Advertisement
ತಾಲೂಕಿನ 27 ಗ್ರಾಮ ಪಂಚಾಯಿತಿಗಳ 489 ಸ್ಥಾನಗಳಿಗೆ ಡಿ. 22ರಂದು ಚುನಾವಣೆನಡೆಯಲಿದೆ. ಮಾಜಿ ಸದಸ್ಯರ ಜತೆಗೆ ಹೊಸಬರು ಹೆಚ್ಚಾಗಿ ಸ್ಪರ್ಧಿಸುತ್ತಿರುವುದು ಕಂಡುಬರುತ್ತಿದೆ.ಹಳ್ಳಿ ರಾಜಕಾರಣ ದಿನದಿಂದ ದಿನಕ್ಕೆ ರಂಗೇರುತ್ತಿದೆ.ಅನೇಕ ಹಳ್ಳಿಗಳಲ್ಲಿ ಜಾತಿ ಮತ್ತು ಕೋಮು ಆಧಾರಿತಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಕೆಲವು ಗ್ರಾಮಗಳಲ್ಲಿ ಸ್ಪರ್ಧಾಕಾಂಕ್ಷಿಗಳು ಅವಿರೋಧ ಆಯ್ಕೆಗೆ ಕಸರತ್ತು ನಡೆಸಿದ್ದರು. ದೇವಸ್ಥಾನ ಅಭಿವೃದ್ಧಿ ಸಮಿತಿಗೆಲಕ್ಷಾಂತರ ರೂ. ಹಣ ನೀಡಲು ಮುಂದಾಗಿದ್ದಾರೆ. ಹಳ್ಳಿಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ನರೇಗಾ ಯೋಜನೆಯಲ್ಲಿ ಕೃಷಿ ಜಮೀನು ಬದು ನಿರ್ಮಾಣ, ಕೃಷಿ ಹೊಂಡ, ಎರೆಹುಳು ತೊಟ್ಟಿ, ಬಚ್ಚಲುಗುಂಡಿ,ಪೌಷ್ಠಿಕ ಕೈತೋಟ, ತೆಂಗುಪುನಶ್ಚೇತನ, ತೆಂಗು ಪ್ರದೇಶವಿಸ್ತರಣೆ, ಬಾಳೆ, ಮಾವು, ಸಪೋಟ, ಸೀಬೆ, ನುಗ್ಗೆ, ಹುಣಸೆ, ಡ್ರ್ಯಾಗನ್ ಫ್ರೊಟ್, ದಾಳಿಂಬೆ, ಪಪ್ಪಾಯ ಬೆಳೆಯಲು, ರೇಷ್ಮೆಹುಳು ಸಾಕಾಣಿಕೆ, ದನದ ಕೊಟ್ಟಿಗೆ, ಕುರಿಶೆಡ್ ನಿರ್ಮಾಣ ಮತ್ತು ಕಲ್ಯಾಣಿ ಪುನಶ್ಚೇತನ, ಆಟದ ಮೈದಾನ ನಿರ್ಮಾಣ, ಕೆರೆ ಹೂಳೆತ್ತುವುದು, ರಾಜಕಾಲುವೆ ಅಭಿವೃದ್ಧಿ ಕೆಲಸಕ್ಕೆ ಅವಕಾಶ ನೀಡಲಾಗುತ್ತಿದೆ. ನರೇಗಾ ಯೋಜನೆಗೆ ಗ್ರಾಮ ಪಂಚಾಯಿತಿಗಳಿಗೆ ದೊಡ್ಡಮಟ್ಟದ ಅನುದಾನ ಮಂಜೂರಾಗುತ್ತಿದೆ. ಇಂಥ ಕಾಮಗಾರಿಗಳ ಅನುಮೋದನೆ ನೀಡುವಲ್ಲಿ ಗ್ರಾಪಂ ಸದಸ್ಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
Related Articles
Advertisement
-ಆರ್.ಬಸವರೆಡ್ಡಿ ಕರೂರು