Advertisement

ಕಾಫಿ ವಿತ್‌ ಸಿರಿಧಾನ್ಯ

08:55 PM May 31, 2019 | Lakshmi GovindaRaj |

ಸಾವಯವ ಹಾಗೂ ಸಿರಿಧಾನ್ಯಗಳನ್ನು ಅಡುಗೆಯಲ್ಲಿ ಬಳಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಇವುಗಳ ಮಾರುಕಟ್ಟೆ ವ್ಯಾಪ್ತಿ ಹೆಚ್ಚುತ್ತಿದೆ. ಈ ದಿನ ಗಲ್ಲಿಗಳಲ್ಲೂ ಸಾವಯವ ಅಂಗಡಿ ಮಳಿಗೆಗಳನ್ನು ಕಾಣಬಹುದು. ಅನೇಕ ಹೋಟೆಲುಗಳೂ ಸಾವಯವ ಆಹಾರ ಪದಾರ್ಥಗಳನ್ನು ಬಳಸಿ ಖಾದ್ಯಗಳನ್ನು ತಯಾರಿಸಲು ಶುರುಮಾಡಿವೆ.

Advertisement

ಪೂರ್ತಿ ಸಾವಯವ ಆಹಾರ ಪದಾರ್ಥ ಮತ್ತು ಸಿರಿಧಾನ್ಯಗಳನ್ನು ಮಾತ್ರವೆ ಬಳಸುವ ಕೆಫೆ ಒಂದು ನಗರದಲ್ಲಿ ಶುರುವಾಗಿದೆ. ಅದುವೇ ಜಯನಗರದಲ್ಲಿರುವ “ಫ‌ಲದ ಪ್ಯೂರ್‌ ಶ್ಯೂರ್‌’ ಕೆಫೆ. ಕೆಪೆಗೆ ಅಂಟಿಕೊಂಡಂತೆ ಸಾವಯವ ಪದಾರ್ಥಗಳನ್ನು ಮಾರುವ ಅಂಗಡಿಯೂ ಇದೆ.

ಶುದ್ಧ ಸಸ್ಯಾಹಾರಿ: ಇದು ಶುದ್ಧ ಸಸ್ಯಾಹಾರಿ ಕೆಫೆಯಾಗಿದ್ದು ಇಲ್ಲಿನ ಮೆನು ಪಟ್ಟಿಯಲ್ಲಿರುವ ಬೀಟ್‌ರೂಟ್‌, ತೆಂಗಿನ ತುರಿಗಳನ್ನು ಹಾಕಿ ಮಾಡಿದ ಉಪ್ಪಿಟ್ಟು, ಪೀನಟ್‌ ಬಟರ್‌ ಮತ್ತು ಜೆಲ್ಲಿ ಸ್ಯಾಂಡ್‌ವಿಚ್‌, ಸಾವಯವ ಬೆಲ್ಲ, ದೇಶಿ ತುಪ್ಪ ಬಳಸಿ ತಯಾರಿಸಿದ ಟೋಸ್ಟೆಡ್‌ ಬಗುಟಿ, ಕಲ್ಲಂಗಡಿ, ಟೊಮೆಟೋ ಜ್ಯೂಸ್‌, ಕ್ಯಾರೆಟ್‌, ಬೀಟ್‌ರೂಟ್‌, ಕಿತ್ತಳೆ ಜ್ಯೂಸ್‌, ಲೆಮನ್‌ ಟೀ, ಮಸಾಲಾ ಚಾಯ್‌, ತೆಂಗಿನ ಎಣ್ಣೆ, ದೇಶಿ ತುಪ್ಪ ಬಳಸಿ ತಯಾರಿಸಿದ ಬಗೆ ಬಗೆಯ ಸೂಪ್‌ ಮತ್ತು ಸಲಾಡ್‌ಗಳು ನಾಲಗೆಗೆ ಮಾತ್ರವಲ್ಲದೆ, ದೇಹಕ್ಕೂ ಆರೋಗ್ಯಕರ.

ಸಾವಯವ ಪಿಜ್ಜಾ ಮತ್ತು ಬರ್ಗರ್‌: ಪಿಜ್ಜಾ ಮತ್ತು ಬರ್ಗರ್‌ ಕುರುಕಲು ತಿಂಡಿ ವಿಭಾಗಕ್ಕೆ ಸೇರಿಕೊಳ್ಳುತ್ತದೆ. ಅವು ಅನಾರೋಗ್ಯಕರ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ಇಲ್ಲಿ ಸಿಗುವ ಪಿಜ್ಜಾ ಮತ್ತು ಬರ್ಗರ್‌ಗಳು ಆರೋಗ್ಯಕರ ಎಂದೆನಿಸಿಕೊಳ್ಳುತ್ತವೆ. ಏಕೆಂದರೆ ಅವನ್ನು ಸಾವಯವ ಆಹಾರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ.

