Advertisement
ಕಲ್ಪತರು ನಾಡಿನಲ್ಲಿ ಕಳೆದ ಒಂದು ತಿಂಗಳಿನಿಂದ ಚುನಾವಣಾ ರಣರಂಗದ ಕಾವು ತಾರಕಕ್ಕೇರಿ ಮೇ.12 ರಂದು ಅಭ್ಯರ್ಥಿಗಳ ನಡುವೆ ಅದೃಷ್ಟ ಪರೀಕ್ಷೆಯ ಚುನಾವಣಾ ಸಮರ ಮುಗಿದಿದ್ದು, ಈ ಸಮರದಲ್ಲಿ ಗೆಲುವು ಸಾಧಿಸಲು ಕಳೆದ ಒಂದು ತಿಂಗಳಿನಿಂದ ನಿರಂತರ ಹೋರಾಟ ನಡೆಸಿದ್ದ ಅಭ್ಯರ್ಥಿಗಳು ಚುನಾವಣೆ ಮುಗಿದ ಮಾರನೆಯ ದಿನ ತಮ್ಮ ಕುಟುಂಬದೊಂದಿಗೆ ತಮಗಾಗಿ ಶ್ರಮಿಸಿದ ಕಾರ್ಯಕರ್ತರೊಂದಿಗೆ ಆರಾಮವಾಗಿ ಕಾಲ ಕಳೆಯುತ್ತಿದ್ದುದು ಕಂಡು ಬಂದಿತು.
Related Articles
Advertisement
ಜ್ಯೋತಿಗಣೇಶ್ ಸಂತಸ: ಈಗ ಚುನಾವಣೆ ಮುಗಿದ ಹಿನ್ನಲೆಯಲ್ಲಿ ತಮ್ಮ ಕುಟುಂಬದೊಂದಿಗೆ ಜ್ಯೋತಿಗಣೇಶ್ ಭಾನುವಾರ ಸಂತಸದ ಕ್ಷಣಗಳನ್ನು ಹಂಚಿಕೊಂಡು ಜೊತೆಯಲ್ಲಿದ್ದರು. ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ ಕಳೆದ ಒಂದೂವರೆ ತಿಂಗಳಿನಿಂದ ದಿನಪತ್ರಿಕೆಗಳನ್ನು ಓದಲು ಸಾಧ್ಯವೇ ಆಗುತ್ತಿರಲಿಲ್ಲ.
ಇಂದು ಸ್ವಲ್ಪ ಆರಾಮವಾಗಿದೆ. ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದಿಸುವ ಕೆಲಸ ಮಾಡುತ್ತಾ ಮನೆಯವರೊಂದಿಗೆ ಬೆರೆತು ಹೋಗಿದ್ದೇನೆ. ಈ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ ಎನ್ನುವ ವಿಶ್ವಾಸ ನನಗಿದೆ ಎಲ್ಲ ಕಡೆ ಉತ್ತಮ ಪ್ರತಿಕ್ರಿಯೇ ಬರುತ್ತಿದೆ ಎಂದು ತಮ್ಮ ಸಂತಸ ಹಂಚಿಕೊಂಡರು.
ಕುಟುಂಬದೊಂದಿಗೆ ಕಾಲ ಕಳೆದ ರಫೀಕ್: ಇದೇ ರೀತಿಯಲ್ಲಿ ಕಳೆದ ಒಂದು ತಿಂಗಳಿನಿಂದಲೂ ಚುನಾವಣಾ ಪ್ರಚಾರದಲ್ಲಿ ಧುಮುಕಿ ಗೆಲುವಿಗೆ ಸಮರ ನಡೆಸಿದ್ದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಡಾ. ಎಸ್ ರಫೀಕ್ ಅಹಮದ್ ಕಾರ್ಯಕರ್ತರೊಂದಿಗೆ ಮತ ಎಣಿಕೆ ಕುರಿತು ಸ್ವಲ್ಪ ಚರ್ಚೆ ನಡೆಸಿ ನಂತರ ತಮ್ಮ ಪತ್ನಿ ಆಯಿಷಾ ರೊಂದಿಗೆ ಸಂತಸದಿಂದ ಕಾಲ ಕಳೆದರು.
ಇಷ್ಟು ದಿನ ಚುನಾವಣೆಯ ಗುಂಗಿನಲ್ಲಿದ್ದು, ಇಂದು ಸ್ವಲ್ಪ ರಿಲ್ಯಾಕ್ಸ್ ಆಗಿದೆ ಎನ್ನುವ ರಫೀಕ್ ಈ ಭಾರಿ ಚುನಾವಣೆ ನನಗೆ ಖುಷಿ ತರಲಿದೆ. ನಗರದ ಮತದಾರರು ನನ್ನ ಕೈಹಿಡಿದಿದ್ದಾರೆ. ಎನ್ನುವ ಆಶಾಭಾವನೆ ಹೊಂದಿದ್ದಾರೆ.
ಅದೇ ರೀತಿಯಲ್ಲಿ ಜಿಲ್ಲೆಯ ವಿವಿಧ ರಾಜಕಾರಣಿಗಳು ಚುನವಣೆಯಲ್ಲಿ ಈವೆಗೂ ಬ್ಯುಸಿಯಾಗಿ ಭಾನುವಾರ ಆರಾಮಾಗಿ ಕಾರ್ಯಕರ್ತರೊಂದಿಗೆ ಚುನಾವಣೆ ನಡೆದಿರುವ ಬಗ್ಗೆ ಯಾವ ಮತಗಟ್ಟೆಯಲ್ಲಿ ಎಷ್ಟು ಮತಗಳು ಬರಬಹುದು ಎನ್ನುವ ಲೆಕ್ಕಾಚಾರವನ್ನು ಹಾಕುತ್ತಿದ್ದಾರೆ. ಕೆಲವರು ಫೋನ್ ಸಂಪರ್ಕಕ್ಕೆ ಸಿಗದೆ ವಿಶ್ರಾಂತಿಗಾಗಿ ತೆರಳಿದ್ದಾರೆ. ಚುನಾವಣೆಯ ಗುಂಗಿನಿಂದ ಹೊರ ಬಂದು ಸಂತಸದ ಕ್ಷಣವನ್ನು ಭಾನುವಾರ ಅಭ್ಯರ್ಥಿಗಳು ಕುಟುಂಬದೊಂದಿಗೆ ಕಳೆದರು.
* ಚಿ.ನಿ. ಪುರುಷೋತ್ತಮ್