ಬೆಂಗಳೂರು: ಮಾನವ-ಚಿರತೆ ಸಂಘರ್ಷ ತಗ್ಗಿಸಲು ಕೇಂದ್ರ ಸರ್ಕಾರ 2010ರಲ್ಲಿ ಹೊರತಂದ ಮಾರ್ಗಸೂಚಿಗಳ ಮೂಲ ಉದ್ದೇಶ ಸಾಕಾರ ಗೊಳ್ಳುವಲ್ಲಿ ವಿಫಲವಾಗಿದ್ದು, ಮಾರ್ಗ ಸೂಚಿ ಜಾರಿಯಾದ ನಂತರದಿಂದ ಚಿರತೆಗಳ ಸೆರೆ ಮತ್ತು ಸ್ಥಳಾಂತರ ಪ್ರಮಾಣ 3 ಪಟ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ.
ಚಿರತೆಗಳನ್ನು ಅನಗತ್ಯವಾಗಿ ಸ್ಥಳಾಂತರ ತಗ್ಗಿಸಲು, ತುರ್ತು ಪರಿಸ್ಥಿತಿಗಳಲ್ಲಿ ಸಂಘ ರ್ಷದನಿರ್ವಹಣೆ ವಿಧಾನಗಳನ್ನು ಉತ್ತಮ ಗೊಳಿಸಲು2010ರಏಪ್ರಿಲ್ ನಲ್ಲಿ ಮಾರ್ಗಸೂಚಿ ಹೊರತರಲಾಯಿತು. ಇದರ ಕಾರ್ಯಕ್ಷಮತೆ ಕುರಿತು ನೇಚರ್ ಕನ್ಸರ್ವೆ ಷನ್ ಫೌಂಡೇಷನ್‌ನ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ನೇತೃತ್ವದ ತಂಡ ಮೌಲ್ಯಮಾಪನ ನಡೆಸಿದೆ.
ಅಧ್ಯಯನದ ಪ್ರಕಾರ 2009-2016ರಲ್ಲಿ ರಾಜ್ಯದಲ್ಲಿ 357 ಚಿರತೆ ಸೆರೆಹಿಡಿಯಲಾಗಿದೆ. ಈ ಪೈಕಿ ಶೇ.79 ಚಿರತೆಗಳನ್ನು ಮೈಸೂರು, ಉಡುಪಿ, ಹಾಸನ, ತುಮಕೂರು, ರಾಮನಗರ, ಬಳ್ಳಾರಿ, ಕೊಪ್ಪಳ ಮತ್ತುಮಂಡ್ಯದಲ್ಲೇ ಸೆರೆಹಿಡಿಯಲಾಗಿದೆ. ಇದರಲ್ಲಿ 268 ಚಿರತೆಗಳನ್ನು ಅರಣ್ಯಗಳಿಗೆ ಸ್ಥಳಾಂತರಿಸಲಾಗಿದ್ದು, 34 ಚಿರತೆಗಳನ್ನು ಮೃಗಾಲಯ ಅಥವಾ ಪುನರ್ವಸತಿ ಕೇಂದ್ರಗಳಿಗೆ ತಲುಪಿಸಲಾಗಿದೆ.12ಚಿರತೆಸೆರೆಹಿಡಿಯುವಾಗಲೇ ಸಾವನ್ನಪ್ಪಿವೆ. ಸ್ಥಳಾಂತರಗೊಂಡ 268 ಚಿರತೆಗಳಲ್ಲಿ ಶೇ.59.7 ಚಿರತೆಗಳನ್ನು ಸಂರಕ್ಷಿತ ವನ್ಯಜೀವಿಧಾಮಗಳಿಗೆ, ಶೇ.29.8 ಮೀಸಲು ಅರಣ್ಯಗಳಿಗೆ ಸ್ಥಳಾಂತರಿಸಲಾಗಿದೆ. ಬಂಡೀಪುರಕ್ಕೆ ಶೇ.22.5, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಶೇ.20.6, ಕಾವೇರಿ ವನ್ಯಜೀವಿಧಾಮಕ್ಕೆ ಶೇ.15ರಷ್ಟನ್ನು ಸ್ಥಳಾಂತರತರಿಸಲಾಗಿದೆ.
