್ಷನ್‌ ವ್ಯವಸ್ಥೆಯಡಿ ಹೆಚ್ಚು ಮೈಲೇಜ್‌ ಸಿಗಬಹುದು. ಆದರೆ, ಶುದ್ಧ ಪೆಟ್ರೋಲ್‌ನ ಅಗತ್ಯ ಇದಕ್ಕಿದೆ. ಪೆಟ್ರೋಲ್‌ ಕಲಬೆರಕೆ ಇತ್ಯಾದಿ ಆಗಿದ್ದರೆ, ಫ್ಯುಯೆಲ್ ಇಂಜೆಕ್ಷನ್‌ ಕೈಕೊಡುವ ಸಾಧ್ಯತೆ ಇರುತ್ತದೆ. ವೇಗ, ನಿರಂತರ ಕ್ರೂಸಿಂಗ್‌, ಹೆಚ್ಚಿನ ಪಿಕಪ್‌ಗೆ ಫ್ಯುಯೆಲ್ ಇಂಜೆಕ್ಷನ್‌ ವ್ಯವಸ್ಥೆ ಪರಿಣಾಮಕಾರಿ.

Advertisement

 ಈಶ

Advertisement

Udayavani is now on Telegram. Click here to join our channel and stay updated with the latest news.

Next