Advertisement

Car; ಮತ್ತೆ ಭಾರತದ ಮಾರುಕಟ್ಟೆಗೆ ಜಪಾನ್‌ನ ಮಿಟ್ಸುಬಿಷಿ ಪ್ರವೇಶ?

12:20 AM Feb 20, 2024 | Team Udayavani |

ಹೊಸದಿಲ್ಲಿ: ಭಾರತದ ಕಾರು ಮಾರುಕಟ್ಟೆಗೆ ಜಪಾನಿ ಬ್ರಾಂಡ್‌ ಮಿಟ್ಸುಬಿಷಿ ಪುನಃ ಲಗ್ಗೆ ಇಡಲು ಮುಂದಾಗಿದೆ. ಟಿವಿಎಸ್‌ ಮೊಬಿಲಿಟಿ ಕಂಪೆನಿಯ ಕಾರು ಮಾರಾಟದಲ್ಲಿ ಮಿಟ್ಸುಬಿಷಿ ಶೇ. 30ರಷ್ಟು ಷೇರುಗಳನ್ನು ಖರೀದಿಸಲು ಯೋಜಿಸಿದೆ. ಇದಕ್ಕಾಗಿ 273 ಕೋಟಿ ರೂ.ಗಳಿಂದ 547 ಕೋಟಿ ರೂ.ಗಳವರೆಗೆ ಹೂಡಿಕೆ ಮಾಡಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ದೇಶದಲ್ಲಿ ಟಿವಿಎಸ್‌ ಮೊಬಿಲಿಟಿ 150 ಮಳಿಗೆಗಳನ್ನು ಹೊಂದಿದೆ. ಒಮ್ಮೆ ಒಪ್ಪಂದ ಪೂರ್ಣಗೊಂಡರೆ ತನ್ನ ಉದ್ಯೋಗಿಗಳನ್ನು ಡೀಲರ್‌ಶಿಪ್‌ಗ್ಳಿಗೆ ಮಿಟ್ಸುಬಿಷಿ ಕಳುಹಿಸಲಿದೆ. ಪ್ರತೀ ಬ್ರಾಂಡ್‌ ಕಾರಿಗೂ ಪ್ರತ್ಯೇಕ ಮಳಿಗೆ ತೆರೆಯುವುದು ಕಂಪೆನಿಯ ಉದ್ದೇಶ. ಟಿವಿಎಸ್‌ ಮೊಬಿಲಿಟಿಯಂತೆ ಅದರ ಪ್ರಾಥಮಿಕ ಗಮನ ಹೋಂಡಾ ಕಾರುಗಳ ಮಾರಾಟದ ಮೇಲಿರಲಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next