ಸೆರೆಹಿಡಿದ ಚಿರತೆಗಳ ಲೆಕ್ಕಾಚಾರ ಹಾಕಿದರೆ, ತಿಂಗಳಿಗೆಸರಾಸರಿ4.6ಚಿರತೆಸೆರೆಹಿಡಿಲಾಗುತ್ತಿದೆ. ನಿಯಮಾವಳಿಗೂ ಮುನ್ನ ಇದರ ಪ್ರಮಾಣ 1.5 ಇತ್ತು. ಅದೇ ರೀತಿ, ಚಿರತೆ ಸ್ಥಳಾಂತರವೂ ತಿಂಗಳಲ್ಲಿ 1ರಿಂದ 3.5ಕ್ಕೆ ಏರಿಕೆಯಾಗಿದೆ ಎಂದು ಅಧ್ಯಯನ ತಂಡ ವರದಿಯಲ್ಲಿ ಉಲ್ಲೇಖೀಸಿದೆ. ಚಿರತೆಗಳ ಸೆರೆ ಮತ್ತು ಸ್ಥಳಾಂತರಕ್ಕೆ ಹೆಚ್ಚು ಕಾರಣ (ಶೇ.38.1) ಜಾನುವಾರು ಹತ್ಯೆ ಎಂದು ಕಂಡುಬಂದಿದೆ. ಇದಲ್ಲದೆ, ಉರುಳು ಮತ್ತು ಬಾವಿಗಳಿಂದ ಚಿರತೆಗಳನ್ನು ಸಂರಕ್ಷಿಸಿರುವುದು (ಶೇ.15.7), ಜನವಸತಿ ಪ್ರದೇಶಗಳಲ್ಲಿ ಚಿರತೆಗಳನ್ನು ನೋಡಿ ಆತಂಕ ಉಂಟಾದ ಪರಿಸ್ಥಿತಿ (ಶೇ. 13.7), ಮನೆಗಳೊಳಗೆ ನುಗ್ಗಿರುವ ಸನ್ನಿವೇಶ (ಶೇ. 10.9), ಮಾನವ ಗಾಯ(ಶೇ. 4.5), ಸಾವು (ಶೇ.2) ಕೂಡ ಕಾರಣಗಳಾಗಿವೆ.
ಇನ್ನು ಶೇ.65.4 ಅರಣ್ಯ ಅಧಿಕಾರಿಗಳಿಗೆ ಇಂತಹದ್ದೊಂದು ನಿಯಮಾವಳಿ ಇರುವ ಬಗ್ಗೆ ಗೊತ್ತೇ ಇಲ್ಲ. ಶೇ.52 ಅಧಿಕಾರಿಗಳು ಪರಿಹಾರ ಅಲ್ಲ, ಶೇ.5.8 ಅಧಿಕಾರಿಗಳಿಗೆ ಇದು ತುಂಬಾ ಕ್ಲಿಷ್ಟಕರ ಎಂದಿದ್ದಾರೆ. ಶೇ.1.9 ಅಧಿಕಾರಿಗಳು ಮಾತ್ರ ಉಪಯುಕ್ತ ಎಂದು ಹೇಳಿದ್ದಾರೆ. ಒಟ್ಟಾರೆ 53ಅಧಿಕಾರಿಗಳನ್ನುಸಮೀಕ್ಷೆಗೊಳಪಡಿಸಲಾಗಿತ್ತು. ಹೀಗಿರುವಾಗ, ಸ್ಥಳೀಯವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಮಾಹಿತಿ ಇಲ್ಲದಿರುವುದು ಇದರ ವೈಫಲ್ಯಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.