ಇವುಗಳಷ್ಟೇ ಅಲ್ಲದೆ ಸಿರಿಧಾನ್ಯಗಳಿಂದ ತಯಾರಾದ ಫ‌ುಲ್‌ ಮೀಲ್ಸ್‌ ಇಲ್ಲಿ ಲಭ್ಯ. ಕುಲ್ಚಾ, ಸಿರಿಧಾನ್ಯದ ಬಿರಿಯಾನಿ ರೈಸ್‌, ರೈತಾ, ಸಬ್ಜಿ, ದಾಲ್‌, ಸಲಾಡ್‌, ಸಿರಿಧಾನ್ಯದ ಖೀರ್‌, ನಿಪ್ಪಟ್‌- ಇವಿಷ್ಟನ್ನು ಫ‌ುಲ್‌ ಮೀಲ್ಸ್‌ ಒಳಗೊಂಡಿದೆ.

Advertisement

ಹಲಸು ಸೊಗಸು: ವಿಟಮಿನ್‌ ಮತ್ತು ಪ್ರೋಟೀನ್‌ ಪೋಷಕಾಂಶಯುಕ್ತ ಹಲಸಿನ ಹಣ್ಣಿನಿಂದ ತಯಾರಿಸಿದ ಖೀಮಾ, ಟಿಕ್ಕಿ, ಬರ್ಗರ್‌ನ ರುಚಿ ನೋಡಬಹುದು. ಹಲಸಿನಹಣ್ಣನ್ನು ಬೇಯಿಸಿ “ರೆಡಿ ಟು ಈಟ್‌’ ಮಾದರಿಯಲ್ಲೂ ಸವಿಯುವ ಅವಕಾಶ ಇಲ್ಲಿದೆ. ರೈತರಿಂದ ನೇರವಾಗಿ ಹಲಸಿನ ಹಣ್ಣನ್ನು ಖರೀದಿಸಿ ಸಂಸ್ಕರಣೆಗೊಳಪಡಿಸಿ ತಂರ ವಿಶೇಷ ರೆಸಿಪಿ ಬಳಸಿ ತಯಾರಾಗುವ ವಿವಿಧ ಹಲಸಿನ ಖಾದ್ಯಗಳು ವಿದೇಶಗಳಿಗೂ ರಫ್ತಾಗುತ್ತವೆ.

ಬುಲೆಟ್‌ ಪ್ರೂಫ್ ಕಾಫಿ: ಖಾಲಿ ಹೊಟ್ಟೆಯಲ್ಲಿ ಕುಡಿಯಲ್ಪಡುವ ಎನರ್ಜಿ ಡ್ರಿಂಕ್‌ ಬುಲೆಟ್‌ ಪ್ರೂಫ್ ಕಾಫಿ ಇಲ್ಲಿ ಸಿಗುತ್ತದೆ. ಈಚೆಗೆ ಜನಪ್ರಿಯತೆ ಪಡೆಯುತ್ತಿರುವ ಈ ಪೇಯ ದೇಹ ನಿತ್ರಾಣಗೊಂಡಿದ್ದರೆ, ಕೂಡಲೆ ಶಕ್ತಿ ತುಂಬುತ್ತದೆ.

ಅಲ್ಲದೆ, ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕ್ಯಾಲೋರಿಗಳನ್ನು ಖರ್ಚು ಮಾಡಿ ಫಿಟ್‌ನೆಸ್‌ ಕಾಪಾಡಲು ಸಹಕರಿಸುತ್ತದೆ ಎನ್ನುವುದು ಇದನ್ನು ಬಳಸುವವರ ಅಭಿಪ್ರಾಯ. ಬುಲೆಟ್‌ ಪ್ರೂಫ್ ಕಾಫಿ ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದರಿಂದ ಅನೇಕರು ಉಪಾಹಾರಕ್ಕೆ ಬದಲಿ ಆಹಾರವಾಗಿಯೂ ಸೇವಿಸುತ್ತಾರೆ.

ಎಲ್ಲಿ?: ಫ‌ಲದ ಪ್ಯೂರ್‌ಶ್ಯೂರ್‌ ಕೆಫೆ, ನಂ.43 ಶಾಪೂರ್‌ ಆರ್ಕೆàಡ್‌, 27ನೇ ಕ್ರಾಸ್‌, 7ನೇ ಮುಖ್ಯರಸ್ತೆ, ಜಯನಗರ 4ನೇ ಹಂತ.

ಸಂಪರ್ಕ: 9900039403

Advertisement

Udayavani is now on Telegram. Click here to join our channel and stay updated with the latest news.

Next