Advertisement

ಕುತುಬ್ ಮಿನಾರ್ ಉತ್ಖನನಕ್ಕೆ ಅವಕಾಶ ನೀಡಲ್ಲ: ಕೋರ್ಟ್ ಗೆ ಎಎಸ್ಐ ಲಿಖಿತ ಉತ್ತರ

11:57 AM May 24, 2022 | Team Udayavani |

ನವದೆಹಲಿ: ಜ್ಞಾನವಾಪಿ ಮಸೀದಿ ಬಳಿಕ ದಿಲ್ಲಿಯ ಜಗದ್ವಿಖ್ಯಾತ ಕುತುಬ್ ಮಿನಾರ್ ಕೂಡಾ ಹಿಂದೂ ಸ್ಮಾರಕ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎಎಸ್ ಐ) ಮಂಗಳವಾರ (ಮೇ 24) ಸಾಕೇತ್ ಕೋರ್ಟ್ ಗೆ ಸಲ್ಲಿಸಿರುವ ಲಿಖಿತ ಉತ್ತರದಲ್ಲಿ, ಕುತುಬ್ ಮಿನಾರ್ ಪ್ರದೇಶದಲ್ಲಿನ ದೇವಾಲಯ ಪುನರೂರ್ಜಿತಗೊಳಿಸುವುದಾಗಲಿ, ಉತ್ಖನನ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

Advertisement

ಕೋರ್ಟ್ ಗೆ ಸಲ್ಲಿಸಿದ ಉತ್ತರದಲ್ಲೇನಿದೆ?

ಕುತುಬ್ ಮಿನಾರ್ 1914ರಿಂದಲೂ ಸಂರಕ್ಷಿತ ಸ್ಮಾರಕವಾಗಿದೆ. ಅಲ್ಲದೇ ಕುತುಬ್ ಮಿನಾರ್ ಸ್ಮಾರಕವನ್ನು ಈಗ ಬದಲಾಯಿಸಲು ಸಾಧ್ಯವಿಲ್ಲ. ಸ್ಮಾರಕಕ್ಕೆ ಸಂರಕ್ಷಿತ ಸ್ಥಾನಮಾನ ನೀಡಿರುವ ಸಂದರ್ಭದಲ್ಲಿ ಸ್ಮಾರಕದೊಳಗೆ ಪೂಜೆ ಅಥವಾ ಉತ್ಖನನ ನಡೆಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಲಿಖಿತ ಉತ್ತರದಲ್ಲಿ ಹೇಳಿದೆ.

ಇದನ್ನೂ ಓದಿ:ಬದಲಾಯ್ತು ಬಿಜೆಪಿ ಪಟ್ಟಿ: ಲಕ್ಷ್ಮಣ ಸವದಿ, ಹೇಮಲತಾ ನಾಯಕ್ ಗೆ ಪರಿಷತ್ ಟಿಕೆಟ್

ಹಿಂದೂ ಪರ ಅರ್ಜಿದಾರರ ಮನವಿಯನ್ನು ಕಾನೂನು ಪ್ರಕಾರವಾಗಿ ನಿರ್ವಹಿಸಲು ಸಾಧ್ಯವಿಲ್ಲ. ಕುತುಬ್ ಮಿನಾರ್ ಸಂಕೀರ್ಣವನ್ನು ಕಟ್ಟಲು ಪುರಾತನ ದೇವಾಲಯವನ್ನು ನಾಶಪಡಿಸಿರುವುದು ಐತಿಹಾಸಿಕ ಸತ್ಯವಾಗಿದೆ. ಕುತುಬ್ ಮಿನಾರ್ ಸಂಕೀರ್ಣ 1914ರಿಂದ ಸಂರಕ್ಷಿತ ಸ್ಮಾರಕವಾಗಿದೆ. ಈ ನಿಟ್ಟಿನಲ್ಲಿ ಕುತುಬ್ ಮಿನಾರ್ ಸಂಕೀರ್ಣದೊಳಗೆ ಪೂಜೆ ಸಲ್ಲಿಸುವ ಹಕ್ಕು ಯಾರಿಗೂ ಇಲ್ಲ ಎಂದು ತಿಳಿಸಿದೆ.

Advertisement

ಕುತುಬ್ ಮಿನಾರ್ ಅನ್ನು ವಿಷ್ಣು ಸ್ತಂಭ ಎಂದು ಮರುನಾಮಕರಣ ಮಾಡಬೇಕು. ಇದು ಕೂಡಾ ಹಿಂದೂ ದೇವಾಲಯವಾಗಿರುವುದಾಗಿ ಹಿಂದೂ ಸಂಘಟನೆಗಳು ಎರಡು ವಾರಗಳ ಹಿಂದೆ ಪ್ರತಿಭಟನೆ ನಡೆಸಿದ್ದವು. ನಂತರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಾಜಿ ಅಧಿಕಾರಿ ಧರಮ್ ವೀರ್ ಶರ್ಮಾ ಎಂಬುವರು, ಇದು ಕುತ್ಬುದ್ದೀನ್ ಐಬಕ್ ಕಟ್ಟಿಸಿದ ಮಿನಾರ್ ಅಲ್ಲ, ರಾಜಾ ವಿಕ್ರಮಾದಿತ್ಯ ಕಟ್ಟಿದ ಸೂರ್ಯ ಗೋಪುರ ಎಂದು ಹೇಳಿದ್ದರು.

ಈ ವಿವಾದದ ನಂತರ ಕೇಂದ್ರ ಸಂಸ್ಕೃತಿ ಸಚಿವಾಲಯ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಮೇ 21ರಂದು ಐತಿಹಾಸಿಕ ಸ್ಮಾರಕಕ್ಕೆ ನಾಲ್ವರು ಎಎಸ್ ಐ ಅಧಿಕಾರಿಗಳು ಹಾಗೂ ಸಂಶೋಧಕರ ಜತೆ ಭೇಟಿ ನೀಡಿದ್ದ ಬೆನ್ನಲ್ಲೇ ಉತ್ಖನನ ನಡೆಸುವಂತೆ ಸಂಸ್ಕೃತಿ ಸಚಿವಾಲಯ ಎಎಸ್ ಐಗೆ ಸೂಚನೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next